Times of Deenabandhu
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಉಗ್ರರ ವಿರುದ್ಧ ಕಾದಾಡುವ ಯೋಧರಿಗೆ ಸರಿಯಾದ ಊಟ, ಬಟ್ಟೆ ಸಿಗ್ತಿಲ್ಲ..!

ಹೊಸ ದಿಲ್ಲಿ: ಸಿಯಾಚಿನ್‌, ಲಡಾಖ್‌ ಮತ್ತು ಡೋಕ್ಲಾಮ್‌ನಂತಹ ದುರ್ಗಮ ಹಾಗೂ ಎತ್ತರದ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಿಗೆ ಸರಿಯಾದ ರೀತಿಯ ಸತ್ವಯುತ ಆಹಾರ ಮತ್ತು ಹವಾಮಾನ ವೈಪರೀತ್ಯ ತಡೆಯುವ ಉಡುಗೆ ತೊಡುಗೆಗಳು ಪೂರೈಕೆಯಾಗುತ್ತಿಲ್ಲ ಎನ್ನುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ಸೇನಾ ಸಾಮಗ್ರಿಗಳ ಪೂರೈಕೆಗೆ ನವೀಕೃತ ನಿಯಮಗಳು ಜಾರಿಯಾಗಿಲ್ಲ. ಹಳೆಯ ಮಾನದಂಡಗಳಿಂದ ಅನೇಕ ತಾಪತ್ರಯಗಳು ಎದುರಾಗಿವೆ. ಅತಿ ಕ್ಲಿಷ್ಟ ಹವಾಮಾನ ಇರುವ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ಸೂಕ್ತ ರೀತಿಯ ಉಡುಪು ಮತ್ತು ಸಾಮಗ್ರಿಗಳು ಪೂರೈಕೆಯಾಗುತ್ತಿಲ್ಲ. ಇದರಿಂದ ಯೋಧರ ಸ್ಥಿತಿ ಹದಗೆಡುತ್ತಿದೆ ಎಂದು ಸಂಸತ್ತಿನಲ್ಲಿ ಮಂಡನೆಯಾದ ಸಿಎಜಿ ವರದಿ ತಿಳಿಸಿದೆ.
ಮೂಲ ವಸ್ತುಗಳನ್ನು ದುಬಾರಿ ವಸ್ತುಗಳ ಜತೆ ವಿನಿಮಯ ಮಾಡಿಕೊಳ್ಳಲು ಅವಕಾಶ ಇರುವುದರಿಂದ ಆಹಾರ ಗುಣಮಟ್ಟದ ಮೇಲೆ ಮಾರಕ ಪರಿಣಾಮ ಉಂಟಾಗುತ್ತಿದೆ. ವಿನಿಮಯ ಪದ್ಧತಿಯಿಂದ ಕಡಿಮೆ ಗುಣಮಟ್ಟದ ಆಹಾರ ಪಡೆಯುವುದರಿಂದ ಯೋಧರು ತೆಗೆದುಕೊಳ್ಳುತ್ತಿರುವ ಕ್ಯಾಲೋರಿ ಪ್ರಮಾಣ ಕುಸಿಯುತ್ತಿದೆ. ಸೈನ್ಯದ ಪೂರ್ವ ಕಮಾಂಡ್‌ ಮುಕ್ತ ಟೆಂಡರ್‌ ವ್ಯವಸ್ಥೆಯ ಮೂಲಕ ಸಾಮಗ್ರಿಗಳನ್ನು ಪಡೆದರೆ, ಉತ್ತರ ಕಮಾಂಡ್‌ ಸೀಮಿತ ಟೆಂಡರಿಂಗ್‌ ಮೂಲಕ ಸಂಗ್ರಹಿಸುತ್ತಿದೆ. ಇದು ಕೂಡ ಆಹಾರ ಮತ್ತು ಇತರ ಸಾಮಗ್ರಿಗಳ ಗುಣಮಟ್ಟದಲ್ಲಿ ವ್ಯತ್ಯಯವಾಗಲು ಕಾರಣವಾಗಿದೆ ಎಂದು ಸಿಎಜಿ ತಿಳಿಸಿದೆ.
ಎತ್ತರದ ತಾಣಗಳಲ್ಲಿ ನಿಯೋಜನೆಗೊಂಡ ಯೋಧರಿಗೆ ಸೂಕ್ತ ಉಡುಪುಗಳನ್ನು ಖರೀದಿಸಲೆಂದೇ 2007ರಲ್ಲಿ ಉನ್ನತ ಸಮಿತಿಯೊಂದನ್ನು ರಕ್ಷಣಾ ಸಚಿವಾಲಯ ರಚಿಸಿತ್ತು. ಆದರೆ ಈ ಸಮಿತಿಯಿಂದಲೂ ದಕ್ಷತೆ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ನಾಲ್ಕು ವರ್ಷ ಕಳೆದರೂ ಅಂತಹ ಸಮವಸ್ತ್ರಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಎಂದು ವರದಿ ವಿವರಿಸಿದೆ.

Related posts

ಚಾರ್ಮಾಡಿ ಘಾಟಿ: ಮಿನಿ ಬಸ್‌ಗಳಿಗೆ ಅನುಮತಿ, ಭಾರೀ ವಾಹನಗಳ ಮೇಲಿನ ನಿರ್ಬಂಧ ಮಂದುವರಿಕೆ

Times fo Deenabandhu

26 ಲಕ್ಷ ರೂ. ಮೌಲ್ಯದ ಆಹಾರ ವಸ್ತುಗಳನ್ನು ಎಸೆದ ಸೂಪರ್‌ ಮಾರ್ಕೆಟ್…! ಯಾಕೆ ಗೊತ್ತಾ…?

Times fo Deenabandhu

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಿಳಾ ಸಾಮ್ರಾಜ್ಯ; ಮೇಯರ್ ಆಗಿ ಸುವರ್ಣಾ, ಉಪಮೇಯರ್ ಸುರೇಖಾ ಆಯ್ಕೆ

Times fo Deenabandhu