Times of Deenabandhu
  • Home
  • ಜಿಲ್ಲೆ
  • ಮೈಸೂರು ಸಿಲ್ಕ್ಸ್ ಶ್ರೇಷ್ಠತೆಯ ಪ್ರತೀಕ : ಕೆ.ಬಿ.ಶಿವಕುಮಾರ್
ಜಿಲ್ಲೆ ಶಿವಮೊಗ್ಗ

ಮೈಸೂರು ಸಿಲ್ಕ್ಸ್ ಶ್ರೇಷ್ಠತೆಯ ಪ್ರತೀಕ : ಕೆ.ಬಿ.ಶಿವಕುಮಾರ್

ಶಿವಮೊಗ್ಗ, ಫೆ. 07  : ಜಾಗತಿಕವಾಗಿ ಅಗ್ರಪಂಕ್ತಿಯಲ್ಲಿ ಗುರುತಿಸಲ್ಪಡುವ ಮೈಸೂರು ಸಿಲ್ಕ್ಸ್ ಉತ್ಪನ್ನಗಳು ನಾಡಿನ ಹೆಮ್ಮೆ ಹಾಗೂ ಶ್ರೇಷ್ಠ ಪರಂಪರೆಯ ಪ್ರತೀಕವೆನಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇಂದಿನಿಂದ 5ದಿನಗಳ ಕಾಲ ನಡೆಯಲಿರುವ ಮೈಸೂರು ಸಿಲ್ಕ್ ಸೀರೆ ಹಾಗೂ ಸಿಲ್ಕ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಕಲು ಮಾಡಲಾಗದಂತಹ ಮೈಸೂರು ಸಿಲ್ಕ್ ಉತ್ಪನ್ನಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವರ್ಷಕ್ಕೆ 2ಬಾರಿ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದೆ. ಇಲ್ಲಿನ ಉತ್ಪನ್ನಗಳನ್ನು ಶ್ರೀಸಾಮಾನ್ಯರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಖರೀದಿಸಬಹುದಾಗಿದೆ. ಅಂತೆಯೆ ಸಂಸ್ಥೆಯು ಕಾ¯ಕಾಲಕ್ಕೆ ನವೀನ ವಿನ್ಯಾಸದ ಉತ್ಪನ್ನಗಳನ್ನು ಜನರ ಬೇಡಿಕೆಗನುಗುಣವಾಗಿ ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂದವರು ನುಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೈಸೂರು ಸಿಲ್ಕ್ ಸಂಸ್ಥೆಯ ವಿಭಾಗೀಯ ಅಧಿಕಾರಿ ಭಾನುಪ್ರಕಾಶ್ ಅವರು ಮಾತನಾಡಿ, ಮಾರುಕಟ್ಟೆಯಲ್ಲಿ ದಿನೇದಿನೇ ರೇಷ್ಮೇ ಉತ್ಪನ್ನಗಳಿಗಾಗಿ ಜನರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವರ್ಷಕ್ಕೆ 2ಬಾರಿ ಮೇಳಗಳನ್ನು ಆಯೋಜಿಸಲಾಗುತ್ತಿದೆ. ರೂ.6,000/-ಗಳಿಂದ 1.50ಲಕ್ಷ ರೂ.ಗಳವರೆಗಿನ ಮೌಲ್ಯದ ಹೊಸ ವಿನ್ಯಾಸದ ಸೀರೆಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ ಎಂದರು.

ಶ್ರೇಷ್ಠ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಮೈಸೂರು ಸಿಲ್ಕ್ ಉತ್ಪನ್ನಗಳನ್ನು ದೇಶಕ್ಕೆ ಬರುವ ವಿದೇಶಿ ಪ್ರವಾಸಿಗರು ಹೆಮ್ಮೆಯಿಂದ ಖರೀದಿಸಿ ಹಿಂದಿರುಗುತ್ತಾರೆ ಎಂದ ಅವರು ಸಂಸ್ಥೆಯು ಉತ್ಪಾದಿಸುವ ರೇಷ್ಮೇ ಬಟ್ಟೆಗಳಿಗೆ ಕಳೆದ ಕೆಲವು ವರ್ಷಗಳಿಂದ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ಪಡೆಯುತ್ತ ಮುಂದುವರೆಯುತ್ತಿರುವುದು ಹರ್ಷದ ಸಂಗತಿಯಾಗಿದೆ ಎಂದವರು ನುಡಿದರು.

ಈ ಸಂದರ್ಭದಲ್ಲಿ ಮೈಸೂರು ಸಿಲ್ಕ್ ಸಂಸ್ಥೆಯ ವ್ಯವಸ್ಥಾಪಕರು, ಮಾರಾಟ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

 

 

 

 

 

 

Related posts

ಮಾಸಿಕ 12 ಸಾವಿರ ಗೌರವಧನ ನಿಗದಿಪಡಿಸಲು ಮುಖ್ಯಮಂತ್ರಿಗಳಿಗೆ ಆಶಾ ಕಾರ್ಯಕರ್ತೆಯರ ಆಗ್ರಹ …..

ಸಾಹಸ ಕ್ರೀಡೆಗಳಲ್ಲಿ ಸುರಕ್ಷತೆಗೆ ಪ್ರಥಮಾಧ್ಯತೆ ನೀಡಿ

Times fo Deenabandhu

ಬಸ್, ರೈಲು ನಿಲ್ದಾಣಗಳಲ್ಲಿ ಜ್ವರ ತಪಾಸಣೆಗೆ ವ್ಯವಸ್ಥೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Times fo Deenabandhu