Times of Deenabandhu
  • Home
  • ಜಿಲ್ಲೆ
  • ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ
ಜಿಲ್ಲೆ ದಕ್ಷಿಣ ಕನ್ನಡ

ಗಳಿಸಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ

ಮೂಡುಬಿದರೆ: ಜೀವನದಲ್ಲಿ ಕಲಿತ ಜ್ಞಾನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಯಶಸ್ಸನ್ನು ಗಳಿಸಬಹುದು ಎಂದು ಗುಜರಾತಿನ ರಾಷ್ಟ್ರಕಥಾ ಶಿಬಿರದ ಸಂಸ್ಥಾಪಕ ಸ್ವಾಮಿ ಧರ್ಮಬಂಧುಜಿ ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಂ ಸ್ಪೀಕರ್‍ಸ್ ಕ್ಲಬ್ ವತಿಯಿಂದ ನಡೆದ ಸಂವಾದ ಕಾರ್‍ಯಕ್ರಮದಲ್ಲಿ ಮಾತನಾಡಿದರು.

ಅವಿವೇಕದಿಂದ ಯಾವುದನ್ನು ನಂಬದೆ, ಬೌದ್ದಿಕ ಮಟ್ಟದಲ್ಲಿ ವಿಚಾರ ಮಾಡುವುದರ ಮೂಲಕ ವಿಷಯವನ್ನು ಅರಿಯಬೇಕು. ತಾವು ಗಳಿಸಿದ ಜ್ಞಾನವನ್ನು ತಮ್ಮಲ್ಲೇ ಇಟ್ಟುಕೊಳ್ಳದೇ, ಎಲ್ಲರಿಗೂ ಧಾರೆಯೆರೆಯಬೇಕು. ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ವಿನಾ ಜೀವನದಲ್ಲಿ ಸುಧಾರಣೆ ಸಾಧ್ಯವಿಲ್ಲ ಎಂದು ಹೇಳಿದರು.

ಆಳ್ವಾಸ್ ಕಾಲೇಜಿನ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮತಾನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಮೇಲೆ ಮಾತ್ರ ಅವಲಂಬಿತರಾಗದೆ ತಮ್ಮನ್ನು ತಾವು ತೊಡಗಿಸಿಕೊಳ್ಳವುದರಿಂದ ಕಲಿಯಲು ಸಾಧ್ಯ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್‍ಯಕ್ರಮ ನಡೆಯಿತು.

ಕಾರ್‍ಯಕ್ರಮದಲ್ಲಿ ರೋಸ್ಟ್ರಂ ಕ್ಲಬ್‌ನ ಸಂಯೋಜಕ ದೀಪಕ್ ರಾಜ್ ಉಪಸ್ಥಿತರಿದ್ದರು. ನಿತಿನ್ ಸ್ವಾಗತಿಸಿದರು. ರಕ್ಷಿತಾ ಕಾರ್‍ಯಕ್ರಮವನ್ನು ನಿರೂಪಿಸಿದರು.

 

ಮಂಗಳೂರು ವಿವಿ ಅಂತರ್‌ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನಮೆಂಟ್: ಆಳ್ವಾಸ್ ಕಾಲೇಜು ಪ್ರಥಮ

ಮೂಡುಬಿದಿರೆ: ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ಮಂಗಳೂರು ವಿವಿ ಅಂತರ್‌ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನ್‌ಮೆಂಟ್‌ನಲ್ಲಿ ಆಳ್ವಾಸ್ ಕಾಲೇಜು ೨೯ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯಿತು. ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ೨೭ ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ತೃತೀಯ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜು ಚತುರ್ಥ ಸ್ಥಾನ ಪಡೆಯಿತು.
ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಎಸ್‌ಡಿಎಮ್ ಕಾಲೇಜಿನ ಸುಗನ್, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಗಸ್ಟೀನ್, ಬೆಸ್ಟ್ ಆಲ್‌ರೌಂಡರ್ ಆಗಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಹರೀಶ ದೇವರಾಡಿ, ಬೆಸ್ಟ್ ಎಟೇಕರ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ವಿಶ್ವಾಸ್ ಪಡೆದರು.
ಕಾರ್‍ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಹೋರಾಟದಿಂದ ಕೂಡಿದ ಸೋಲು ಎಂದೂ ಸೋಲಲ್ಲ. ಸ್ಪರ್ಧೆಯಲ್ಲಿ ಪ್ರಯತ್ನ ಪಡದೆ ಪರಾಭವವನ್ನು ಹೊಂದಿದರೆ ಅದೇ ನಿಜವಾದ ಸೋಲು. ವಿದ್ಯಾರ್ಥಿಗಳು ತಮ್ಮ ಹವ್ಯಾಸಗಳನ್ನು ಸದಾ ಪೋಷಿಸಿ, ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ಕಾರ್‍ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ಡಾ ವಿನಯ್ ಆಳ್ವ, ಡಾ ಹನಾ ಆಳ್ವ, ಆಳ್ವಾಸ್ ಬಿ.ಪಿ.ಎಡ್. ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಮನಸ್ಸನ್ನು ಅರಿತವ ಉತ್ತಮ ಅಧ್ಯಾಪಕನಾಗಬಲ್ಲ: ಬಾಲಕೃಷ್ಣ ಶೆಟ್ಟಿ

 

ಮೂಡುಬಿದಿರೆ: ಅಧ್ಯಾಪಕರಲ್ಲಿ ಯಾವಾಗಲೂ ಮಾನವೀಯ ಗುಣಗಳು ಇರಬೇಕು. ಮಕ್ಕಳ ಮನವೊಲಿಸಿ, ಅವರ ಅವಶ್ಯಕತೆಗಳನ್ನು ಅರಿತು, ಉತ್ತಮ ರೀತಿಯಲ್ಲಿ ವಿಷಯಗಳನ್ನು ಮನದಟ್ಟು ಮಾಡಿಕೊಡುವ ಅಧ್ಯಾಪಕರು ಕೊನೆಯವರೆಗೂ ಅವರ ಮನಸ್ಸಿನಲ್ಲಿ ಉತ್ತಮ ಅಧ್ಯಾಪಕರಾಗಿಯೇ ಉಳಿಯುತ್ತಾರೆ ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಟ ಶೆಟ್ಟಿ ಹೇಳಿದರು.

ಆಳ್ವಾಸ್ ಕಾಲೇಜಿನ ಬಿ.ಎಡ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಅಧ್ಯಾಪನ ವೃತ್ತಿಗೆ ತನ್ನದೇ ಆದ ಮಹತ್ವವಿದೆ. ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿನ ಗೊಂದಲಗಳಿಂದಾಗಿ ಹಲವು ಬಾರಿ ಅಧ್ಯಾಪಕರು ಎಡವುತ್ತಿರುವುದು ಸಹಜ. ತರಗತಿಯಲ್ಲಿನ ಪ್ರತಿಯೊಬ್ಬರನ್ನೂ ತನ್ನತ್ತ ಸೆಳೆಯುವ ಚಾಕಚಕ್ಯತೆ ಅಧ್ಯಾಪಕರು ಹೊಂದಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಪ್ರೌಢ ಶಾಲಾ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಆಳ್ವಾಸ್ ಬಿ.ಎಡ್ ಕಾಲೇಜಿನ ಇನ್‌ಚಾರ್ಜ್ ಪ್ರಿನ್ಸಿಪಾಲ್ ಶಂಕರ್‌ಮೂರ್ತಿ ಹೆಚ್.ಕೆ ಉಪಸ್ಥಿತರಿದ್ದರು. ವಿಜಯ ಲಕ್ಷ್ಮೀ ಪೈ ಸ್ವಾಗತಿಸಿ, ನಿರೂಪಿಸಿದರು. ನಿಶಾ ಜೈನ್ ವಂದಿಸಿದರು.

 

ಪೊಲೀಸ್ ದೂರುಗಳ ಪ್ರಾಧಿಕಾರ: ಪದಾಧಿಕಾರಿಗಳ ನೇಮಕ

ಚಿಕ್ಕಮಗಳೂರು,ಫೆ.೧೩: ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರವು ರಚನೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾರ್ವಜನಿಕರು ಡಿ.ವೈಎಸ್.ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿಗಳು ಕರ್ತವ್ಯದ ಸಂದರ್ಭ ತಪ್ಪು ಮಾಡಿದ್ದಲ್ಲಿ ದೂರು ಸಲ್ಲಿಸುವುದಕ್ಕೆ ಪೊಲೀಸ್ ದೂರುಗಳ ಪ್ರಾಧಿಕಾರ ರಚಿಸಲಾಗಿದೆ.
ಪ್ರಾಧಿಕಾರದ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳನ್ನು, ಸದಸ್ಯ ಕಾರ್ಯದರ್ಶಿಯಾಗಿ ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕರನ್ನು, ಸದಸ್ಯರನ್ನಾಗಿ ನಾಗರೀಕ ಸೇವೆ ನಿವೃತ್ತ ಸಹಾಯಕ ಆಯುಕ್ತರಾದ ಎಸ್.ಆರ್.ವೆಂಕಟೇಶ್ ಹಾಗೂ ನಾಗರೀಕ ಸಮಾಜದ ನರೇಂದ್ರ ಪೈ ನೇಮಕ ಮಾಡಲಾಗಿದೆ.
ದೂರುಗಳಿದ್ದಲ್ಲಿ ದೂ.ಸಂ.೦೮೨೬೨-೨೩೦೪೦೩, ಫ್ಯಾಕ್ಸ್: ೦೮೨೬೨-೨೩೦೫೪೦, ೨೩೫೬೦೮, ಇ-ಮೇಲ್ ವಿಳಾಸ ಜಠಿಛಿಚಿಛಿಞm@ಞಚಿಡಿಟಿಚಿಣಚಿಞಚಿ.gov.iಟಿ <mಚಿiಟಣo:ಜಠಿಛಿಚಿಛಿಞm@ಞಚಿಡಿಟಿಚಿಣಚಿಞಚಿ.gov.iಟಿ> ವೆಬ್‌ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/sಠಿಛಿಚಿ <hಣಣಠಿ://ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/sಠಿಛಿಚಿ> ಹಾಗೂ ಅಡಿಷನಲ್ ಎಸ್.ಪಿ ಮತ್ತು ಮೇಲಿನ ಹುದ್ದೆಯ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುವಂತಿದ್ದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ, ಕೊಠಡಿ ಸಂ. ೩೬, ನೆಲಮಹಡಿ, ವಿಕಾಸಸೌಧ, ಬೆಂಗಳೂರು-೦೧, ದೂ: ೦೮೦-೨೨೩೮೬೦೬೩, ೦೮೦-೨೨೦೩೪೨೨೦ ಇವರಿಗೆ ದೂರು ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಐಸಿಐಸಿಐ ಅಕಾಡೆಮಿ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಚಿಕ್ಕಮಗಳೂರು,ಫೆ.೧೩: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಐಸಿಐಸಿಐ ಅಕಾಡೆಮಿ ಫಾರ್ ಸ್ಕಿಲ್ಸ್, ಐಸಿಐಸಿಐ ಫೌಂಡೇಶನ್ ಸಹಯೋಗದೊಂದಿಗೆ ಪರಿಶಿಷ್ಟ ವರ್ಗಕ್ಕೆ  ಸೇರಿದ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಪದವಿಯಲ್ಲಿ ಉತ್ತೀರ್ಣರಾದ ೧೮ ರಿಂದ ೩೦ ವರ್ಷದೊಳಗಿನ ನಿರುದ್ಯೋಗಿ ಯುವಕ ಯುವತಿಯರಿಗೆ ೩ ತಿಂಗಳು ವಿವಿಧ ವಿಷಯಗಳ ಕುರಿತು ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳಿಗೆ ಆಫೀಸ್ ಅಡ್ಮಿನಿಸ್ಟ್ರೇಷನ್ ಮತ್ತು ರಿಟೈಲ್ ಸೇಲ್ಸ್ ಕೋರ್ಸ್‌ಗೆ ಅನುಕೂಲವಾಗುವಂತೆ ಸ್ಪೋಕನ್ ಇಂಗ್ಲೀಷ್, ಕಂಪ್ಯೂಟರ್, ಬೇಸಿಕ್ ಜಿಎಸ್‌ಟಿ, ಟ್ಯಾಲಿ, ಅಕೌಂಟ್ಸ್, ಬ್ಯಾಕಿಂಗ್, ಕಮ್ಯೂನಿಕೇಷನ್ ಮತ್ತು ಪರ್ಸನಾಲಿಟಿ ಡೆವಲಪ್‌ಮೆಂಟ್ ಸ್ಕಿಲ್ಸ್, ಲೈಫ್ ಸ್ಕಿಲ್ಸ್, ಇಂಟರ್‌ವ್ಯೂ ಸ್ಕಿಲ್ಸ್, ಕಸ್ಟಮರ್ ಸರ್ವೀಸ್, ರಿಟೇಲ್ ಸೇಲ್ಸ್, ಎಟಿಕ್ವಿಟಿ ಮತ್ತು ಗ್ರೂಮಿಂಗ್ ಸ್ಟಾಂಡರ್ಸ್ ವಿಷಯಗಳ ಬಗ್ಗೆ ಮೈಸೂರು ಅಥವಾ ಬೆಂಗಳೂರು ಕೇಂದ್ರಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ.   ಅರ್ಜಿ ಸಲ್ಲಿಸಲು ಫೆಬ್ರವರಿ ೨೦ ಕೊನೆಯ ದಿನವಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಐಸಿಐಸಿಐ ಅಕಾಡೆಮಿ ಫಾರ್ ಸ್ಕಿಲ್ಸ್, ಮೈತ್ರಿ ಸೆಂಟರ್ ವೆಸ್ಟ್‌ವಿಂಗ್ ಹೊಸೂರು ರಸ್ತೆ ಬೆಂಗಳೂರು ದೂ.ಸಂ. ೯೬೧೧೦೭೫೫೫೯ ಅಥವಾ ಕರ್ನಾಟಕ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ದೂ.ಸಂ ೦೮೨೬೨-೨೨೦೭೧೭  ನ್ನು ಸಂಪರ್ಕಿಸುವಂತೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಗರ ಮಾರಿಕಾಂಬ ಜಾತ್ರೆ ಸಂದರ್ಭದಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆ

ಶಿವಮೊಗ್ಗ : ಸಾಗರ ಪೇಟೆಯಲ್ಲಿ ಫೆ. ೧೮ ರಿಂದ ೨೬ರ ವರೆಗೆ ನಡೆಯುವ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ಸಂಭವವಿದ್ದು, ಈ ಸಮಯದಲ್ಲಿ ಕುಸ್ತಿ ಪಂದ್ಯಾವಳಿ, ಅಂಗಡಿ, ಅಮ್ಯೂಸ್ಮೆಂಟ್‌ಗಳು, ಯಕ್ಷಗಾನ, ನಾಟಕಗಳು ಮತ್ತು ವಸ್ತುಪ್ರದರ್ಶನ ಏರ್ಪಡಿಸುವುದರಿಂದ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸಾಗರದ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ದ್ವಿಚಕ್ರ, ಲಘುವಾಹನಗಳು ಮತ್ತು ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ. ಆದೇಶಿಸಿದ್ದಾರೆ.
ಸಾಗರ ಟೌನ್ ಪೊಲೀಸ್ ಠಾಣೆಯ ಎದುರಿನ ಜೆ.ಸಿ.ವೃತ್ತದಿಂದ ಜೆ.ಸಿ.ರಸ್ತೆ ಮೂಲಕ ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ವೃತ್ತದವರೆಗೆ ಪ್ಯಾರಲಲ್ ರಸ್ತೆಗಳು, ಅಂಬೇಡ್ಕರ್ ಸರ್ಕಲ್‌ನಿಂದ ಸಾಗರ ಸರ್ಕಲ್‌ವರೆಗೆ, ಸತ್ಯನಾರಾಯಣಸ್ವಾಮಿ ದೇವಸ್ಥಾನ ಸರ್ಕಲ್‌ನಿಂದ ಸಾಗರ ಸರ್ಕಲ್‌ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ದುರ್ಗಾಂಭ ವೃತ್ತ (ಸೊರಬ ಸರ್ಕಲ್) ಮೂಲಕ ಸೊರಬ ರಸ್ತೆ, ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್.ವೃತ್ತದವರೆಗೆ ಬದಲಿ ಮಾರ್ಗದಲ್ಲಿ ೪ ಚಕ್ರ ವಾಹನಗಳು ಮತ್ತು ಭಾರಿ ವಾಹನಗಳಿಗೆ ಸಂಚಾರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಫೆ. ೧೧ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ನನ್ನ ವ್ಯಕ್ತಿತ್ವದ ಪ್ರೇರಕ ಶಕ್ತಿ ಶಿವಮೊಗ್ಗ : ಡಾ||ಅಶ್ವಥ್‌ನಾರಾಯಣ ಉವಾಚ

ಶಿವಮೊಗ್ಗ  : ನನ್ನ ಬದುಕಿನ ಪ್ರತಿ ಹಂತದ ಬೆಳವಣಿಗೆಯಲ್ಲಿ ಶಿವಮೊಗ್ಗದಲ್ಲಿ ಪಡೆದ ಶಿಕ್ಷಣ, ಕೌಟುಂಬಿಕ ಹಾಗೂ ಸುತ್ತಮುತ್ತಲ ವಾತಾವರಣದಿಂದ ಸಿಕ್ಕ ಸಂಸ್ಕಾರವೇ ಕಾರಣ ಎಂದು ರಾಜ್ಯದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ ಬಿಟಿ., ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ||ಸಿ.ಎನ್.ಅಶ್ವಥ್ ನಾರಾಯಣ್ ಅವರು ಹೇಳಿದರು.
ಅವರು ಇಂದು ನಗರದ ಡಿ.ವಿ.ಎಸ್. ಕಾಲೇಜಿನ ಆವರಣದಲ್ಲಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಆಡಳಿತ ಮಂಡಳಿಯವರು ನನಗೆ ನೀಡಿದ ಆತ್ಮೀಯ ಗೌರವ ನನ್ನ ಎದೆ ತುಂಬಿ ಬಂದಿದೆ. ಇದನ್ನು ಜೀವಮಾನವಿಡಿ ಮರೆಯಲಾರೆ. ಇಂದಿನ ಈ ಭೇಟಿಯಿಂದಾಗಿ ವಿದ್ಯಾರ್ಥಿ ಜೀವನದ ಸವಿ-ಸಿಹಿ ನೆನಪುಗಳನ್ನು ಮೆಲಕುಹಾಕಲು, ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಯಿತು ಎಂದರು.
ಜನಸಾಮಾನ್ಯರು ಶಿಕ್ಷಣ ಪಡೆಯುವುದು ಸಾಧ್ಯವಿಲ್ಲ ಎಂದಿದ್ದ ಕಾಲದಲ್ಲಿ ಸದುದ್ದೇಶದಿಂದ ಡಿ.ವಿ.ಎಸ್. ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಲಕ್ಷಾಂತರ ಜನರ ಉಜ್ವಲ ಭವಿಷ್ಯಕ್ಕೆ ಕಾರಣವಾಗಿರುವುದಕ್ಕೆ ಅನೇಕ ಹಿರಿಯರ ಆದರ್ಶಗಳು ಕಾರಣವಾಗಿವೆ. ಅವರೆಲ್ಲರೂ ಅಭಿನಂದನಾರ್ಹರು ಎಂದರು.
ಶಿಕ್ಷಣದ ಮೂಲಕ ಸಮಾಜದ ಸಬಲೀಕರಣ ಮತ್ತು ಸ್ವಾಸ್ಥ್ಯ ಕಾಪಾಡುವುದು ಸಾಧ್ಯವಾಗಲಿದೆ ಎಂದ ಆದರ್ಶದಲ್ಲಿ ನಂಬಿಕೆ ಹೊಂದಿರುವ ನಾನು ಸಮಾಜಕ್ಕೆ, ಸಮಾಜದ ಸರ್ವತೋಮುಖ ಏಳಿಗೆಗೆ ಏನಾದರೂ ಸಹಾಯವಾಗುವುದಾದದರೆ ನನಗದೇ ಸಂತೋಷ ಎಂದ ಅವರು ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಜ್ಞಾನ ಮತ್ತು ತಿಳುವಳಿಕೆ ನೀಡುವುದೇ ಆಗಿದೆ ಎಂದರು.
ಇಂದಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ನಿರೀಕ್ಷೆಯ ಎತ್ತರಕ್ಕೆ ಏರುವುದು ಸಾಧ್ಯವಾಗಿಲ್ಲ. ಅನೇಕ ಮಹತ್ವದ ವಿಷಯಗಳಲ್ಲಿ ಸುಧಾರಣೆಗಳಾಗಬೇಕಾದ ಅಗತ್ಯವಿರುವುದನ್ನು ಮನಗಂಡಿದ್ದು, ಅದಕ್ಕಾಗಿ ಕ್ರಮ ವಹಿಸುವುದಾಗಿ ತಿಳಿಸಿದ ಅವರು, ಶೈಕ್ಷಣಿಕ ಪ್ರಗತಿಯ ಹಿನ್ನೆಡೆಗೆ ಜಾಗತೀಕರಣ, ಖಾಸಗೀಕರಣದಂತಹ ಅನೇಕ ವಿಷಯಗಳು ಕಾರಣವಾಗಿರಬಹುದು. ಪ್ರಸ್ತುತ ಶೈಕ್ಷಣಿಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಿರುವುದು ಸುಳ್ಳಲ್ಲ ಎಂದವರು ನುಡಿದರು.
ಯಾವುದೇ ಕ್ಷೇತ್ರದ ಉನ್ನತಿಗೆ ಶಿಕ್ಷಣವೇ ಮೂಲ. ಶಿಕ್ಷಿತ ಸಮಾಜ ಸದೃಢವಾಗಿ ಬೆಳೆಯುತ್ತದೆ. ತಪ್ಪಿದಲ್ಲಿ ವ್ಯಕ್ತಿ ಅಭಿಮಾನ, ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳುತ್ತಾನೆ ಎಂದ ಅವರು ಡಿ.ವಿ.ಎಸ್.ಕಾಲೇಜಿನ ೭೫ನೇ ವರ್ಷಾಚರಣೆಯ ಸಂಭ್ರಮಕ್ಕಾಗಿ ವೈಯಕ್ತಿಕವಾಗಿ ೫೦ಲಕ್ಷ ರೂ.ಗಳ ಧನಸಹಾಯ ನೀಡುವುದಾಗಿ ಘೋಷಿಸಿದರಲ್ಲದೇ ಶಾಲೆಯ ಸಮಗ್ರ ವಿಕಾಸಕ್ಕಾಗಿ ಅಗತ್ಯವಾಗಿರುವ ಎಲ್ಲಾ ರೀತಿಯ ನೆರವು-ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸಪ್ಪಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಕೆ.ಎನ್.ರುದ್ರಪ್ಪ, ಎಸ್.ಪಿ.ದಿನೇಶ್, ಬಿ.ಗೋಪಿನಾಥ್, ಡಾ||ಡಿ.ಬಿ.ಗೋಪಿನಾಥ್, ಎಂ.ರಾಜು, ಜಿ.ಮಧುಸೂದನ್, ಡಾ||ಮಂಜುನಾಥ್ ಹೆಗ್ಡೆ, ಎನ್.ಆರ್.ನಿತಿನ್, ಡಾ||ಸತೀಶ್‌ಕುಮಾರ್‌ಶೆಟ್ಟಿ, ಭಾಸ್ಕರ್ ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದರು.

Related posts

ಅಂಬೇಡ್ಕರ್ ಓರ್ವ ಗುಣಾತ್ಮಕ ಚಿಂತನೆಯ ಚೇತನ: ಪ್ರೊ. ಎಂ. ಎಸ್. ಶೇಖರ್

Times fo Deenabandhu

ರಾಜ್ಯಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಆಳ್ವಾಸ್‌ಗೆ ದ್ವಿತೀಯ ಸ್ಥಾನ

Times fo Deenabandhu

ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದಿಲ್ಲ.

Times fo Deenabandhu