Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಪ್ರಧಾನಿ ಮೋದಿ ಭದ್ರತೆಗೆ ೬೦೦ ಕೋಟಿ .!

ನವದೆಹಲಿ: ಕೇಂದ್ರ ಹಣಕಾಸು ಸಚಿವರು ಶನಿವಾರ ಲೋಕಸಭೆಯಲ್ಲಿ ಮಂಡಿಸಿರುವ 2020-21ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಪ್ರಧಾನ ಮಂತ್ರಿ ಭದ್ರತೆಗಾಗಿ ೬೦೦ ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಪ್ರಧಾನ ಮಂತ್ರಿಗೆ ಭದ್ರತೆ ಕಲ್ಪಿಸುವ ವಿಶೇಷ ರಕ್ಷಣಾ ಪಡೆ( ಎಸ್ ಪಿ ಜಿ)ಯಲ್ಲಿ ೩೦೦ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗಾಗಿ ಕಳೆದ ವರ್ಷ ೫೪೦ ಕೋಟಿ ರೂ ಹಂಚಿಕೆ ಮಾಡಲಾಗಿತ್ತು. ಅದಕ್ಕೂ ಹಿಂದಿನ ವರ್ಷ ಎಸ್ ಪಿ ಜಿಗೆ ೪೨೦ ಕೋಟಿರೂ ವೆಚ್ಚಮಾಡಲಾಗಿತ್ತು.
ಈ ಹಿಂದೆ ಗಾಂಧಿ ಕುಟುಂಬ ಸದಸ್ಯರಿಗೂ ಎಸ್‌ಪಿಜಿ ಭದ್ರತೆ ಒದಗಿಸಲಾಗಿತ್ತು. ಆದರೆ. ಕಳೆದ ವರ್ಷದ ನವೆಂಬರ್‌ನಿಂದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ಒದಗಿಸಿದ್ದ ಎಸ್‌ಪಿಜಿ ಭದ್ರತಾ ವ್ಯವಸ್ಥೆಯನ್ನು ಮೋದಿ ಸರ್ಕಾರ ವಾಪಸ್ಸು ಪಡೆದುಕೊಂಡಿದೆ.
ಎಸ್‌ಪಿಜಿ ಶಿಷ್ಟಚಾರವನ್ನು ಗಾಂಧಿ ಕುಟುಂಬ ಸದಸ್ಯರು ಉಲ್ಲಂಘಿಸಿದ ಕಾರಣ ಎಸ್‌ಪಿಜಿ ಭದ್ರತೆ ವಾಪಸ್ಸು ಪಡೆಯಲಾಗಿದೆ ಎಂದು ಸರ್ಕಾರ ಸಮರ್ಥನೆ ನೀಡಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ದೇವೇಗೌಡ ಕೂಡ ಎಸ್ ಜಿ ಜಿ ಭದ್ರತಾ ಪಟ್ಟಿಯಲ್ಲಿದ್ದಾರೆ.
.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ, ೧೯೮೫ ರಲ್ಲಿ ಎಸ್‌ಪಿಜಿ ಭದ್ರತಾ ವ್ಯವಸ್ಥೆಯನ್ನು ದೇಶದಲ್ಲಿ ಸ್ಥಾಪಿಸಲಾಯಿತು. ಪ್ರಧಾನಮಂತ್ರಿ ಸುರಕ್ಷತೆಗಾಗಿ ಈ ಪಡೆಯನ್ನು ಸ್ಥಾಪಿಸಲಾಯಿತು. ನಂತರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ನಂತರ, ಗಾಂಧಿ ಕುಟುಂಬ ಸದಸ್ಯರಿಗೆ ಎಸ್ ಪಿ ಜಿ ಭದ್ರತಾ ವ್ಯವಸ್ಥೆ ಒದಗಿಸಲಾಗಿತ್ತು.

ಪ್ರಧಾನಿ ಸ್ಥಾನದಿಂದ ಕೆಳಗಿಳಿದ ನಂತರವೂ ಎಸ್‌ಪಿಜಿ ಭದ್ರತೆಯನ್ನು ಮಾಜಿ ಪ್ರಧಾನಿಗಳಿಗೆ ಮುಂದುವರಿಯಲಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಾಯುವವರೆಗೂ ಎಸ್‌ಪಿಜಿ ಭದ್ರತೆ ಒದಗಿಸಲಾಗಿತ್ತು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಒದಗಿಸಿದ್ದ ಎಸ್‌ಪಿಜಿ ಭದ್ರತೆಯನ್ನು ಕಳೆದ ಆಗಸ್ಟ್‌ನಲ್ಲಿ ಹಿಂಪಡೆದುಕೊಳ್ಳಲಾಯಿತು. ಯಾವುದೇ ಮಾಜಿ ಪ್ರಧಾನಿಗೆ ೫ ವರ್ಷಗಳ ಕಾಲ ಮಾತ್ರ ಎಸ್‌ಪಿಜಿ ಭದ್ರತೆ ಕಲ್ಪಿಸಲು ಕಾಯ್ದೆಗೆ ಮೋದಿ ಸರ್ಕಾರ ತಿದ್ದುಪಡಿ ತಂದಿದೆ.

Related posts

ಗುಂಡು ಹಾರಿಸಿಕೊಂಡು ಹೊಟೆಲ್ ಉದ್ಯಮಿ ಆತ್ಮಹತ್ಯೆ

Times fo Deenabandhu

ಬಿಮ್ಸ್ ಆಸ್ಪತ್ರೆ ಎದುರು ಆಂಬುಲೆನ್ಸ್‌ಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಉದ್ಯಮದ ಪುನರ್‌ ರಚನೆ , ಬ್ಯಾಂಕುಗಳ ಖಾಸಗೀಕರಣ