Times of Deenabandhu
ಕ್ರೀಡೆ ಜಿಲ್ಲೆ ಶಿವಮೊಗ್ಗ

ಕರ್ನಾಟಕಕ್ಕೆ ಆರಂಭಿಕ ಅಘಾತ

ಶಿವಮೊಗ್ಗ: ಮಧ್ಯಪ್ರದೇಶ ಮತ್ತು ಕರ್ನಾಟಕ ತಂಡಗಳ ನಡುವೆ ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕ ಆರಂಭ ಅಘಾತ ಅನುಭವಿಸಿದೆ.
ಇಂದು ಮಧ್ಯಪ್ರದೇಶ ತಂಡ ಟಾಸ್ ಗೆದ್ದರೂ ಕೂಡ ಕರ್ನಾಟಕ ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತ್ತು. ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಆರಂಭದಲ್ಲಿಯೇ ಅಘಾತ ಕಂಡಿತು. ಖಾತೆ ತೆರೆಯದೇ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪೆಡಿಕಲ್ ಫೆವಿಲಿಯನ್‌ಗೆ ತೆರಳಿದರು. ಮಧ್ಯಪ್ರದೇಶ ತಂಡದ ರವಿಯಾದವ್ ಅವರ ಬೌಲಿಂಗ್‌ಗೆ ದೇವದತ್ ವಿಕೇಟ್ ಒಪ್ಪಿಸಿದರು.
ನಂತರ ೨ನೇ ವಿಕೇಟ್ ಕೂಡ ಬೇಗನೆ ಪತನವಾಯಿತು. ರೋಹನ್‌ಕದಂ ೯ ರನ್ ಗಳಿಸಿ ಗೌರವ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇತ್ತೀಚಿನ ವರದಿ ಬಂದಾಗ ೩ ವಿಕೆಟ್ ನಷ್ಟಕ್ಕೆ ಕರ್ನಾಟಕ ತಂಡವು ೯೪ ರನ್ ಗಳಿಸಿತ್ತು. ಸಮರ್ಥ ೩೦ ರನ್ ಗಳಿಸಿ ಮತ್ತು ಕೆ.ವಿ.ಸಿದ್ದಾರ್ಥ ೫ ರನ್ ಗಳಿಸಿ ಆಟವಾಡುತ್ತಿದ್ದಾರೆ.
ಇಂದು ಬೆಳಿಗ್ಗೆ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಗಂಟೆ ಬಾರಿಸುವುದರ ಮೂಲಕ ಕರ್ನಾಟಕ ಮತ್ತು ಮಧ್ಯಪ್ರದೇಶ ರಣಿಜಿ ಪಂದ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಿ.ಎಸ್.ಅರುಣ್, ರೋಜರ್ ಬಿನ್ನಿ, ನಾಗರಾಜ್ ಸೇರಿದಂತೆ ಕೆಎಸ್‌ಸಿಎ ಪದಾಧಿಕಾರಿಗಳು ಭಾಗವಹಿಸಿದ್ದರು.

Related posts

ಆಳ್ವಾಸ್‌ನ ಅಸೀಮಾ ದೋಲಾ ರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಆಯ್ಕೆ

Times fo Deenabandhu

ಪದವೀಧರ ಸಹಕಾರ ಸಂಘವು ಪ್ರಗತಿಯತ್ತ: ಹೆಚ್.ಸಿ.ಸುರೇಶ್

Times fo Deenabandhu

ರಥ ಸಪ್ತಮಿ ಅಂಗವಾಗಿ ಸೂರ್ಯಥಾನ್ 2020

Times fo Deenabandhu