Times of Deenabandhu
  • Home
  • ಜಿಲ್ಲೆ
  • ಆಳ್ವಾಸ್ ಕಾಲೇಜು ಹಾಗೂ ಅನ್ವೇಶ್ ಶೆಟ್ಟಿ & ಅಸೋಸಿಯೇಟ್ಸ್ ನಡುವೆ ಒಡಂಬಡಿಕೆ
ಜಿಲ್ಲೆ ದಕ್ಷಿಣ ಕನ್ನಡ

ಆಳ್ವಾಸ್ ಕಾಲೇಜು ಹಾಗೂ ಅನ್ವೇಶ್ ಶೆಟ್ಟಿ & ಅಸೋಸಿಯೇಟ್ಸ್ ನಡುವೆ ಒಡಂಬಡಿಕೆ

ಮೂಡುಬಿದಿರೆ: ನಿರಾಸಕ್ತಿಯಿಂದ ಸಿ.ಎ ಪರೀಕ್ಷೆಯ ಸವಾಲನ್ನು ಎದುರಿಸಲು ಅಸಾಧ್ಯ. ದೃಢ ಮನಃಸ್ಥಿತಿ ಮತ್ತು ಸತತ ಓದಿನಿಂದ ಸಿ.ಎ ಪರೀಕ್ಷೆಯಲ್ಲಿ ಉತೀರ್ಣರಾಗಲು ಸಾಧ್ಯ ಎಂದು ಸಿ.ಎ. ಅನ್ವೇ? ಶೆಟ್ಟಿ ಹೇಳಿದರು.
ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗ ಹಾಗೂ ಅನ್ವೇಶ್ ಶೆಟ್ಟಿ & ಅಸೋಸಿಯೇಟ್ಸ್‌ನ ನಡುವೆ ನಡೆದ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ದೈನಂದಿನ ಅಭ್ಯಾಸ ಮತ್ತು ದೂರದೃಷ್ಟಿತ್ವವನ್ನು ಹೊಂದಿರಬೇಕು. ಪ್ರತಿನಿತ್ಯ ಕಲಿಯುವ ವಿ?ಯಗಳ ಬಗ್ಗೆ ಸಂದೇಹಗಳಿದ್ದಲಿ, ಚರ್ಚೆ ಮಾಡಿ ಪರಿಹರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚಿನ ಮಹತ್ವ ಪಡೆಯುತ್ತಿದ್ದು, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಮಾರ್ಸ್ ವೃತ್ತಿಪರ ಕೋರ್ಸ್‌ನ ಸಂಯೋಜಕ ಅಶೋಕ್ ಕೆ. ಜಿ., ಸಿ.ಎ. ಫೌಂಡೇಶನ್ ವಿಭಾಗದ ಸಂಯೋಜಕ ಅನಂತಶಯನ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಪರವಾಗಿ ಪ್ರಾಂಶುಪಾಲರಾದ ಡಾ. ಕುರಿಯನ್ ಹಾಗೂ ಅನ್ವೇಶ್ ಶೆಟ್ಟಿ ಮತ್ತು ಅಸೋಸಿಯೇಟ್ಸ್‌ನ ಪರವಾಗಿ ಸಿ.ಎ. ಅನ್ವೇ? ಶೆಟ್ಟಿ ಹಾಗೂ ಸಿ.ಎ. ಫ್ರೆನಿಲ್ ಡಿಸೋಜಾ ಒಡಂಬಡಿಕೆಗೆ ಸಹಿ ಹಾಕಿದರು. ವಿದ್ಯಾರ್ಥಿನಿಯರಾದ ಸ್ಪೂರ್ತಿ ಭಟ್ ಮತ್ತು ಸ್ವಾತಿ ಪ್ರಾರ್ಥಿಸಿದರೆ, ಪ್ರಜ್ಞೇಶ್ ಶೆಟ್ಟಿ ಸ್ವಾಗತಿಸಿದರು. ಶ್ರೇಯಸ್ ಹೆಬ್ಬಾರ್ ವಂದಿಸಿ, ಮನೋಜ್ ಕುಮಾರ್ ವೈ. ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.
ಒಡಂಬಡಿಕೆಯಲ್ಲಿ ಅಡಕವಾದ ಅಂಶಗಳು: ಆಳ್ವಾಸ್‌ನ ವಿದ್ಯಾರ್ಥಿಗಳಿಗೆ ರಜಾಕಾಲದ ಇಂಟರ್ನಿಶಿಪ್ ಮತ್ತು ಆರ್ಟಿಕಲ್ ಶಿಪ್‌ಗೆ ಅನುವು ಮಾಡಿಕೊಡುವುದು. ಸಿ.ಎ. ತರಬೇತುದಾರರಿಂದ ವಿದ್ಯಾರ್ಥಿಗಳ ಜೊತೆ ಪ್ರಚಲಿತ ವಿದ್ಯಾಮಾನಗಳ ಚರ್ಚೆ. ಕ್ರಾಶ್ ಕೋರ್ಸ್ ತರಗತಿಗಳು; ಸಿ.ಎ. ವ್ರತ್ತಿಪರ ಉದ್ಯೋಗದ ನಿರಂತರ ಮಾರ್ಗದರ್ಶನ; ತೆರಿಗೆ ಮತ್ತು ಲೆಕ್ಕ ಪರಿಶೋಧನೆಯ ಕುರಿತು ಹೆಚ್ಚಿನ ಬೋಧನೆ ಮತ್ತು ತರಬೇತಿಗೆ ಅವಕಾಶ; ಹೀಗೆ ಹತ್ತು ಹಲವು ಆಯಾಮಗಳಲ್ಲಿ ಅನ್ವೇಶ್ ಶೆಟ್ಟಿ ಮತ್ತು ಅಸೋಸಿಯೇಟ್ಸ್‌ನೊಂದಿಗಿನ ಒಡಂಬಡಿಕೆಯು ಆಳ್ವಾಸ್ ಕಾಲೇಜಿಗೆ ಫಲಪ್ರದವಾಗಲಿದೆ.

Related posts

ಮಹಾನಗರಪಾಲಿಕೆ ಆಡಳಿತ ಎಲ್ಲ ರಂಗಗಳಲ್ಲಿಯೂ ನಿಷ್ಕ್ರಿಯ

Times fo Deenabandhu

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

ಡಿ.೨ ರಿಂದ ೮ರವರೆಗೆ ಕನ್ನಡ ರಾಜ್ಯೋತ್ಸವ

Times fo Deenabandhu