Times of Deenabandhu
  • Home
  • ಮುಖ್ಯಾಂಶಗಳು
  • ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ನೇಣಿಗೇರಿಸುವ ದಿನ ಫಿಕ್ಸ್​; ಮಾ.3ರಂದು ಮುಂಜಾನೆ 6ಗಂಟೆಗೆ ಗಲ್ಲಿಗೇರಿಸುವಂತೆ ಕೋರ್ಟ್​ ಆದೇಶ
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ನೇಣಿಗೇರಿಸುವ ದಿನ ಫಿಕ್ಸ್​; ಮಾ.3ರಂದು ಮುಂಜಾನೆ 6ಗಂಟೆಗೆ ಗಲ್ಲಿಗೇರಿಸುವಂತೆ ಕೋರ್ಟ್​ ಆದೇಶ

ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ದೆಹಲಿ ನ್ಯಾಯಾಲಯ ಹೊಸದಾಗಿ ಡೆತ್​ ವಾರಂಟ್ ಜಾರಿ ಮಾಡಿದೆ. ವಾರಂಟ್ ಅನ್ವಯ ನಾಲ್ವರೂ ಅಪರಾಧಿಗಳನ್ನು ಮಾರ್ಚ್​ 3ರಂದು ಮುಂಜಾನೆ 6ಗಂಟೆಗೆ ಗಲ್ಲಿಗೇರಿಸಲು ಕೋರ್ಟ್ ಆದೇಶಿಸಿದೆ.

ಪಟಿಯಾಲಾ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆದ ವೇಳೆ ತಿಹಾರ್ ಜೈಲಿನ ಕಾನೂನು ಅಧಿಕಾರಿಗಳು ನ್ಯಾಯಾಲಯಕ್ಕೆ ಅಪರಾಧಿಗಳ ಕಾನೂನು ಪ್ರಕ್ರಿಯೆ ಬಗ್ಗೆ ವರದಿ ಸಲ್ಲಿಸಿದರು.

ಅಪರಾಧಿಗಳ ಎದುರು ಯಾವುದೇ ಕಾನೂನು ಪ್ರಕ್ರಿಯೆಗಳನ್ನು ನಡೆಸಲು ಅವಕಾಶ ಇಲ್ಲ ಎಂದು ತಿಹಾರ್ ಜೈಲು ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ವಿಚಾರಣೆಗೆ ಒಳಪಡಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಹೊಸ ಡೆತ್​ ವಾರೆಂಟ್​ನ್ನು ಹೊರಡಿಸಿದ್ದಾರೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಾದ ಪವನ್​ ಗುಪ್ತಾ, ವಿನಯ್​ ಶರ್ಮಾ, ಮುಕೇಶ್​ ಸಿಂಗ್​ ಮತ್ತು ಅಕ್ಷಯ್​ಕುಮಾರ್​ಗೆ ಸುಪ್ರೀಂಕೋರ್ಟ್​ ವಿಧಿಸಿದ್ದ ಗಲ್ಲುಶಿಕ್ಷೆ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಫೆ.1ರಂದು ಗಲ್ಲಿಗೇರಿಸಬೇಕು ಎಂದು ದೆಹಲಿ ವಿಚಾರಣಾ ನ್ಯಾಯಾಲಯವು ಜನವರಿ 17ರಂದು ಆದೇಶ ನೀಡಿತ್ತು. ಆದರೆ ತಾನೇ ನೀಡಿದ್ದ ಆದೇಶಕ್ಕೆ ಜ.31ರಂದು ತಡೆ ನೀಡಿತ್ತು.

ಅಪರಾಧಿಗಳು ಒಬ್ಬರಾದ ಬಳಿಕ ಮತ್ತೊಬ್ಬರಂತೆ ವಿವಿಧ ರೀತಿಯ ಕಾನೂನು ಪ್ರಕ್ರಿಯೆಗಳನ್ನು ನಡೆಸಿದ್ದರಿಂದ ಗಲ್ಲುಶಿಕ್ಷೆ ವಿಳಂಬವಾಗುತ್ತಿತ್ತು.

Related posts

ಪ್ರಧಾನಿ ಭಾಷಣದಲ್ಲಿ ಆರ್ಥಿಕ ನೆರವಿನ ಮಾತೇ ಇರಲಿಲ್ಲ: ಡಿಕೆಶಿ ಟೀಕೆ

Times fo Deenabandhu

ಕೊರೊನಾದಿಂದ ಕಂಗೆಟ್ಟಿದ್ದ ಚೀನಾದಲ್ಲಿ ಹೊಸ ಸಮಸ್ಯೆ, ಕೋವಿಡ್‌-19ನಿಂದ ವಿಚ್ಛೇದನ ಹೆಚ್ಚಳ

Times fo Deenabandhu

ಮಾನವೀಯತೆ ಮೆರೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ -ಕರೋನಾದಿಂದ ಸಮಾಜವನ್ನು ರಕ್ಷಿಸುವ ಸಲುವಾಗಿ ಒಂದು ದಿನದ ವೇತನ

Times fo Deenabandhu