Times of Deenabandhu
ಇತರೆ ಜಿಲ್ಲೆಗಳು ಜಿಲ್ಲೆ ಧರ್ಮ

ಶರಣ ಸಂಸ್ಕೃತಿಯ ಬಸವ ಉತ್ಸವ ಸಮಾರೋಪ

Spread the love

ಕಲ್ಯಾಣ ಹೆಬ್ಬಾಳು (ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕು) :  ಇಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿಯ ಬಸವ ಉತ್ಸವದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಶ್ರೀಮಠದ ಪಟ್ಟಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಇತಿಹಾಸ ಕೇವಲ ಉತ್ಖನನಕ್ಕೆ, ಅಧ್ಯಯನಕ್ಕೆ, ಪರೀಕ್ಷೆಗಳನ್ನು ಬರೆಯಲಿಕ್ಕೆ ಮಾತ್ರ ಸೀಮಿತವಾಗಬಾರದು. ಇತಿಹಾಸದ ಬೆಳಕಿನಲ್ಲಿ ವರ್ತಮಾನದ ಅಂಧಕಾರವನ್ನು ಕಳೆದುಕೊಳ್ಳಬೇಕು. ೧೨ ನೆಯ ಶತಮಾನದ ಬಸವಕಲ್ಯಾಣ ಇಂದು ಕಲ್ಯಾಣ ಹೆಬ್ಬಾಳಾಗಲು ಪ್ರೇರಕವಾಗಿ ಇತಿಹಾಸಕ್ಕೊಂದು ಹೊಸ ವ್ಯಾಖ್ಯಾನ ಬರೆದಿದೆ. ಹೆಬ್ಬಾಳು ೪೦೦-೫೦೦ ಮನೆಗಳ ಚಿಕ್ಕ ಹಳ್ಳಿ. ಶರಣ ಬಸವರಾಜ ಪಂಡಿತ ಅವರ ಪರಿಶ್ರಮದಿಂದಾಗಿ ೪೦೦ ಮನೆಗಳ ಪ್ರತಿಯೊಬ್ಬರೂ ಇಷ್ಟಲಿಂಗಧಾರಿಗಳಾಗಿದ್ದಾರೆ. ದಿನವೂ ಪೂಜೆ ಮಾಡಿಕೊಳ್ಳುವುದಲ್ಲದೆ ೧೨ ನೆಯ ಶತಮಾನದ ಶರಣರಂತೆ ವ್ಯಕ್ತಿತ್ವವನ್ನು ಕಟ್ಟಿಕೊಂಡಿದ್ದಾರೆ. ‘ಓಂ ಶ್ರೀ ಗುರು ಬಸವಲಿಂಗಾಯನಮಃ’ ಮಂತ್ರ ಪ್ರತಿಯೊಬ್ಬರ ಉಸಿರಾಗಿದೆ. ಇಲ್ಲಿನ ಎರಡು ವರ್ಷದ ಪುಟ್ಟ ಬಾಲಕಿ ‘ಭವಿ-ಭಕ್ತನ’ ನಡುವಿನ ವ್ಯತ್ಯಾಸವನ್ನು ಗುರುತಿಸಿ ಹೇಳುವುದು ನಮಗೆ ಸೋಜಿಗ ತಂದಿದೆ. ಇಲ್ಲಿ ನಿತ್ಯ ಶರಣ ಸಂಸ್ಕೃತಿಯ ಬಸವ ಬೆಳಗು ಬೆಳಗುತ್ತಿರುವುದು ಚೇತೋಹಾರಿಯಾಗಿದೆ, ಮಠ-ಪೀಠಗಳಿಗೆ ಮಾದರಿಯಾಗಿದೆ. ಮನುಷ್ಯ ಕೆಟ್ಟವನಾಗಲು ಕೆಟ್ಟ ಕೆಲಸವನ್ನೇ ಮಾಡಬೇಕೆಂದೇನೂ ಇಲ್ಲ. ಸದಾ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೂ ಕೆಲವರಿಗೆ ಕೆಟ್ಟವರಾಗಿ ಕಾಣುವ ಸಾಧ್ಯತೆ ಇರುತ್ತದೆ. ಒಳ್ಳೆಯ ಕಾರ್ಯಗಳಿಗೆ ಸದಾ ವಿಘ್ನಗಳು ಇದ್ದೇ ಇರುತ್ತವೆ. ಬಂದ ಆಪತ್ತುಗಳನ್ನೇ ಸವಾಲಾಗಿ ಸ್ವೀಕರಿಸಿದರೆ ಬಸವಣ್ಣನೇ ಕೈ ಹಿಡಿದು ಎತ್ತಿಕೊಳ್ಳುವನು ಎನ್ನುವ ವಿಶ್ವಾಸ ನಮ್ಮದು. ಈ ನಿಟ್ಟಿನಲ್ಲಿ ೧೨ ನೆಯ ಶತಮಾನದ ಶರಣರ ಬದುಕು-ಬರಹ ನಮಗೆ ಮಾರ್ಗದರ್ಶಿಯಾದುದು ಎಂದರು.
ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಎಸ್ ಎಂ ಜಾಮದಾರ್ ಮತ್ತು ಬಸವರಾಜ ಪಂಡಿತ್ ಮಾತನಾಡಿದರು. ಶಿವಸಂಚಾರದ ನಾಟಕಗಳನ್ನು ಪ್ರದರ್ಶಿಸಲಾಯಿತು.


Spread the love

Related posts

ಎಷ್ಟೋ ಬಾರಿ ಹೆಚ್ಚು ಅಂಕಗಳನ್ನು ಗಳಿಸಿದರು ಉದ್ಯೋಗ ಪಡೆದುಕೊಳ್ಳಲು ವಿಫಲರಾಗುತ್ತಾರೆ -ಪ್ರೊ.ಹೂವಯ್ಯಗೌಡ ಅಭಿಮತ

Times fo Deenabandhu

ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆ

Times fo Deenabandhu

ಅದ್ದೂರಿಯಾಗಿ ಜರುಗಿದ ಜಾವಳಿ ಶ್ರೀಮಹಾಗಣಪತಿ ಉತ್ಸವ

Times fo Deenabandhu
adipiscing Aenean libero nec dolor pulvinar elit. Sed elementum velit,