Times of Deenabandhu
  • Home
  • ಪ್ರಧಾನ ಸುದ್ದಿ
  • ಪ್ರವೇಶ ಪತ್ರವನ್ನೇ ಬಿಟ್ಟು ಹೋಗಿ, ಕಂಗಾಲಾಗಿ ನಿಂತಿದ್ದ 10ನೇ ತರಗತಿ ವಿದ್ಯಾರ್ಥಿನಿ ನಿರಾತಂಕವಾಗಿ ಪರೀಕ್ಷೆ ಬರೆಯುವಂತೆ ಮಾಡಿದ್ದು ಟ್ರಾಫಿಕ್​ ಪೊಲೀಸ್ ಅಧಿಕಾರಿ…
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಪ್ರವೇಶ ಪತ್ರವನ್ನೇ ಬಿಟ್ಟು ಹೋಗಿ, ಕಂಗಾಲಾಗಿ ನಿಂತಿದ್ದ 10ನೇ ತರಗತಿ ವಿದ್ಯಾರ್ಥಿನಿ ನಿರಾತಂಕವಾಗಿ ಪರೀಕ್ಷೆ ಬರೆಯುವಂತೆ ಮಾಡಿದ್ದು ಟ್ರಾಫಿಕ್​ ಪೊಲೀಸ್ ಅಧಿಕಾರಿ…

ಕೋಲ್ಕತ್ತ: ಆಕೆ 10ನೇ ತರಗತಿ ವಿದ್ಯಾರ್ಥಿನಿ. ರಾಜ್ಯ ಪ್ರೌಢಶಿಕ್ಷಣ ಮಂಡಳಿ ನಡೆಸುವ ಮಾಧ್ಯಮಿಕ ಪರೀಕ್ಷೆಗೆ ಪ್ರವೇಶ ಪತ್ರ ತೆಗೆದುಕೊಂಡು ಹೋಗುವುದನ್ನು ಮರೆತು ಕಂಗಾಲಾಗಿದ್ದಳು. ಆದರೆ ಟ್ರಾಫಿಕ್​ ಪೊಲೀಸ್​ ಹಿರಿಯ ಅಧಿಕಾರಿಯೋರ್ವರು ಆಕೆಯ ಸಹಾಯಕ್ಕೆ ನಿಂತು, ಪರೀಕ್ಷೆಯನ್ನು ಬರೆಯುವಂತೆ ಮಾಡಿದ್ದಾರೆ.

ಸುಮನ್​ ಕುರ್ರೆ ಎಂಬಾಕೆ 10ನೇ ತರಗತಿ ವಿದ್ಯಾರ್ಥಿನಿ. ಈಕೆಗೆ ಸೋಮವಾರ ಗಣಿತ ವಿಷಯದ ಪರೀಕ್ಷೆ ಇತ್ತು. ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರಕ್ಕೇನೋ ಹೋದಳು. ಆದರೆ ಅಲ್ಲಿ ಹೋದ ಮೇಲೆ ಪ್ರವೇಶ ಪತ್ರ ತೆಗೆಯಲು ನೋಡಿದರೆ ಅದನ್ನೇ ಮರೆತು ಹೋಗಿದ್ದಳು. ಅದಿಲ್ಲದ ಕಾರಣ ಆಕೆಗೆ ಪರೀಕ್ಷಾ ಹಾಲ್​ಗೆ ಪ್ರವೇಶ ನಿರಾಕರಿಸಲಾಯಿತು.

ಸುಮನ್​ ಹೊರಬಂದು, ಪರೀಕ್ಷಾ ಕೇಂದ್ರದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಹಿರಿಯ ಅಧಿಕಾರಿ ಚೈತನ್ಯ ಮಲ್ಲಿಕ್​ಗೆ ವಿಷಯ ತಿಳಿಸಿದಳು.

ವಿದ್ಯಾರ್ಥಿನಿಯ ಮನೆ ಇರುವುದು ಕೋಲ್ಕತ್ತ ಸಾಹಿತ್ಯ ಪರಿಷತ್​ ರಸ್ತೆ ಖನ್ನಾ ಕ್ರಾಸ್​ನಲ್ಲಿ. ಹಾಗೇ ಪರೀಕ್ಷಾ ಕೇಂದ್ರ ಇರುವುದು ಮಾಣಿಕ್ತಾಲ ಬಳಿಯ ಜೈಸ್ವಾಲ್ ಬಾಲಕಿಯರ ವಿದ್ಯಾಮಂದಿರದಲ್ಲಿ. ಎರಡೂ ಸ್ಥಳಗಳ ನಡುವಿನ ಅಂತರ ಸುಮಾರು 5ಕಿ.ಮೀ. ಆಗಿದ್ದು ವಿದ್ಯಾರ್ಥಿನಿಗೆ ಹೋಗಿ ಬರಲು ಸಾಧ್ಯ ಆಗುತ್ತಿರಲಿಲ್ಲ. ಹೀಗಾಗಿ ಬಾಲಕಿ ಆತಂಕ ವ್ಯಕ್ತಪಡಿಸುತ್ತಲೇ ಪೊಲೀಸ್​ ಅಧಿಕಾರಿ ಹೆಚ್ಚೇನೂ ಯೋಚಿಸದೆ ಆಕೆಯ ತಾಯಿಯ ಫೋನ್​ ನಂಬರ್​ ಕೇಳಿಕೊಂಡು ಫೋನ್​ ಮಾಡಿದರು. ಅದಾದ ಬಳಿಕ ಸೀದಾ ಅವರ ಮನೆಗೆ ಹೋಗಿ, ವಿದ್ಯಾರ್ಥಿನಿಯ ಪ್ರವೇಶ ಪತ್ರ ಸರಿಯಾದ ಸಮಯದಲ್ಲಿಯೇ ತಂದುಕೊಟ್ಟಿದ್ದಾರೆ.

ಬಳಿಕ ಸುಮನ್​ ನಿರಾತಂಕವಾಗಿ ಪರೀಕ್ಷೆ ಮುಗಿಸಿದ್ದಾರೆ. ನಾನು ನನ್ನ ಇಡೀ ಜೀವನ ಪೊಲೀಸ್​ ಅಧಿಕಾರಿಗೆ ಋಣಿಯಾಗಿರುತ್ತೇನೆ. ನಾನು ಚೆನ್ನಾಗಿಯೇ ಪರೀಕ್ಷೆ ಬರೆದೆ. ಇದು ಸಾಧ್ಯವಾಗಿದ್ದು ಪೊಲೀಸ್ ಅಧಿಕಾರಿಯಿಂದ ಎಂದು ಸುಮನ್​ ಹೇಳಿದ್ದಾರೆ.

ಪೊಲೀಸ್​ ಆಫೀಸರ್​ ಮಾಡಿದ ಈ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಸಚಿವರ ಖಾತೆ ಬದಲಾವಣೆ ಮಾಡಿದ ಸಿಎಂ ಯಡಿಯೂರಪ್ಪ: ಪರಿಷ್ಕೃತ ಪಟ್ಟಿ ರಾಜ್ಯಪಾಲರ ಅಂಕಿತಕ್ಕೆ ರವಾನೆ

Times fo Deenabandhu

ಬಿಎಸ್‌ವೈ @ 78, ‘ದಣಿವರಿಯದ ನಾಯಕ’ನ ಅದ್ಧೂರಿ ಹುಟ್ಟುಹಬ್ಬಕ್ಕೆ ವಿಜಯೇಂದ್ರ ಸಾರಥ್ಯ

Times fo Deenabandhu

ಅಬ್ಬಾ..! ಎಂತಹ ಪ್ರತಿಸ್ಪಂದನೆ – ಕೇವಲ 3 ತಿಂಗಳಲ್ಲಿ 1 ಲಕ್ಷ ವೀಕ್ಷಕರು

Times fo Deenabandhu