Times of Deenabandhu
  • Home
  • ಜಿಲ್ಲೆ
  • ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಟೆಕ್ ಉದ್ಯಮಶೀಲತೆ ಸಮಿಟ್-2020
ಜಿಲ್ಲೆ ನಮ್ಮ ವಿಶೇಷ ಶಿವಮೊಗ್ಗ

ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಟೆಕ್ ಉದ್ಯಮಶೀಲತೆ ಸಮಿಟ್-2020

Spread the love

ಶಿವಮೊಗ್ಗ: ನಗರದ ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನವ ಉದ್ಯಮಿಗಳು, ವಿದ್ಯಾರ್ಥಿಗಳು, ಉದ್ಯಮಿಗಳಾಗ ಬಯಸುವವರು, ಬಂಡವಾಳ ಹೂಡಿಕೆದಾರರ ರಾಜ್ಯಮಟ್ಟದ ಕರ್ನಾಟಕ ಟೆಕ್ ಉದ್ಯಮಶೀಲತೆ ಸಮಿಟ್-2020  ಕಾರ್ಯಕ್ರಮವನ್ನು ಕಾಲೇಜಿನ ಎಂ.ಬಿ.ಎ- ಎಂ.ಸಿ.ಎ ಸಭಾಂಗಣದಲ್ಲಿ ಫೆಬ್ರವರಿ 13 ರಿಂದ 15ರವರೆಗೆ ಮೂರು ದಿನಗಳ ಕಾಲ ಆಯೋಜಿಸಿಲಾಗಿದೆ ಎಂದು ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಆರ್ ಮಹದೇವಸ್ವಾಮಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಫೆಬ್ರವರಿ 13 ರಂದು ಬೆಳಿಗ್ಗೆ 9:30ಕ್ಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕರ್ನಾಟಕ ಸರ್ಕಾರದ ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್ ಅಶ್ವತ್ ನಾರಾಯಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಇನ್‍ವೆಂಟಸ್ ಇಂಡಿಯಾ ಮ್ಯಾನೆಂಜಿಂಗ್ ಡೈರೆಕ್ಟರ್ ಸಮಿರ್ ಕುಮಾರ, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್ ವಿಶ್ವನಾಥ, ಸಹ ಕಾರ್ಯದರ್ಶಿಗಳಾದ ಅಮರೇಂದ್ರ ಕಿರೀಟಿ ಅವರು ಭಾಗವಹಿಸಲಿದ್ದು, ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಆರ್ ಮಹದೇವಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಫೆಬ್ರವರಿ 14 ರಂದು ಸಂಜೆ 6:00ಘಂಟೆಗೆ ವಿವಿಧ ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಯಶಸ್ವಿ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದ್ದು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವರಾದ ಶ್ರೀ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೂಡಬಿದರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಶ್ರೀ ಅಶ್ವತ್ ನಾರಾಯಣ ಶೆಟ್ಟಿ, ಖಜಾಂಚಿಗಳಾದ ಶ್ರೀ ಸಿ.ಆರ್ ನಾಗರಾಜ ಅವರು ಭಾಗವಹಿಸಲಿದ್ದು, ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಆರ್ ಮಹದೇವಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಫೆಬ್ರವರಿ 15 ರಂದು ಮದ್ಯಾಹ್ನ 3:30ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಎಂ.ಎನ್ ವಿದ್ಯಾಶಂಕರ್ ಅವರು ಸಮಾರೋಪ ನುಡಿಗಳನ್ನಾಡಲಿದ್ದು, ಕೆನರಾ ಬ್ಯಾಂಕ್ ಮಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಯೊಗೀಶ್ ಅಚಾರ್ಯ, ಇಸ್ರೋ ಮಾಜಿ ನಿರ್ದೇಶಕ ಡಾ.ಎಸ್ ರಂಗರಾಜನ್, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಶ್ರೀ ಎಸ್.ಎನ್ ನಾಗರಾಜ್, ಜೆ.ಎನ್.ಎನ್.ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಆರ್ ಮಹದೇವಸ್ವಾಮಿ ಉಪಸ್ಥಿತರಿರುವರು.

ಮೂರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳನ್ನು ಉದ್ಯಮಶೀಲತೆ, ನಾವಿನ್ಯತೆ, ಸ್ಟಾರ್ಟ್ ಅಪ್‍ಗಳು, ವಿಜ್ಞಾನ ತಂತ್ರಜ್ಞಾನಗಳ ಕುರಿತಾಗಿ  ಏರ್ಪಡಿಸಲಾಗಿದ್ದು ಉದ್ಯಮ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಹಾಗೂ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ಹೊಸ ಉದ್ಯೋಗ ಅವಕಾಶಗಳ ನಿರ್ಮಾಣ, ಸ್ಟಾರ್ಟ್ ಅಪ್ ಅವಶ್ಯಕತೆಗಳು, ಸಮಸ್ಯೆಗಳನ್ನು ಅವಕಾಶಗಳನ್ನಾಗಿ ರೂಪಿಸುವ ಬಗೆ, ಉದ್ಯಮ ಕ್ಷೇತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು, ಬಾಹ್ಯಕಾಶ ಹಾಗೂ ಆಟೋಮೇಷನ್ ಕ್ಷೇತ್ರದಲ್ಲಿನ ಹೊಸ ಅವಕಾಶಗಳ, ಉದ್ಯಮದ ಆರಂಭಿಕ ಸವಾಲುಗಳನ್ನು ಎದುರಿಸಲು ಅಗತ್ಯ ಬೆಂಬಲಗಳ ಕುರಿತಾಗಿ ಚರ್ಚೆಗಳು ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಸ್ಥಾಪಕಮತ್ತುಸಿಟಿಒ, ಗ್ರ್ಯಾಂಡ್‌ಕ್ಯಾನಲ್ಸ್ಮತ್ತುಪಾರ್ಸೆಲ್ಪರಿಹಾರಗಳನಿರ್ದೇಶಕಸಿ.ಎಚ್. ರಾಬಿನ್ಸನ್, ಕ್ಯಾಲಿಫೋರ್ನಿಯಾ, ಯುಎಸ್ಎಶ್ರೀ ಅರುಣ್ ರಾವ್, ಮುಂಬೈ ಲೀಡ್ ಏಂಜಲ್ಸ್ ವೃತ್ತಿಪರ ಸೇವೆಗಳ ಮುಖ್ಯಸ್ಥ ಶ್ರೀ ಸುಮನ್ ಸೇನ್ ಗುಪ್ತ,  ಪಾರ್ಟ್‍ನರ್ ಅಕ್ಯೂಮನ್ ಫಂಡ್ ಮತ್ತು ಸ್ಟಾರ್ಟ್ ಅಪ್ ಸಲಹೆಗಾರರಾದ ನಾಗರಾಜ್ ಶ್ರೀ ಪ್ರಕಾಶಮ್, ಸ್ಟಾರ್ಟ್ ಅಪ್ ಸಲಹೆಗಾರರಾದ ಶ್ರೀ ಅಜಯ್ ಮುತ್ರೇಜ, ಇನ್‍ವೆಂಟಸ್ ಇಂಡಿಯಾ ಪ್ರಧಾಸ ವ್ಯವಸ್ಥಾಪಕರಾದ ಸಮಿರ್ ಕುಮಾರ್, ರೈಟಿಫಿ ಟೆಕ್ನೊಲಜೀಸ್ ಸ್ಥಾಪಕರಾದ ಶ್ರೀಮಹೇಶ ಪಂಡಿತ್, ಬೆಂಗಳೂರು ಐ.ಐ.ಎಸ್.ಸಿ ಅದ್ಯಾಪಕರಾದ ಡಾ. ಎಂ.ಹೆಚ್ ಬಾಲಸುಬ್ರಮಣ್ಯ, ದೆಹಲಿಯ ಸಂಶೋಧನಾ ವಿಶ್ಲೇಷಕ ಶ್ರೀ ಸುಮಂತ್ ಪರಿಮಲ್, ಪೂಣೆಯ ಯುನಿವರ್ಸಲ್ ಟೆಸ್ಟ್ ಸೊಲ್ಯುಷನ್ಸ್ ಸ್ಥಾಪಕರಾದ ಶ್ರೀ ಬ್ರಜೇಶ್ ಸಿಂಗ್, ಗ್ರೀನ್ ಬಬಲ್ಸ್ ಟೆಕ್ನೊಲಜೀಸ್ ನಿರ್ದೇಶಕರಾದ ಶ್ರೀ ದೀರ್ ಲಲಿತ್ ಗುಪ್ತ, ಪೂಣೆಯ ಡಿಫೆನ್ಸ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಟೆಕ್ನಾಲಜಿಯ ಮಾಜಿ ಉಪಕುಲಪತಿ ಪದ್ಮಶ್ರೀ ಡಾ. ಪ್ರಹ್ಲಾದ್‍ಸೇರಿದಂತೆಭಾರತದ ವಿವಿದೆಡೆಗಳಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ನಮ್ಮ ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜಕತ್ವವನ್ನು ಕೆನರಾ ಬ್ಯಾಂಕ್ ನೀಡುತ್ತಿದ್ದು, ಮೂರು ದಿನಗಳ ಕಾಲ ಕಾರ್ಯಕ್ರಮ ಸಭಾಂಗಣದ ಹಿಂಭಾಗದಲ್ಲಿ ವಿವಿಧ ಕಂಪನಿಗಳ ಕುರಿತ ಮಾಹಿತಿಗಳ ಎಕ್ಸಿಬಿಷನ್ ನಡೆಯಲಿದೆ. ಶಿವಮೊಗ್ಗ ಸೇರಿದಂತೆ ಕರ್ನಾಟಕದ ಇತರೇ ಜಿಲ್ಲೆಗಳಿಂದ ಉದ್ಯಮಿಗಳು, ಉದ್ಯಮಿಗಳಾಗ ಬಯಸುವವರು, ಉದ್ಯಮ ಕ್ಷೇತ್ರದ ತಜ್ಞರು, ವಿದ್ಯಾರ್ಥಿಗಳು, ಅದ್ಯಾಪಕರುಗಳು ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದ ಮೂಲಕ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ಸ್ಟಾರ್ಟ್-ಅಪ್‍ಗಳನ್ನು ಪ್ರಾರಂಭಿಸಲು ಹಾಗೂ ಉದ್ಯಮಶೀಲತೆ ಮನೋಭಾವವನ್ನು ರೂಪಿಸುವ ಮೂಲಕ ಹೊಸ ಉದ್ಯೋಗಗಳನ್ನು ಮತ್ತು ಆದಾಯವನ್ನು ಉತ್ಪಾದಿಸುವ ಕಂಪನಿಗಳನ್ನು ಪ್ರಾರಂಭಿಸುವುದರೊಂದಿಗೆ 2030 ರ ವೇಳೆಗೆ ಸುಮಾರು 1000 ಉದ್ಯೋಗಗಳ ಸೃಷ್ಟಿಸುವ ಮೂಲಕ 100 ಕೋಟಿ ಆದಾಯವನ್ನು ಉತ್ಫಾದಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ಎ.ಎಸ್ ವಿಶ್ವನಾಥ, ಉಪಾಧ್ಯಕ್ಷರಾದ ಶ್ರೀ  ಅಶ್ವತ್ ನಾರಾಯಣ ಶೆಟ್ಟಿ, ಖಜಾಂಚಿಗಳಾದ ಶ್ರೀ ಸಿ.ಆರ್ ನಾಗರಾಜ, ಕುಲಸಚಿವರಾದ ಪ್ರೋ. ಹೂವಯ್ಯ ಗೌಡ, ಅದ್ಯಾಪಕರಾದ ಡಾ. ಎಂ.ಜಿ ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

 

 

 


Spread the love

Related posts

ಕ್ಷಣಿಕ ಸುಖಕ್ಕೆ ಜೀವನ ಬಲಿಯಾಗದಿರಲಿ

Times fo Deenabandhu

ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮದಲ್ಲಿ ಸರ್ವಾಂಗೀಣಾಭಿವೃದ್ದಿಗೆ ಆದ್ಯತೆ – ಬಿ.ವೈ. ರಾಘವೇಂದ್ರ

Times fo Deenabandhu

ಬಿಜೆಪಿ ಸರ್ಕಾರ ಪೂರ್ಣಾವಧಿ ಇರುತ್ತದೆ

Times fo Deenabandhu
accumsan risus leo tempus commodo ante. dapibus libero amet, quis libero mattis