Times of Deenabandhu
  • Home
  • ಪ್ರಧಾನ ಸುದ್ದಿ
  • ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮಾ.3ರ ಮುಂಜಾನೆ ಇಲ್ಲ ಗಲ್ಲು; ಮರಣದಂಡನೆ ಮುಂದೂಡಿದ ದೆಹಲಿ ಕೋರ್ಟ್​
ಕ್ರೈಮ್ ಪ್ರಧಾನ ಸುದ್ದಿ ಮುಖ್ಯಾಂಶಗಳು

ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮಾ.3ರ ಮುಂಜಾನೆ ಇಲ್ಲ ಗಲ್ಲು; ಮರಣದಂಡನೆ ಮುಂದೂಡಿದ ದೆಹಲಿ ಕೋರ್ಟ್​

Spread the love

ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲು ಶಿಕ್ಷೆ ಮತ್ತೊಮ್ಮೆ ಮುಂದಕ್ಕೆ ಹೋಗಿದೆ. ಈ ಹಿಂದೆ ದೆಹಲಿ ಕೋರ್ಟ್​ ನೀಡಿದ್ದ ಡೆತ್​ ವಾರೆಂಟ್​ ಅನ್ವಯ ಮಾರ್ಚ್​ 3(ನಾಳೆ)ರಂದು ಮುಂಜಾನೆ 6ಗಂಟೆಗೆ ನಾಲ್ವರು ಅಪರಾಧಿಗಳು ಗಲ್ಲಿಗೇರಬೇಕಿತ್ತು. ಆದರೆ ಮತ್ತೊಮ್ಮೆ ದೆಹಲಿ ಪಟಿಯಾಲಾ ನ್ಯಾಯಾಲಯ ದಿನಾಂಕವನ್ನು ಮುಂದೂಡಿದೆ.

ಗಲ್ಲಿಗೇರುವ ದಿನ ಹತ್ತಿರ ಬರುತ್ತಿದ್ದಂತೆ ಅಪರಾಧಿ ಪವನ್​ ಕುಮಾರ್​ ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ್ದ. ಹಾಗೇ ತಾನು ದಯಾ ಅರ್ಜಿ ಸಲ್ಲಿಸಿದ್ದು, ಅದು ಇತ್ಯರ್ಥ ಆಗುವವರೆಗೆ ಮರಣದಂಡನೆಗೆ ತಡೆ ನೀಡಬೇಕು ಎಂದು ದೆಹಲಿ ಪಟಿಯಾಲಾ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಆ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಮರಣದಂಡನೆಯನ್ನು ಮುಂದೂಡಿ ಇಂದು ಆದೇಶ ನೀಡಿದ್ದಾರೆ.

ದೆಹಲಿ ಪಟಿಯಾಲಾ ಹೌಸ್​ ಕೋರ್ಟ್​ನ ಅಡಿಷನಲ್​ ಸೆಷನ್ಸ್​ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಪವನ್​ ಕುಮಾರ್​ ಅರ್ಜಿ ವಿಚಾರಣೆಯನ್ನು ಮುಂದೂಡುವ ಜತೆಗೆ, ಗಲ್ಲಿಗೇರಿಸುವ ದಿನವನ್ನೂ ಮುಂದೂಡಿದ್ದಾರೆ.
ಪವನ್​ ಕುಮಾರ್​ ಮೊದಲು ಸುಪ್ರಿಂಕೋರ್ಟ್​ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದ, ಅದು ತಿರಸ್ಕೃತವಾಗಿತ್ತು. ರಾಷ್ಟ್ರಪತಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯೂ ತಿರಸ್ಕೃತಗೊಂಡಿತ್ತು. ಮಾರ್ಚ್​ 3ರಂದು ಬೆಳಗ್ಗೆ ನಿಗದಿಯಾಗಿರುವ ಗಲ್ಲುಶಿಕ್ಷೆಗೆ ತಡೆ ನೀಡಬೇಕು ಎಂದು ಅಪರಾಧಿಗಳಾದ ಅಕ್ಷಯ್​ ಠಾಕೂರ್​, ಪವನ್​ ಗುಪ್ತಾ, ಮುಕೇಶ್​ ಸಿಂಗ್​ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ಬೆಳಗ್ಗೆಯಷ್ಟೇ ವಜಾಗೊಳಿಸಲಾಗಿತ್ತು. ಆದರೆ ಈಗ ಮತ್ತೆ ದೆಹಲಿ ಪಟಿಯಾಲಾ ಕೋರ್ಟ್​ ಗಲ್ಲುಶಿಕ್ಷೆಗೆ ತಡೆ ನೀಡಿದೆ.


Spread the love

Related posts

ಭೂಗತ ಪಾತಕಿ ರವಿ ಪೂಜಾರಿಯನ್ನು ಮಾ.7ರ ವರೆಗೆ ಪೊಲೀಸ್​ ವಶಕ್ಕೆ ನೀಡಿದ ಕೋರ್ಟ್​

Times fo Deenabandhu

ಐಶ್ವರ್ಯಾ ರೈ ಮ್ಯಾನೇಜರ್‌ರನ್ನು ಬೆಂಕಿಯಿಂದ ರಕ್ಷಿಸಿದ ಶಾರುಖ್‌ ಖಾನ್

Times fo Deenabandhu

ಡಿ.ಕೆ.ಶಿವಕುಮಾರ್‍ ಗೆ ಜಾಮೀನು ಮಂಜೂರು,…. ಡಿ.ಕೆ.ಸುರೇಶ್ ಕಣ್ಣೀರು…..

Times fo Deenabandhu
ut libero dolor. nunc libero. leo quis Aenean