Times of Deenabandhu
  • Home
  • ಜಿಲ್ಲೆ
  • ಹೊಸ ಇತಿಹಾಸ ನಿರ್ಮಾಣಕ್ಕೆ ನಾಂದಿಯಾಗಲಿರುವ ನಾಳಿನ ಅಸಂಖ್ಯ ಪ್ರಮಥರ ಗಣಮೇಳ
ಚಿತ್ರದುರ್ಗ ಜಿಲ್ಲೆ ಪ್ರಧಾನ ಸುದ್ದಿ ಮುಖ್ಯಾಂಶಗಳು

ಹೊಸ ಇತಿಹಾಸ ನಿರ್ಮಾಣಕ್ಕೆ ನಾಂದಿಯಾಗಲಿರುವ ನಾಳಿನ ಅಸಂಖ್ಯ ಪ್ರಮಥರ ಗಣಮೇಳ

 

ಬೆಂಗಳೂರು ಫೆ.14: ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶೂನ್ಯಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರ ದಿವ್ಯ ನೇತೃತ್ವದಲ್ಲಿ ನಾಳೆ(ಫೆ.16) ಬೆಂಗಳೂರು ಮಹಾನಗರದಲ್ಲಿ ಶಿವಯೋಗ ಸಂಭ್ರಮ ‘ಅಸಂಖ್ಯ ಪ್ರಮಥರ ಗಣಮೇಳ’ ಜರುಗಲಿದ್ದು, ಈ ಸಮ್ಮೇಳನ ಹೊಸ ಇತಿಹಾಸ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದು ಭಾವಿಸಲಾಗುತ್ತಿದೆ.

ತುಮಕೂರು ರಸ್ತೆಯಲ್ಲಿರುವ ನೈಸ್ ರೋಡ್ ಪಕ್ಕದ ನಂದಿ ಗ್ರೌಂಡ್ಸ್‍ನಲ್ಲಿ ಈ ಕಾರ್ಯಕ್ರಮಕ್ಕೆ ಸರ್ವ ಸಿದ್ಧತೆಯಾಗಿದೆ.

ಬಸವಣ್ಣನವರ ನೇತೃತ್ವದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಗಳು ಸಮಾವೇಶಗೊಂಡಿದ್ದರೆಂಬುದು ಇತಿಹಾಸದ ಒಂದು ರೋಚಕ ಅಂಶ. 21ನೇ ಶತಮಾನದಲ್ಲಿ ಅಂತಹ ಒಂದು ಚಾರಿತ್ರಿಕ ಘಟನೆಗೆ ನಾಳಿನ ‘ಅಸಂಖ್ಯ ಪ್ರಮಥರ ಗಣಮೇಳ’ ಸಾಕ್ಷಿಯಾಗುವುದರ ಜೊತೆಗೆ ಇತಿಹಾಸ ಪುನರಾವರ್ತನೆಗೆ ಸಾಕ್ಷಿಯಾಗಲಿದೆ.

ಇದೊಂದು ಬೃಹತ್ತಾದ ಅನುಭವ ಮಂಟಪ. ಸರ್ವ ಜನಾಂಗ ಮತ್ತು ಸರ್ವ ಧರ್ಮೀಯ ಜನರು ಒಂದೂವರೆ ಸಾವಿರ ಬಸ್ಸುಗಳಲ್ಲಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಸೇರುತ್ತಿದ್ದಾರೆ.  ಎಲ್ಲರನ್ನು ಅಪ್ಪಿಕೊಳ್ಳುವ  ತತ್ತ್ವ ಎಲ್ಲಿರುತ್ತದೋ ಅಲ್ಲಿ ಬಸವಣ್ಣ, ಬುದ್ಧ, ಪೈಗಂಬರ್ ಇರುತ್ತಾರೆ. ಈ ಶತಮಾನದಲ್ಲಿ ಸರ್ವ ಜನಾಂಗದವರನ್ನು ಈ ಕಾರ್ಯಕ್ರಮದ ಮೂಲಕ ಕರೆದುಕೊಂಡು ಹೋಗುವ ಚಿಂತನೆ ಮುರುಘಾ ಶ್ರೀಗಳದ್ದು.

ಇಲ್ಲಿ ನಾಡು ವಿಸ್ಮಯಪಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಈ ಸಮಾವೇಶದ ಬೆಳವಣಿಗೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲರು ಕಂಕಣಬದ್ಧರಾಗಿದ್ದಾರೆ. ವೈಯಕ್ತಿಕ ಪ್ರಗತಿ ಅದರೊಟ್ಟಿಗೆ ರಾಷ್ಟ್ರದ ಪ್ರಗತಿಯ ಕಡೆಗೆ ಸಾಗಬೇಕಿದೆ. ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ ಹಮ್ಮಿಕೊಂಡಿರುವ ಈ ಗಣಮೇಳ ಯಶಸ್ವಿಯಾಗಿ ನಡೆಯುತ್ತದೆ ಮತ್ತು ಇದು ಜಗತ್ತಿಗೆ ಒಂದು ಸಂದೇಶ ನೀಡುತ್ತದೆ ಎಂಬ ಭರವಸೆ ಜನಮಾನಸದಲ್ಲಿ ವ್ಯಕ್ತವಾಗುತ್ತಿದೆ.

ಸಮಾರಂಭದಲ್ಲಿ ರಾಜ್ಯ-ರಾಷ್ಟ್ರಮಟ್ಟದ ಧಾರ್ಮಿಕ ಮುಖಂಡರು, ಸಂತರು, ಸರ್ವ ಜನಾಂಗಗಳ ಸ್ವಾಮಿಗಳು, ಶಾಖಾಮಠಗಳ ಚರಮೂರ್ತಿಗಳಲ್ಲದೆ, ರೈತರು, ದಲಿತ ಪರ ಸಂಘಟನೆಗಳು, ಜನನಾಯಕರು, ಸಂಸ್ಕøತಿ ಚಿಂತಕರು, ಮಾನವೀಯ ಮೌಲ್ಯಗಳ ಬಗೆಗೆ ಶ್ರದ್ಧೆ ಗೌರವಗಳನ್ನು ಇರಿಸಿಕೊಂಡುವರು ಮತ್ತು ಸರ್ವ ಜನಾಂಗದವರು ಭಾಗವಹಿಸಲಿದ್ದಾರೆ.

ನಾಳಿನ ಗಣಮೇಳದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೇಂದ್ರದ ಹಲವು ಮಂತ್ರಿಗಳು, ರಾಜ್ಯದ ಮಂತ್ರಿಗಳು, ವಿವಿಧ ಪಕ್ಷಗಳ ಮುಖಂಡರುಗಳು ಭಾಗವಹಿಸುತ್ತಿದ್ದಾರೆ.

ಅಲ್ಲದೇ ಸುತ್ತೂರು, ಆದಿಚುಂಚನಗಿರಿ, ಸಿದ್ದಗಂಗ ಮುಂತಾದ ಕರ್ನಾಟಕದ ಪ್ರತಿಷ್ಠಿತ ಮಠಗಳ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು, ಆರ್ಟ್ ಆಫ್ ಲಿವಿಂಗ್‍ನ ಡಾ.ರವಿಶಂಕರ್ ಗುರೂಜಿ ನಾಳಿನ ಸಮಾವೇಶಕ್ಕೆ ಸಾಕ್ಷಿಯಾಗಲ್ಲಿದ್ದಾರೆ.

ಗಣಮೇಳದಲ್ಲಿ ಭಾಗವಹಿಸುವ ಸರ್ವರಿಗೂ ಊಟದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಕರ್ನಾಟಕ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದ ಜನರು ಭಾಗವಹಿಸುತ್ತಿದ್ದಾರೆ ಲಕ್ಷಲಕ್ಷೋಪಾದಿ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದಾರೆ.

 

“20-21ನೇ ಶತಮಾನದಲ್ಲಿ ಇತಿಹಾಸ ಪುನರಾವರ್ತನೆಯಾಗಬೇಕೆಂಬ ಉದ್ದೇಶದಿಂದ  ಹಮ್ಮಿಕೊಳ್ಳಲಾಗಿರುವ ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥರ ಗಣಮೇಳ ಮತ್ತು ಸರ್ವಶರಣ ಸಮ್ಮೇಳನಕ್ಕೆ ಬೆಂಗಳೂರು ನಗರದ ನಂದಿ ಗ್ರೌಂಡ್ಸ್‍ನಲ್ಲಿ ಸರ್ವ ಸಿದ್ಧತೆಗಳು ನಡೆಯುತ್ತಿವೆ”

– ಡಾ. ಶಿವಮೂರ್ತಿ ಮುರುಘಾ ಶರಣರು, ಶೂನ್ಯ ಪೀಠಾಧ್ಯಕ್ಷರು, ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ, ಚಿತ್ರದುಗ.

“ಸರ್ವ ಧರ್ಮೀಯರು ಸರ್ವ ಜನಾಂಗದವರನ್ನು ಒಂದೆಡೆ ಸೇರಿಸುವುದು ಗಣಮೇಳದ ಉದ್ದೇಶ. ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಕುಮಾರಸ್ವಾಮಿ, ಕೇಂದ್ರ ಸಚಿವರಾದ ಸದಾನಂದಗೌಡ, ಸುರೇಶ ಅಂಗಡಿ ಮೊದಲಾದ ದಿಗ್ಗಜರು ಪಾಲ್ಗೊಳ್ಳುವರು. ಇದು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದುದಲ್ಲ. 12ನೇ ಶತಮಾನದ ನಂತರ ಈಗ 2ನೇ ಪ್ರಮಥರ ಗಣಮೇಳ ನಡೆಯುತ್ತಿರುವುದು ಸಂತಸ ತಂದಿದೆ”

-ಬಿ.ವೈ.ವಿಜಯೇಂದ್ರ, ಅಧ್ಯಕ್ಷರು,  ಗಣಮೇಳ ಸ್ವಾಗತ ಸಮಿತಿ.

 

Related posts

ಸಾಗರದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ: ರಸ್ತೆಯಲ್ಲಿ ಬಾಳೆಗಿಡಗಳನ್ನು ನೆಟ್ಟಗ್ರಾಮಸ್ಥರು

ವಲಸೆ ಕಾರ್ಮಿಕರಿಗೆ ಹಾಸ್ಟೆಲ್ ಗಳಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಿ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಕುರಿಯನ್ ಅಭಿಮತ

Times fo Deenabandhu