Times of Deenabandhu
  • Home
  • ಪ್ರಧಾನ ಸುದ್ದಿ
  • ಕೊರೊನಾ ವೈರಸ್​ ಸೃಷ್ಟಿಸಿರೋ ಕರಾಳತೆ ಬಿಚ್ಚಿಟ್ಟು ರಕ್ಷಿಸುವಂತೆ ಸರ್ಕಾರದ ಮುಂದೆ ಪಾಕ್​ ವಿದ್ಯಾರ್ಥಿಗಳ ಅಳಲು
ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಕೊರೊನಾ ವೈರಸ್​ ಸೃಷ್ಟಿಸಿರೋ ಕರಾಳತೆ ಬಿಚ್ಚಿಟ್ಟು ರಕ್ಷಿಸುವಂತೆ ಸರ್ಕಾರದ ಮುಂದೆ ಪಾಕ್​ ವಿದ್ಯಾರ್ಥಿಗಳ ಅಳಲು

ವುಹಾನ್​: ಕೊರೊನಾ ವೈರಸ್​ ಹೆಚ್ಚಾಗಿ ಹರಡಿರುವ ಚೀನಾದ ವುಹಾನ್​ ನಗರದಲ್ಲಿ ಸಿಲುಕಿರುವ ನೂರಾರು ಪಾಕಿಸ್ತಾನಿ ವಿದ್ಯಾರ್ಥಿಗಳು ತಮ್ಮನ್ನು ರಕ್ಷಿಸುವಂತೆ ಪಾಕ್​ ಸರ್ಕಾರವನ್ನು ಅಂಗಲಾಚಿದ್ದು, ದಿನನಿತ್ಯ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.

ವುಹಾನ್​ನಲ್ಲಿ 2015ರಿಂದ ಮೆಡಿಸಿನ್​ ಅಧ್ಯಯನ ಮಾಡುತ್ತಿರುವ ರೆಹಾನ್​ ರಶೀದ್​ ತಮ್ಮದೇ ಪಾಕ್​ ಸರ್ಕಾರವನ್ನು ಟೀಕಿಸಿದ್ದಾರೆ. ನಗರದಲ್ಲಿ ಸಿಲುಕಿರುವ ಸುಮಾರು 800 ವಿದ್ಯಾರ್ಥಿಗಳನ್ನು ಮರಳಿ ಕರೆತರಲು ತಿರಸ್ಕರಿಸಿರುವ ಪ್ರಧಾನಿ ಇಮ್ರಾನ್​ ಖಾನ್​ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ವೈರಸ್​ ಹರಡಿದ ದಿನದಿಂದ ನಗರದಲ್ಲೇ ಚೀನಾ ಅಧಿಕಾರಿಗಳಿಂದ ತಾತ್ಕಾಲಿಕ ಬಂಧನಕ್ಕೊಳಗಾಗಿರುವುದಾಗಿ ರಶೀದ್​ ಹೇಳಿಕೊಂಡಿದ್ದಾರೆ.

ವುಹಾನ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಐವರು ವಿದ್ಯಾರ್ಥಿಗಳಿಗೆ ವೈರಸ್​ ಸೋಂಕು ತಗುಲಿರುವುದಾಗಿ ರಶೀದ್​ ಮಾಹಿತಿ ನೀಡಿದ್ದಾರೆ.

ಇನ್ನು ನಾವು ಸ್ಥಳಾಂತರವಾಗಿಲ್ಲ ಮತ್ತು ನಮಗೆ ಯಾವುದೇ ಬೆಂಬಲ ವ್ಯಕ್ತವಾಗುತ್ತಿಲ್ಲ ಎಂದು ರಶೀದ್​ ನೋವಿನಿಂದ ಹೇಳಿಕೊಂಡಿದ್ದಾರೆ. ನಾವೆಲ್ಲರೂ ಭಯಭೀತರಾಗಿದ್ದೇವೆ. ಇಲ್ಲಿ ತುಂಬಾ ಭಯದ ವಾತವರಣ ಇದೆ. ಸುಮಾರು 20 ದಿನಗಳಿಂದ ಹಾಸ್ಟೆಲ್​ ರೂಮ್​ನಲ್ಲಿ ಬಂಧನವಾಗಿದ್ದೇವೆ. ಕಳೆದ ಮೂರು ದಿನಗಳಿಂದ ಊಟಕ್ಕೂ ನಮ್ಮನ್ನು ಹೊರಗಡೆ ಬಿಡುತ್ತಿಲ್ಲ. ನಾವು ಭಯದಿಂದ ಸುತ್ತುವರಿದಿದ್ದೇವೆ ಎಂದು ಕೊರೊನಾ ವೈರಸ್​ ಸೃಷ್ಟಿಸಿರುವ ಕರಾಳತೆಯನ್ನು ಬಿಚ್ಚಿಡುತ್ತಾ ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ.

ತಮ್ಮ ನೆರೆಯ ರಾಷ್ಟ್ರಗಳಾದ ಭಾರತ, ನೇಪಾಳ ಹಾಗೂ ಬಾಂಗ್ಲಾದೇಶ ಸೇರಿದಂತೆ ಯುಎಸ್​, ಯುಕೆ ಮತ್ತಿತರ ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಕರೆಯಿಸಿಕೊಂಡಿರುವುದಕ್ಕೆ ಪಾಕ್​ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಆದರೆ, ಪಾಕ್​ ತಮ್ಮ ಪ್ರಜೆಗಳನ್ನು ಶಾಂತವಾಗಿ ಉಳಿಯುವಂತೆ ಒತ್ತಾಯಿಸಿದೆ.

ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಾಕ್​, ಕೊರೊನಾ ವೈರಸ್​ ಅನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಚೀನಾಗೆ ಪದೇಪದೆ ಅಭಿನಂದನೆ ಸಲ್ಲಿಸುತ್ತಿದೆ. ಆದರೂ ಕೂಡ ತಮ್ಮ ಪ್ರಜೆಗಳನ್ನು ಕರೆತರುವ ಪ್ರಯತ್ನಕ್ಕೆ ಕೈಹಾಕಿಲ್ಲ. ಅದಕ್ಕೆ ಕಾರಣ ವೈರಸ್ ಸೋಂಕನ್ನು ಸಮರ್ಥವಾಗಿ ನಿಭಾಯಿಸಬಲ್ಲ ವೈದ್ಯಕೀಯ ಸೌಲಭ್ಯ ಪಾಕ್​​ನಲ್ಲಿ ಇಲ್ಲದಿರುವುದು ಕಾರಣ ಎಂದು ಚರ್ಚೆಯಾಗುತ್ತಿದೆ.

Related posts

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಈ ವರ್ಷವೂ ಬಾಲಕಿಯರದ್ದೇ ಮೇಲುಗೈ

Times fo Deenabandhu

ರಾಜ್ಯಕ್ಕೂ ಕಾಲಿಟ್ಟ ಕೊರೊನಾ ವೈರಸ್‌..? ಚೀನಾದಿಂದ ಬಂದ ಹುಬ್ಬಳ್ಳಿ ಟೆಕ್ಕಿಗೆ ವೈರಸ್ ತಗುಲಿರುವ ಶಂಕೆ..!

Times fo Deenabandhu

55 ವರ್ಷದ ನಟ ಆಮೀರ್‌ ಖಾನ್ ಮೇಕಪ್‌ ಇಲ್ಲದಿದ್ದರೆ ಹೇಗೆ ಕಾಣ್ತಾರೆ? ಈ ಫೋಟೋ ನೋಡಿ…

Times fo Deenabandhu