Times of Deenabandhu
  • Home
  • ಮುಖ್ಯಾಂಶಗಳು
  • ಮುಂಬರುವ ಚುನಾವಣೆಯಲ್ಲಿ ಜೆಡಿಎಸ್​ ಪರ ಕಾರ್ಯ ತಂತ್ರ ರೂಪಿಸಲಿದ್ದಾರೆ ಚುನಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​!
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್​ ಪರ ಕಾರ್ಯ ತಂತ್ರ ರೂಪಿಸಲಿದ್ದಾರೆ ಚುನಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​!

ಬೆಂಗಳೂರು: ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್​ ಗೆಲುವು ಸಾಧಿಸಲು ಚುನಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​ ಕೆಲಸ ಮಾಡಲಿದ್ದಾರೆ.

ಚುನಾವಣೆಯಲ್ಲಿ ಜೆಡಿಎಸ್​ ಗೆಲವಿಗೆ ತಂತ್ರ ರೂಪಿಸಲು ಪ್ರಶಾಂತ್​ ಕಿಶೋರ್​ ಅವರೊಂದಿಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅವರನ್ನು ಭೇಟಿಯಾಗುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಪ್ರಶಾಂತ್​ ಕಿಶೋರ್​ ಅವರ ಸಂಪರ್ಕಿಸುವಂತೆ ಪಕ್ಷದ ಕೆಲ ಯುವ ಮುಖಂಡರು ಸಲಹೆ ನೀಡಿದ್ದರು. ಈಗ ಪಕ್ಷ ಅವರನ್ನು ಸಂಪರ್ಕಿಸಿದೆ ಎಂದು ಎಚ್​​ಡಿಕೆ ಹೇಳಿದರು.

ಇತ್ತೀಚೆಗೆ ದೆಹಲಿ ಚುನಾವಣೆಯಲ್ಲಿ ಆಪ್​ ಗೆಲುವಿಗೆ ಮತ್ತು ಈ ಹಿಂದೆ ಆಂಧ್ರಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ವೈಎಸ್​ಆರ್​ಪಿ ಪಕ್ಷ ಜಗನ್​ಮೋಹನ್​ ರೆಡ್ಡಿ ಗೆಲುವಿಗೆ ಪ್ರಶಾಂತ್​ ಕಾರ್ಯ ನಿರ್ವಹಿಸಿದ್ದರು.

ಜೆಡಿಎಸ್​ನ ಹಿರಿಯ ಮುಖಂಡ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರೇ ರಾಜ್ಯದ ಪಾಲಿಗೆ ಚುನಾವಣಾ ಚಾಣಕ್ಯ ಎಂದೆನಿಸಿಕೊಂಡಿದ್ದಾರೆ. ಆದರೆ ಅವರಂತಹ ಹಿರಿಯರೇ ಮುಂದಿನ ಬಾರಿ ಪ್ರಶಾಂತ್​ ಕಿಶೋರ್​ ಕಾರ್ಯತಂತ್ರ ರೂಪಿಸಲು ಸಮ್ಮತಿಸಿದ್ದಾರೆ.

Related posts

 ಕೊಡಗು: ಪ್ರಾಕೃತಿಕ ವಿಕೋಪದಿಂದ ₹ 600 ಕೋಟಿ ಹಾನಿ

Times fo Deenabandhu

 ಭೂಸೇನೆಗೆ ಮಹಿಳಾ ಬಲ

ಸಿದ್ಧಾರ್ಥರ ಕಾಫಿ ಡೇ ಸಾಮ್ರಾಜ್ಯ ರಕ್ಷಣೆಗೆ ಮುಂದಾದ ರಾಜ್ಯ ಸರ್ಕಾರ

Times fo Deenabandhu