Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ವಿದೇಶ

ತಾಜ್​ ಮಹಲ್​ ನೋಡಿದ ಟ್ರಂಪ್​ ದಂಪತಿಯ ಮೊದಲ ಪ್ರತಿಕ್ರಿಯೆ ಹೇಗಿತ್ತು?

ಆಗ್ರಾ: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್​ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲ್​ ಅನ್ನು ಇಂದು ಕಣ್ತುಂಬಿಕೊಂಡರು.

ಮೊದಲ ಬಾರಿಗೆ ತಾಜ್​ ಮಹಲ್​ ನೋಡಿದಾಗ ಟ್ರಂಪ್​ ದಂಪತಿಯ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಹೀಗಾಗಿ ಪ್ರವಾಸೋದ್ಯಮ ಸಚಿವಾಲಯದ ಟೂರಿಸ್ಟ್​ ಗೈಡ್​ ನಿತಿನ್​ ಕುಮಾರ್​ ಸಿಂಗ್​ ಎಲ್ಲರ ಕುತೂಹಲವನ್ನು ತಣಿಸಿದ್ದಾರೆ.

ನಿತಿನ್​ ಇಂದು ಟ್ರಂಪ್​ ದಂಪತಿಗೆ ಪ್ರೇಮಸೌಧದ ಇತಿಹಾಸವನ್ನು ಪರಿಚಯಿಸಿದರು. ಈ ಬಗ್ಗೆ ಮಾತನಾಡಿರುವ ಅವರು ತಾಜ್​ ಮಹಲ್​ ಕುರಿತಾದ ಒಂದೊಂದು ಕ್ಷಣದ ಮಾಹಿತಿಯನ್ನು ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯ ಟ್ರಂಪ್​ ಅವರಿಗೆ ನೀಡಿದ್ದೇನೆ ಎಂದು ತಿಳಿಸಿದರು.

ತಾಜ್​ ಮಹಲ್​ ನೋಡಿದ ತಕ್ಷಣ ಅತ್ಯದ್ಭುತ ಎಂದು ಹುಬ್ಬೇರಿಸಿದರು. ಅಲ್ಲದೆ, ಮತ್ತೊಮ್ಮೆ ಭೇಟಿ ನೀಡುವುದಾಗಿ ಟ್ರಂಪ್​ ದಂಪತಿ ಭರವಸೆ ನೀಡಿದರು ಎಂದು ಹೇಳಿದರು.

Related posts

 ಐಪಿಎಲ್​ ಮೊದಲ ಪಂದ್ಯ ಚೆನ್ನೈ ಸೂಪರ್​ ಕಿಂಗ್ಸ್​ ಮಡಿಲಿಗೆ; ಮುಂಬೈ ವಿರುದ್ಧ ಸುಲಭದ ಜಯ

Times fo Deenabandhu

ಡಿ.21ಕ್ಕೆ ‘ಕೆಜಿಎಫ್‌2’ ಫಸ್ಟ್‌ಲುಕ್‌

Times fo Deenabandhu

ಕೊರೊನಾ ಹೋರಾಟದ ನೇತೃತ್ವ..! ಭಾರತದ ದಶಕಗಳ ಕನಸು ನನಸಾಗುತ್ತಾ..?

Times fo Deenabandhu