Times of Deenabandhu
  • Home
  • ಮುಖ್ಯಾಂಶಗಳು
  • ಎಪಿಜೆ ಅಬ್ದುಲ್ ಕಲಾಂ ಅವರ ಬಯೋಪಿಕ್​ನ ಫಸ್ಟ್​ ಲುಕ್​ ಫೋಸ್ಟರ್ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
ಮುಖ್ಯಾಂಶಗಳು

ಎಪಿಜೆ ಅಬ್ದುಲ್ ಕಲಾಂ ಅವರ ಬಯೋಪಿಕ್​ನ ಫಸ್ಟ್​ ಲುಕ್​ ಫೋಸ್ಟರ್ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

ನವದೆಹಲಿ: ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಬಯೋಪಿಕ್​ನ ಫಸ್ಟ್​ ಲುಕ್ ಪೋಸ್ಟರನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್​ ಭಾನುವಾರ ಬಿಡುಗಡೆ ಮಾಡಿದರು.
ಎಪಿಜೆ ಅಬ್ದುಲ್ ಕಲಾಂ: ದ ಮಿಸೈಲ್ ಮ್ಯಾನ್ ಎಂಬುದು ಸಿನಿಮಾದ ಹೆಸರು. ಈ ಸಿನಿಮಾ ಈ ವರ್ಷ ಕೊನೆಯ ಭಾಗದಲ್ಲಿ ತೆರೆ ಕಾಣಲಿದ್ದು, ಹಾಲಿವುಡ್ ಮತ್ತು ತೆಲುಗು ಸಿನಿಮಾ ಇಂಡಸ್ಟ್ರಿ ಸೇರಿ ಇದನ್ನು ನಿರ್ಮಿಸುತ್ತಿವೆ.
ಸಚಿವ ಜಾವಡೇಕರ್ ತನ್ನ ಟ್ವಿಟರ್​ನಲ್ಲಿ ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದು, ನವದೆಹಲಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟ ಅಲಿ ಇದರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಜಗದೀಶ್​ ದಾನೇಟಿ, ಸುವರ್ಣ ಪಪ್ಪು, ಮಾರ್ಟಿನಿ ಫಿಲಮ್ಸ್​ ಇದನ್ನು ನಿರ್ಮಿಸುತ್ತಿದ್ದಾರೆ. ಅಮೆರಿಕ ಮೂಲದ ಮಾರ್ಟಿನಿ ಫಿಲಮ್ಸ್​, ಪಿಂಕ್​ ಜಾಗ್ವಾರ್​ ಎಂಟರ್​ಟೇನ್​ಮೆಂಟ್​ ಮತ್ತು ಇತರೆ ಕೆಲವು ಸಹನಿರ್ಮಾಪಕರು ಸೇರಿ ಛತ್ರಪತಿ ಶಿವಾಜಿ ಮಹಾರಾಜ್​, ಫಸ್ಟ್ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್​ ಸೇರಿ ಭಾರತದಲ್ಲಿ 5 ಪ್ರಾಡಕ್ಷನ್​ಗಳ ಮೂಲಕ 100 ಕೋಟಿ ಡಾಲರ್​ಗೂ ಅಧಿಕ ಹಣವನ್ನು ಹೂಡಿಕೆ ಮಾಡುತ್ತಿದೆ ಎಂದು ಸಚಿವ ಜಾವಡೇಕರ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅಲಿ, ಸಿನಿಮಾ ನಿರ್ಮಾಪಕ ಮಧುರ್ ಭಂಡಾರ್ಕರ್​, ಮಾರ್ಟಿನ್ ಮತ್ತು ಇತರರು ಹಾಜರಿದ್ದರು.

Related posts

ಗೌರಿಬಿದನೂರಿನಲ್ಲಿ ಮತ್ತೆ ಐವರಿಗೆ ಕೊರೊನಾ: ಜಿಲ್ಲೆಯಲ್ಲಿ 9 ಜನಕ್ಕೆ ಸೋಂಕು

Times fo Deenabandhu

ಸರಳವಾಗಿ ನಡೆದ ಸ್ವಾತಂತ್ರ್ಯ ದಿನಾಚರಣೆ

Times fo Deenabandhu

 ಕೆಲಸ ಕೊಡಿ ಎಂದು ಟ್ವಿಟರ್‌ನಲ್ಲಿ‌ ಪ್ರಧಾನಿ ಮೋದಿಯ ದುಂಬಾಲು ಬಿದ್ದ ದೇಶದ ಯುವಜನ

Times fo Deenabandhu