Times of Deenabandhu
  • Home
  • ಪ್ರಧಾನ ಸುದ್ದಿ
  • ತಿರುಪತಿ ದರ್ಶನ: ನಕಲಿ ವೆಬ್‌ಸೈಟ್‌ಗಳ ವಿರುದ್ಧ ದೂರು, ಅಸಲಿ ವೆಬ್ ಸೈಟ್ ಗಳ ವಿವರ
ಧರ್ಮ ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ತಿರುಪತಿ ದರ್ಶನ: ನಕಲಿ ವೆಬ್‌ಸೈಟ್‌ಗಳ ವಿರುದ್ಧ ದೂರು, ಅಸಲಿ ವೆಬ್ ಸೈಟ್ ಗಳ ವಿವರ

ಹೈದರಾಬಾದ್‌: ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನ (ಟಿಟಿಡಿ)ದ ದರ್ಶನ ಕೊಡಿಸುತ್ತೇವೆ ಎಂದು ಹೇಳಿ ಭಕ್ತಾದಿಗಳಿಂದ ವೆಬ್ ಸೈಟ್ ಮೂಲಕ ಹಣ ವಸೂಲು ಮಾಡುತ್ತಿದ್ದ 19 ನಕಲಿ ವೆಬ್ ಸೈಟ್‌ಗಳ ವಿರುದ್ಧ ಟಿಟಿಡಿ ಟ್ರಸ್ಟ್‌ನ ಜಾಗೃತ ದಳ ವಿಭಾಗವು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ.
ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ವೆಬ್‌ಸೈಟ್‌ಗಳು, ಯಾತ್ರಾರ್ಥಿಗಳಿಂದ ವಿವಿಧ ದರ್ಶನಗಳು, ದೇವರ ಸೇವೆಗಳು ಮತ್ತು ವಸತಿ ಸೌಕರ್ಯಗಳಿಗಾಗಿ ಹಣ ಪಡೆದು ಮೋಸ ಮಾಡುತ್ತಿವೆ.

‘ನಮ್ಮ ವೆಬ್‌ಸೈಟ್‌ನಲ್ಲಿ ದರ್ಶನ ಅಥವಾ ಸೇವಾ ಟಿಕೆಟ್‌ಗಳು ಮತ್ತು ವಸತಿ ಸೌಕರ್ಯ ಖಾಲಿಯಾದ ನಂತರ ಕೆಲವು ಭಕ್ತರು ಅನಧಿಕೃತ ವೆಬ್‌ಸೈಟ್‌ಗಳಿಗೆ ಲಾಗ್‌ಇನ್‌ ಆಗಿ ಮೋಸ ಹೋಗುತ್ತಿದ್ದಾರೆ. ಈ ಕುರಿತು ನಮ್ಮ ಕಾಲ್‌ ಸೆಂಟರ್‌ಗೆ ಹಲವಾರು ದೂರುಗಳು ಬಂದಿವೆ’ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ತಿಳಿಸಿದ್ದಾರೆ.

‘ಭಕ್ತರು ನೀಡಿದ ದೂರಿನ ಆಧಾರದ ಮೇಲೆ ಜಾಗೃತ ದಳದವರು ನಕಲಿ ವೆಬ್‌ಸೈಟ್‌ಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದಾರೆ. ಇಂಥ ನಕಲಿ ವೆಬ್‌ಸೈಟ್‌ಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಭಕ್ತರಲ್ಲಿ ಮನವಿ ಮಾಡುತ್ತೇನೆ. ಟಿಟಿಡಿ ಅಧಿಕೃತ ವೆಬ್‌ಸೈಟ್‌ಗಳಾದ tirupatibalaji.ap.gov.in ಮತ್ತು ttdsevaonline.com ಗಳಲ್ಲಿ ಮಾತ್ರ ದರ್ಶನ ಟಿಕೆಟ್‌, ವಸತಿ ಇತ್ಯಾದಿ ಸೇವೆಗಳಿಗೆ ಲಾಗ್‌ಇನ್‌ ಆಗಬೇಕು. ಟಿಟಿಡಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ www.tirumala.org ಸಂಪರ್ಕಿಸಬಹುದು’ ಎಂದು ಅವರು ಹೇಳಿದ್ದಾರೆ.

‘ಜಮ್ಮುವಿನಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ನಿರ್ಮಾಣ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ. ವಾರಾಣಸಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಮಂಡಳಿ ಅನುಮೋದನೆ ನೀಡಿದೆ. ಮಹಾರಾಷ್ಟ್ರ ಸರ್ಕಾರ ಬಾಂದ್ರಾದಲ್ಲಿ ಭೂಮಿ ಮಂಜೂರು ಮಾಡಿದ್ದು, ₹30 ಕೊಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಆಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ಕನ್ಯಾಕುಮಾರಿ, ಕುರುಕ್ಷೇತ್ರ, ಹೈದರಾಬಾದ್‌ನಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಚೆನ್ನೈ, ವಿಶಾಖಪಟ್ಟಣ, ಭುವನೇಶ್ವರದಲ್ಲಿ ನಿರ್ಮಾಣ ಕಾರ್ಯ ನಡೆದಿದೆ. ಸದ್ಯದಲ್ಲೇ ಕುರುಕ್ಷೇತ್ರದಲ್ಲಿ ವೇದ ಪಾಠಶಾಲಾ ಆರಂಭಿಸಲಾಗುವುದು’ ಎಂದು ಸಿಂಘಾಲ್‌ ಹೇಳಿದ್ದಾರೆ.

ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾದ ನಕಲಿ ವೆಬ್‌ಸೈಟ್‌ಗಳು

1.www.ttdtickets.com,

2.www.ttddarshan.com,

3. Tirupatibalajidarshantickets.co.in,

4.tirupatibalajidarshanbooking.com,

5.ttdbalajidarshan.com,

6.myspiritualyatra.com,

7. tirupatibalajidarshan.co.in,

8.tirupatibalajidarshan.org,

9.www.mybalaji.in,

10. bookingtirupatidarshan.com,

11. www.templeyatri.com,

12. tirupatibalajitemple.com,

13. www.tirupatibalajidarshanbooking.co.in,

14. tirupatitourism.in,

15. tirupatitourismseva.com,

16. padmavathitravels.in, 17.ttddarshan.com,

18. tirupatibalajidarshanbooking.co.in,

19.tirupatidarshanbooking.org.

Related posts

ಕೊರೋನಾ ವೈರಸ್ ಎಚ್ಚರಿಕೆಗಾಗಿ ಯಕ್ಷಗಾನದ ಮೂಲಕ ಜನಜಾಗೃತಿ

Times fo Deenabandhu

ಒಂದೇ ಶ್ವಾನಕ್ಕೆ ಇಬ್ಬರ ಕಿತ್ತಾಟ…! ಧರ್ಮಸಂಕಟದಲ್ಲಿ ಸಿಲುಕಿದ್ದ ಪೊಲೀಸರು ಮಾಡಿದ್ದೇನು ಗೊತ್ತಾ…?

Times fo Deenabandhu

26 ಲಕ್ಷ ರೂ. ಮೌಲ್ಯದ ಆಹಾರ ವಸ್ತುಗಳನ್ನು ಎಸೆದ ಸೂಪರ್‌ ಮಾರ್ಕೆಟ್…! ಯಾಕೆ ಗೊತ್ತಾ…?

Times fo Deenabandhu