Times of Deenabandhu
  • Home
  • ಜಿಲ್ಲೆ
  • ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ದ್ವಾದಶಾಬ್ದ ಮಹಾಕುಂಭಾಭಿಷೇಕ
ಜಿಲ್ಲೆ ಮಂಡ್ಯ

ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ದ್ವಾದಶಾಬ್ದ ಮಹಾಕುಂಭಾಭಿಷೇಕ

ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ದಿನಾಂಕ 02.03.2020 ರಿಂದ 10.03.2020 ರವರಗೆ ನಡೆಯುವ ಶ್ರೀ ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ದ್ವಾದಶಾಬ್ದ ಮಹಾಕುಂಭಾಭಿಷೇಕ ಎರಡುನೇ ದಿನವಾದ ಇಂದು    ಜೋಗಪ್ಪಗಳ ಸಮಾವೇಶ ಕಾರ್ಯಕ್ರಮ ಮತ್ತು ಮಹಾಕುಂಭಾಭಿಷೇಕ ಪೂಜಾ  ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಈ ಸಮಾರಂಭದಲ್ಲಿ   ಕೋಡಿಮಠ ಪೀಠಾಧ್ಯಕ್ಷರಾದ  ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರು,  ಶ್ರೀ ಗುರುಗುಂಡ ಬ್ರಹ್ಮಾಂಡೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮಿಗಳವರು, ಶ್ರೀ ಮಾದಾರ ಚನ್ನಯ್ಯ ಗುರುಪೀಠ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ,ಬಸವಮೂರ್ತಿ  ಮಾದಾರ ಚನ್ನಯ್ಯ ಮಹಾಸ್ವಾಮಿಗಳವರು, ಆರ್ಟ್ ಆಫ್ ಲಿವಿಂಗ್  ಆಶ್ರಮದ  ಪೂಜ್ಯ ಶ್ರೀ ಶ್ರೀ ವಿಷ್ಣುಪಾದ ಸ್ವಾಮಿಗಳವರು ಮತ್ತು ಪ್ರೋ,ಕೃಷ್ಣೇಗೌಡರವರು,  ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಲ್ಲಾ ಶಾಖಾ ಮಠದ ಪೂಜ್ಯ ಸ್ವಾಮೀಜಿಗಳವರು ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

 

 

 

 

 

 

 

 

 

Related posts

ಯಶಸ್ಸು ಕಾಣಲು ತಮ್ಮ ಶ್ರಮದ ಜತೆಗೆ ದೇವರ ಅನುಗ್ರಹವಿರಬೇಕು: ಎಂ.ಪಿ.ಕುಮಾರಸ್ವಾಮಿ

Times fo Deenabandhu

ಕೊರೋನಾ ವೈರಸ್ ಸೋಂಕಿನ ಬಗ್ಗೆ ಮುಂಜಾಗ್ರತೆ ಅಗತ್ಯ: ನ್ಯಾಯಾಧೀಶ ಕೆ. ಸಿದ್ಧರಾಮಪ್ಪ

Times fo Deenabandhu

 ಕುವೆಂಪು ತತ್ವಗಳಿಂದ ’ಸರ್ವೋದಯ’ ಸಾಧ್ಯ: ಪ್ರೊ. ಚಿದಾನಂದಗೌಡ

Times fo Deenabandhu