Times of Deenabandhu
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

50 ವರ್ಷಗಳ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ಅಪರೂಪದ ರೈನ್​ ಬೋ ಸ್ನೇಕ್​!

ಫ್ಲೋರಿಡಾ: ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಅಪರೂಪದ ರೈನ್​ ಬೋ ಸ್ನೇಕ್​(ಮಳೆಬಿಲ್ಲು ಹಾವು) ಮೊದಲ ಬಾರಿಗೆ ಅಮೆರಿಕದ ಫ್ಲೋರಿಡಾದಲ್ಲಿರುವ ಓಕಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಪತ್ತೆಯಾಗುವ ಮೂಲಕ ಅಚ್ಚರಿ ಮೂಡಿಸಿದೆ.

ಫರಾನ್ಸಿಯಾ ಎರಿಟ್ರೋಗ್ರಾಮಾ ಎಂಬ ವರ್ಗಕ್ಕೆ ಸೇರುವ ರೈನ್​ ಬೋ ಸ್ನೇಕ್​ ಈ ಹಿಂದೆ 1969ರಲ್ಲಿ ಮರಿಯೋನ್​ ಕೌಂಟಿಯಲ್ಲಿ ಪತ್ತೆಯಾಗಿತ್ತು. ಈ ಹಾವನ್ನು ಅದರ ವಿಶೇಷ ಬಣ್ಣಗಳಿಂದಲೇ ಸುಲಭವಾಗಿ ಪತ್ತೆ ಹಚ್ಚಬಹುದು. ಹಾವಿನ ಬೆನ್ನು ನೀಲಿ ಮತ್ತು ಕಪ್ಪು ಬಣ್ಣದಿಂದ ಮಿನುಗುತ್ತದೆ. ಅಲ್ಲದೆ, ಅದರ ದೇಹದ ಉದ್ದಕ್ಕೂ ಮೂರು ಪ್ರಕಾಶಮಾನವಾದ ಕೆಂಪು ಪಟ್ಟೆಗಳು ಇವೆ.

ವಿಷಕಾರಿಯಲ್ಲದ ರೈನ್​ ಬೋ ಸ್ನೇಕ್​ನ ಫೋಟೋವನ್ನು ಇಬ್ಬರ ಮಹಿಳೆಯರು ಉದ್ಯಾನವನದಲ್ಲಿ ತಿರುಗಾಡುವಾಗ ಸೆರೆಹಿಡಿದಿದ್ದಾರೆ. ಈ ರೈನ್​​ ಬೋ ಸ್ನೇಕ್​ ತನ್ನ ಜೀವಿತಾವಧಿಯಲ್ಲಿ ಹೆಚ್ಚಾಗಿ ನೀರಿನಲ್ಲಿ ವಾಸಿಸುತ್ತದೆ. ಅದರಲ್ಲೂ ಹೆಚ್ಚಾಗಿ ಜಲಸಸ್ಯರಾಶಿಯ ನಡುವೆ ಜೀವಿಸುತ್ತದೆ. ಆಹಾರಕ್ಕಾಗಿ ಈಲ್​ ಮೀನುಗಳನ್ನು ತಿನ್ನುತ್ತದೆ. ಈ ಕಾರಣದಿಂದಲೇ ರೈನ್​ ಬೋ ಸ್ನೇಕ್​ ಕಾಣಸಿಗುವುದು ಅಪರೂಪವಾಗಿದೆ.

ವಯಸ್ಕ ರೈನ್​ ಬೋ ಸ್ನೇಕ್​ ಸುಮಾರು 100 ರಿಂದ 140 ಸೆಂಟಿಮೀಟರ್​ ಬೆಳೆಯುತ್ತದೆ. ಫ್ಲೋರಿಡಾದ ನ್ಯಾಚುರಲ್​ ಹಿಸ್ಟರಿ ಮ್ಯೂಸಿಯಂ ಪ್ರಕಾರ ಇದುವರೆಗೂ ಪತ್ತೆಯಾಗಿರುವ ರೈನ್​ ಬೋ ಹಾವಿನ ಉದ್ದ 167 ಸೆಂಟಿ ಮೀಟರ್​ ಆಗಿದೆ.

ಈ ಸರಿಸೃಪವು ಅಟ್ಲಾಂಟಿಕ್​ ಕರಾವಳಿಯ ವಿಶಾಲವಾದ ಬಯಲು ಮೈದಾನದಲ್ಲಿ ಜೀವಿಸುತ್ತದೆ. ಇದು ಪೂರ್ವ ಲೂಯಿಸಿಯಾನದಿಂದ ದಕ್ಷಿಣ ಮೇರಿಲ್ಯಾಂಡ್ ವರೆಗೂ ತನ್ನ ಕ್ಷೇತ್ರವನ್ನು ವ್ಯಾಪಿಸಿಕೊಂಡಿದೆ.

Related posts

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಕಮಲ್ ನಾಥ್

Times fo Deenabandhu

 ಸೋಮವಾರದಿಂದ ಐದು ದಿನ ಭಾರಿ ಮಳೆ

ಕೊರೊನಾ ವಿರುದ್ಧ ಅಮೆರಿಕಾ-ಭಾರತ ಒಗ್ಗಟ್ಟಿನ ಹೋರಾಟ: ಟ್ರಂಪ್‌-ಮೋದಿ ನಿರ್ಧಾರ