Times of Deenabandhu
  • Home
  • ಜಿಲ್ಲೆ
  • ವಸ್ತುವಿನ ಅವ್ಯಕ್ತ ಪ್ರಜ್ಞೆಯೇ ಕಥೆಯ ಹುಟ್ಟಿಗೆ ಮೂಲ : ಪ್ರೋ. ಪಾಟೀಲ ಬಸವರಾಜ ಕಟ್ಟೀಮನಿ ಕಥಾ ಸಾಹಿತ್ಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ
ಜಿಲ್ಲೆ ದಕ್ಷಿಣ ಕನ್ನಡ

ವಸ್ತುವಿನ ಅವ್ಯಕ್ತ ಪ್ರಜ್ಞೆಯೇ ಕಥೆಯ ಹುಟ್ಟಿಗೆ ಮೂಲ : ಪ್ರೋ. ಪಾಟೀಲ ಬಸವರಾಜ ಕಟ್ಟೀಮನಿ ಕಥಾ ಸಾಹಿತ್ಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ

ವಿದ್ಯಾಗಿರಿ: ಅಕ್ಷರಕ್ಕೆ ಪರ್ಯಾಯವಾದದ್ದು ಯಾವುದೂ ಇಲ್ಲ. ಕಥೆ ಅನುಭವ ಮತ್ತು ಪರಾಮರ್ಶೆಯಲ್ಲಿ ವ್ಯಕ್ತಪಡಿಸುವುದಕ್ಕೆ ಸಾಧ್ಯವಾಗುವ ಮಾಧ್ಯಮ ಎಂದು ಕಥೆಗಾರ ಪ್ರೊ. ರಾಘವೇಂದ್ರ ಪಾಟೀಲ ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಜಂಟಿ ಆಶ್ರಯದಲ್ಲಿ ಆಯೋಜಿಸಿದ ‘ಬಸವರಾಜ ಕಟ್ಟೀಮನಿ ಕಥಾ ಸಾಹಿತ್ಯ-ವಿಚಾರ ಸಂಕಿರಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನುಭವದ ನವೀಕೃತ ರೂಪವೇ ಕಥೆ. ಕಥೆಗಾರನ ಅಂತರ್ಗರ್ಭದ ಎಲ್ಲಾ ಭಾವಗಳನ್ನು ಹೊರಹಾಕುವುದಕ್ಕೆ ಸಾಹಿತ್ಯದಲ್ಲಿ  ಕಥೆ ಉತ್ತಮ ಪ್ರಕಾರ. ಸ್ಥಿತಿ ಮಿತಿಯೂ ಕೂಡ ಸಾಹಿತ್ಯಕ್ಕೆ ಪ್ರಭಾವ ಬೀರುತ್ತದೆ ಎನ್ನುವುದು ಸುಳ್ಳಲ್ಲ. ಮನುಷ್ಯನ ಪ್ರಜೆÐ ಅವನ ಅನುಭವದ ಕ್ರೋಢಿಕರಣದಿಂದ ಉಂಟಾಗುತ್ತದೆ. ವಸ್ತು ಸಂದರ್ಭಗಳಲ್ಲಿರುವ ಅವ್ಯಕ್ತವಾಗಿರುವ ಪ್ರಜ್ಞೆ ಕಥೆಯ ಹುಟ್ಟಿಗೆ ಮೂಲವಾಗುತ್ತದೆ. ಕಾಲಾಂತರದಲ್ಲಿ ಕಥೆಯ ಶೈಲಿ ಬದಲಾದಂತೆ ಕಥೆ ಮತ್ತು ಕಥೆಯ ವಸ್ತುವಿನ ಸ್ವರೂಪದ ವಿಸ್ತಾರ ಬೆಳವಣಿಗೆ ಕಂಡಿತು. ಓದುಗನಾದವವನಿಗೆ ಕಥೆಯ ತಿರುಳನ್ನು ಅರ್ಥೈಸಿಕೊಳ್ಳುವುವುದಕ್ಕೆ ಸಾಹಿತ್ಯದಲ್ಲಿನ ಬೆಳವಣಿಗೆಯನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ಓದುಗನಲ್ಲಿ ಒಂದು ಅನುಭೂತಿ ಹುಟ್ಟುತ್ತದೆ. ಓದುಗ ಮನಸ್ಸಿನ ಜಡತ್ವವನ್ನು ನಿವಾರಿಸುವುದಕ್ಕೆ  ಮಾತ್ರ  ಕೃತಿಯ ಓದಿಗೆ ಹೋಗಬಾರದು. ಬಸವರಾಜ್ ಕಟ್ಟಿಮನಿ ಯಂತ್ರಯುಗದÀ ಆರಂಭದಲ್ಲಿ ಸಮಾಜ ಮತ್ತು ನಾಗರಿಕರಲ್ಲಿನ ವಿಪ್ಲವಗಳ ಸ್ವರೂಪವನ್ನು ಸಾಹಿತ್ಯಕ್ಕೆ  ಕಟ್ಟಿಕೊಟ್ಟವರು. ಅವರ ಅಧ್ಯಯನ ಯುವ ತಲೆಮಾರಿಗೆ ಅಗತ್ಯ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೋ. ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಕಥೆಗಳಲ್ಲಿ ಜೀವನ ಪ್ರೀತಿಗೆ ಬೇಕಾದ ಎಲ್ಲಾ ಮಾಹಿತಿ ನಮಗೆ ಲಭ್ಯವಾಗುತ್ತದೆ. ಕಥೆ ಬರೆಯುವುದರೊಂದಿಗೆ ಕಥೆಗಾರ ಸೃಜನಶೀಲನಾಗುತ್ತಾನೋ ಹಾಗೆ ಓದಗನೂ ಕೂಡ ಸೃಜನಶೀಲನಾಗಬೇಕು. ಕೃತಿಯನ್ನು ತೆರೆದ ಮನಸ್ಸಿನಲ್ಲಿ ಓದಿ ಅದನ್ನು ಪೂರ್ವಾಗ್ರಹವಿಲ್ಲದೇ ವಿಮರ್ಶಿಸಿದಾಗ ಮಾತ್ರ ಸೃಜನಶೀಲ ಓದುಗನಾಗುತ್ತಾನೆ. ಕಥೆಯ ರಚನೆಯ ಮೂಲಕ ಬಸವರಾಜ ಕಟ್ಟೀಮನಿಯವರು ಸಮಾಜದ ವಾಸ್ತವವನ್ನು ಹೆಣೆದು ಕೊಟ್ಟವರು. ಬದುಕಿನಲ್ಲಿನ ಬದಲಾವಣೆಯನ್ನು ಅರಿಯಬೇಕಾದರೆ ಕಟ್ಟೀಮನಿಯವರನ್ನು ಓದಿಕೊಳ್ಳುವುದು ಅಗತ್ಯ ಎಂದರು.

ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

 

ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಂಚಾಲಕ ಡಾ. ಬಾಳಸಾಹೇಬ ಲೋಕಾಪುರ ಪ್ರಸ್ತಾವಿಸಿ, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಗತಿ ಕಾರ್ಯಕ್ರಮ ನಿರ್ವಹಿಸಿದರು.

 

ಭಾರತೀಯ ವೈದ್ಯಶಾಸ್ತ್ರ ಜಗತ್ತಿಗೆ ಪರಿಚಯವಾಗಲಿ : ಡಾ. ಕಿರಿಶಾಲ್

ಮೂರು ದಿನಗಳ ‘ಮನಸ್ವಿ 2020’ ಕಾರ್ಯಾಗಾರಕ್ಕೆ ವಿದ್ಯುಕ್ತ ಚಾಲನೆ

ಮೂಡುಬಿದಿರೆ(ವಿದ್ಯಾಗಿರಿ) : ಭಾರತ ಆಯುರ್ವೇದದ ಕಣಜ. ಜಾಗತಿಕ ಮಟ್ಟದಲ್ಲಿ ಆಯುರ್ವೇದ ಕಾಣಿಸಿಕೊಳ್ಳುತ್ತಿದೆ. ವಿಶ್ವದಾದ್ಯಂತ ಈಗ ಆಯುವೇದಕ್ಕೆ ಬಹು ಬೇಡಿಕೆಯಿದೆ ಎಂದು ನವದೆಹಲಿಯ ಸಿಸಿಐಎಮ್‍ನ ಕಾರ್ಯನಿರ್ವಾಹಕ ಸದಸ್ಯ ಡಾ. ಆನಂದ್ ಕಿರಿಶಾಲ್ ಹೇಳಿದರು.

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಮನೋವಿಜ್ಞಾನ ಎವಂ ಮಾನಸ ರೋಗ ವಿಭಾಗದಿಂದ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ‘ಸಪೋರ್ಟಿವ್ ಥೆರಪಿ’ ರಾಷ್ಟ್ರಮಟ್ಟದ ‘ಮನಸ್ವಿ 2020’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಯುರ್ವೇದದ ಮಹತ್ವವನ್ನು ಜಗತ್ತಿಗೆ ಅನಾವರಣಗೊಳಿಸಬೇಕು. ಭಾರತೀಯ ವೈದ್ಯಶಾಸ್ತ್ರವನ್ನು ಪ್ರಪಂಚಕ್ಕೆ ಪರಿಚಯಿಸುವಲ್ಲಿ ನಾವು ಕಾರ್ಯೋನ್ಮುಖರಾಗಬೇಕು. ಈಗಾಗಲೇ ಆಯುರ್ವೇದ ಶಿಕ್ಷಣ 45 ದೇಶಗಳಲ್ಲಿದೆ. ಆಯುರ್ವೇದ ಶಿಕ್ಷಣ ಜಗತ್ತಿನಾದ್ಯಂತ ಹರಡಲಿ. ಆಯುರ್ವೇದದಲ್ಲಿ ಅವಕಾಶ ಅಗಾಧವಾಗಿ ತೆರೆದುಕೊಳ್ಳುವಂತೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಎಮ್.ಪಿ ಸ್ಟಾನಿ ಮಾತನಾಡಿ, ಮನೋರೋಗ ಒತ್ತಡದಿಂದ ಉಂಟಾಗುವುದು. ಸೂಕ್ತ ಸಮಯ ಪರಿಪಾಲನೆ ಇಲ್ಲದಿದ್ದಾಗ ಒತ್ತಡ ಸೃಷ್ಟಿಯಾಗುತ್ತದೆ. ಮನೋವೇದನೆಯ ನಿವಾರಣೆಗೆ ಪರಿಹಾರ ನಮ್ಮಲ್ಲೇ ಇದೆ. ಸ್ಥಿತಿ, ಸಂಬಂಧ ಅರಿವಾದಾಗ ಮನೋಸಮಸ್ಯೆ ಸುಧಾರಿಸುವುದಕ್ಕೆ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಹೆಲ್ತ್ ಸೆಂಟರ್‍ನ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ವಿನಯ್ ಆಳ್ವ ಮಾತನಾಡಿ, ಖಿನ್ನತೆ ನಮ್ಮ ಬದುಕಿನಲ್ಲಿ ಸರಿಯಾದ ರೂಪುರೇಷೆ ಇಲ್ಲದಿದ್ದಾಗ ಹುಟ್ಟುತ್ತದೆ. ಋಣಾತ್ಮಕ ಸಂಬಂಧಗಳನ್ನು ದೂರ ಮಾಡುವುದರಿಂದ, ಧನಾತ್ಮಕ ಚಿಂತನೆಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಸಮಚಿತ್ತದ ಮನಸ್ಥಿತಿ ಇರುತ್ತದೆ ಎಂದರು.

ಈ ಸಂದರ್ಭ ಆಯುರ್ವೇದದಲ್ಲಿ ಪ್ರಥಮ ಸ್ಥಾನ ಪಡೆದ ಡಾ. ಅಶ್ವಿನಿ ಶೃಂಗಾ ಅವರಿಗೆ 15,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ದ್ವಿತೀಯ ಸ್ಥಾನ ಪಡೆದ  ಡಾ. ನಾಜ್ಹ್ ಅವರಿಗೆ 10,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಿಮಾಲಯ ಡ್ರಗ್ ಕಂಪೆನಿ ವತಿಯಿಂದ ನೀಡಿ ಗೌರವಿಸಲಾಯಿತು.

ಆಳ್ವಾಸ್ ಹೆಲ್ತ್ ಸೆಂಟರ್‍ನ ಮ್ಯಾನೇಜ್‍ಮೆಂಟ್ ಟ್ರಸ್ಟಿ ಡಾ. ಹನಾ ಆಳ್ವ, ಹಿಮಾಲಯ ಡ್ರಗ್ ಕಂಪೆನಿಯ ಡಾ. ಮಹಮ್ಮದ್ ಉಸ್ಮಾನ್ ಮುನ್ಶಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜನಾ ಸಮಿತಿಯ ಉಪಾಧ್ಯಕ್ಷ ಡಾ. ಅನಿಲ್ ಕುಮಾರ್ ರೈ ಪ್ರಸ್ತಾವಿಸಿ, ಸಂಯೋಜನಾ ಸಮಿತಿಯ ಅಧ್ಯಕ್ಷೆ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ. ಜೆನಿಕಾ ಡಿ’ಸೋಜಾ ಸ್ವಾಗತಿಸಿ, ಸಂಯೋಜನಾ ಸಮಿತಿಯ ಕಾರ್ಯದರ್ಶಿ ಡಾ. ರವಿಪ್ರಸಾದ್ ಹೆಗ್ಡೆ ವಂದಿಸಿದರು. ಉಪನ್ಯಾಸಕಿ ಡಾ. ಗೀತಾ ಬಿ. ಮಾರ್ಕಾಂಡೆ ಕಾರ್ಯಕ್ರಮ ನಿರ್ವಹಿಸಿದರು.

 

 

 

 

 

 

 

 

 

 

 

 

 

 

 

 

 

Related posts

ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಯಿಂದ ಉಚಿತ ಔಷಧ ವಿತರಣಾ ಅಭಿಯಾನ -ಸಾಂಕ್ರಾಮಿಕ ರೋಗ ಹರಡುವ ಭೀತಿ : ಗ್ರಾಮಸ್ಥರಿಂದಲೇ ಬ್ಲೀಚಿಂಗ್ ಪೌಡರ್ ಸಿಂಪಡಣೆ -ಬಯೋಮೆಟ್ರಿಕ್, ಶುಲ್ಕ ಪಡೆಯದೆ ಪಡಿತರ ವಿತರಿಸಲು ಸೂಚಿಸಿ ಅಕ್ರಮ ಮದ್ಯ ಮಾರಾಟಕ್ಕೆ ಕ್ರಮ ಕೈಗೊಳ್ಳಿ : ಶಶಿಕುಮಾರ್ ಎಸ್ ಗೌಡ ಮನವಿ

ಮರಳು ಬ್ಲಾಕ್‌ಗಳ ನಿರ್ವಾಹಕರು ನಿಯಮ ಪಾಲಿಸಲು ಸೂಚನೆ : ಡಿ.ಸಿ.

Times fo Deenabandhu

ಅತಿವೃಷ್ಟಿಯಿಂದ ಹಾನಿಯಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಉಸ್ತುವಾರಿ ಸಚಿವರು ಸೂಚನೆ

Times fo Deenabandhu