Times of Deenabandhu
  • Home
  • ಮುಖ್ಯಾಂಶಗಳು
  • ಭಾರತದ ಮೊದಲ ಕೊರೊನಾ ವೈರಸ್​ ಪೀಡಿತ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ…ಶೀಘ್ರವೇ ಡಿಸ್​ಚಾರ್ಜ್​
ಆರೋಗ್ಯ ಮುಖ್ಯಾಂಶಗಳು

ಭಾರತದ ಮೊದಲ ಕೊರೊನಾ ವೈರಸ್​ ಪೀಡಿತ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ…ಶೀಘ್ರವೇ ಡಿಸ್​ಚಾರ್ಜ್​

ತಿರುವನಂತಪುರ: ಭಾರತದಲ್ಲಿ ಕೊರೊನಾ ವೈರಸ್​ ಪ್ರಥಮವಾಗಿ ಪತ್ತೆಯಾಗಿದ್ದು ಕೇರಳದಲ್ಲಿ. ಮಹಿಳೆಯೋರ್ವರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು.

ಕೇರಳದ ತ್ರಿಶೂರ್​ ವೈದ್ಯಕೀಯ ಕಾಲೇಜಿನಲ್ಲಿ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಮಹಿಳೆ ಈಗ ಗುಣಮುಖರಾಗುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೊರೊನಾ ಸೋಂಕಿತ ಮಹಿಳೆಯ ರಕ್ತದ ಮಾದರಿಯನ್ನು ಅಲಪ್ಪುಳದಲ್ಲಿರುವ ವೈರಾಲಜಿ ಇನ್ಸ್ಟಿಟ್ಯೂಟ್​ಗೆ ಕಳಿಸಲಾಗಿತ್ತು. ನೆಗೆಟಿವ್​ ಎಂದು ವರದಿ ಬಂದಿದೆ. ಅಂದರೆ ಕೊರೊನಾ ಸೋಂಕು ಮುಕ್ತವಾಗಿದೆ ಎಂದರ್ಥ.

ಹಾಗೇ ಅದೇ ಮಾದರಿಯನ್ನು ಮರುಪರಿಶೀಲನೆಗಾಗಿ ಪುಣೆಯ ನ್ಯಾಷನಲ್​ ಇನ್ಸ್ಟಿಟ್ಯೂಟ್ ಆಫ್​ ವೈರಾಲಜಿ ಗೂ ಕಳಿಸಿಕೊಡಲಾಗಿದೆ. ರೋಗಿಯ ರಕ್ತದ ಮಾದರಿಯನ್ನು ಮೂರನೇ ಬಾರಿಗೆ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್​ ಎಂದು ವರದಿ ಬಂದರೆ ಅವರನ್ನು ಡಿಸ್​ಚಾರ್ಜ್​ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೊನಾ ಪೀಡಿತ ಯುವತಿ ಮೆಡಿಕಲ್​ ಸ್ಟುಡೆಂಟ್​. ಚೀನಾದ ವುಹಾನ್​ನಿಂದ ಕೇರಳಕ್ಕೆ ಬಂದಿದ್ದಳು. ಇವರಲ್ಲದೆ ಇನ್ನೂ ಇಬ್ಬರಿಗೆ ಸೋಂಕು ತಗುಲಿದೆ. ಅವರಿಗೆ ಅಲಪ್ಪುಳ ಹಾಗೂ ಕಾಸರಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯವೂ ಸ್ಥಿರವಾಗಿದೆ. ಕೊರೊನಾ ವೈರಸ್​ ಪೀಡಿತ ಮೂವರೂ ಕೂಡ ಒಟ್ಟಿಗೇ ಪ್ರಯಾಣ ಮಾಡಿದ್ದರು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಕೇರಳದಲ್ಲಿ ಒಟ್ಟು 3218 ಜನರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿಟ್ಟು ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. 34 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ, ಅವರ ಆರೋಗ್ಯದ ಮೇಲೆ ಗಮನ ಇಡಲಾಗಿದೆ. ಒಟ್ಟು 345 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಅದರಲ್ಲಿ 326 ಜನರಲ್ಲಿ ವೈರಸ್ ಇಲ್ಲ ಎಂದು ವರದಿ ಬಂದಿದೆ. ಉಳಿದವರ ವೈದ್ಯಕೀಯ ವರದಿ ಇನ್ನೂ ಬರಬೇಕು ಎಂದು ಕೇರಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Related posts

ಪದೇ ಪದೇ ಅದೇ ತಪ್ಪೆಸಗಿ ಭಾರಿ ದಂಡ ತೆತ್ತ ಟೀಮ್‌ ಇಂಡಿಯಾ!

Times fo Deenabandhu

ಪೇಜಾವರ ಶ್ರೀ ಔಟ್‌ ಆಫ್ ಡೇಂಜರ್: ಆರೋಗ್ಯದಲ್ಲಿ ಚೇತರಿಕೆ

Times fo Deenabandhu

ಬಜೆಟ್‌ 2020: ಆದಾಯ ತೆರಿಗೆ ಪಾವತಿ:ಗೊಂದಲ ಮೂಡಿಸಿದ ಕೇಂದ್ರದ ಬಜೆಟ್ : ಏರಿದ್ದೇನು..? ಇಳಿದಿದ್ದೇನು..? ಎಂದಿನಂತೆ ಮತ್ತಷ್ಟು ತುಟಿ ಸುಡಲಿದೆ ಸಿಗರೇಟು..!

Times fo Deenabandhu