Times of Deenabandhu
  • Home
  • ಜಿಲ್ಲೆ
  • ಶ್ರೀ ಕ್ಷೇತ್ರ ಆದಿಚುಂಚನಗಿರಿ: 7ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ವಿಜ್ಞಾತಂ-2020ರ ಪ್ರಶಸ್ತಿ ಪ್ರದಾನ ಸಮಾರಂಭ
ಜಿಲ್ಲೆ ಮಂಡ್ಯ

ಶ್ರೀ ಕ್ಷೇತ್ರ ಆದಿಚುಂಚನಗಿರಿ: 7ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ವಿಜ್ಞಾತಂ-2020ರ ಪ್ರಶಸ್ತಿ ಪ್ರದಾನ ಸಮಾರಂಭ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಫೆ.20:ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದದಲ್ಲಿ ಏರ್ಪಡಿಸಲಾಗಿದ್ದ 7ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ವಿಜ್ಞಾತಂ-2020ರ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರು ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ   ಮೈಸೂರು ರಾಮಕೃಷ್ಣ ಆಶ್ರಮ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಯವರು, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಶಾಖಾ ಮಠಗಳ  ಸ್ವಾಮೀಜಿಯವರುಗಳು, ಕರ್ನಾಟಕ ಸರ್ವೋದಯ ಕೃಷಿಕ್ ಫೌಂಡೇಷನ್ ಅಧ್ಯಕ್ಷರಾದ ಡಾ. ವೈ.ಕೆ. ಪುಟ್ಟಸೋಮೇಗೌಡರವರು(ಐಎಎಸ್ ನಿವೃತ್ತಿ), ನಾಗಮಂಗಲ ಶಾಸಕರಾದ ಶ್ರೀ ಕೆ.ಸುರೇಶ್ ಗೌಡರವರು, ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎನ್ ಅಪ್ಪಾಜಿಗೌಡರವರು, ಹಾಗೂ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜ್ಞಾತಂ 2020 ರ ಪ್ರಶಸ್ತಿ  ಪುರಸ್ಕೃತರಾದ ಡಾ. ವಾಸುದೇವ್ ಕಲ್ಕುಂಟೆ ಆತ್ರೆ ರವರಿಗೆ ಶ್ರೀಗಳವರು ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು.

 

Related posts

ಬೃಹತ್ ಶಿಲಾಯುಗ ಕಾಲದ ನಿಲಸುಗಲ್ಲು ಪತ್ತೆ

Times fo Deenabandhu

ಅತಿವೃಷ್ಠಿಗೊಳಗಾದ ರೈತರಿಗೆ ನೀಡುತ್ತಿರುವ ಪರಿಹಾರದಲ್ಲಿನ ತಾರತಮ್ಯ : ಮರುಗುಂದ ಪ್ರಸನ್ನ ಆರೋಪ

Times fo Deenabandhu

ಜಿ ಎಮ್‌ನಲ್ಲಿ ೧೫ನೇ ವರ್ಷದ ವೈಭವದ ಸಂಭ್ರಮಾಚರಣೆ ಸಂಪನ್ನ

Times fo Deenabandhu