Times of Deenabandhu
  • Home
  • ಮುಖ್ಯಾಂಶಗಳು
  • ಅಭಿಮಾನಿಯ ಮೊಬೈಲ್‌ ಕಸಿದುಕೊಂಡು ಸಲ್ಮಾನ್‌ ಖಾನ್‌ ಪರಾರಿ! ಸ್ಟಾರ್‌ ನಟನಿಗೆ ಇಂಥ ಬುದ್ಧಿ ಯಾಕೆ ಬಂತು?
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಅಭಿಮಾನಿಯ ಮೊಬೈಲ್‌ ಕಸಿದುಕೊಂಡು ಸಲ್ಮಾನ್‌ ಖಾನ್‌ ಪರಾರಿ! ಸ್ಟಾರ್‌ ನಟನಿಗೆ ಇಂಥ ಬುದ್ಧಿ ಯಾಕೆ ಬಂತು?

ದೊಡ್ಡ ಸೆಲೆಬ್ರಿಟಿಗಳು ಕೆಲವೊಮ್ಮೆ ಸಣ್ಣ ಬುದ್ಧಿ ತೋರಿಸಿಬಿಡುತ್ತಾರೆ. ಅದು ಅವರ ವರ್ಚಸ್ಸಿಗೂ ಶೋಭೆ ತರುವಂಥದ್ದಲ್ಲ. ಸದ್ಯ ನಟ ಸಲ್ಮಾನ್‌ ಖಾನ್‌ ಅಂಥದ್ದೇ ಕೆಲಸ ಮಾಡಿದ್ದಾರೆ. ಅಭಿಮಾನಿಯೊಬ್ಬರ ಮೊಬೈಲ್‌ ಫೋನ್‌ ಕಸಿದುಕೊಂಡು ಸಲ್ಲು ಪರಾರಿ ಆಗಿದ್ದಾರೆ. ಈ ಘಟನೆಯನ್ನು ಖಂಡಿಸಿ ಅನೇಕರು ಕಟು ಮಾತುಗಳಿಂದ ನಿಂದಿಸುತ್ತಿದ್ದಾರೆ. ಅಷ್ಟಕ್ಕೂ ಬಾಲಿವುಡ್‌ನ ಬ್ಯಾಡ್ ಬಾಯ್‌ ಹೀಗೇಕೆ ಮಾಡಿದರು ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ…
ಸಾಮಾನ್ಯವಾಗಿ ಸಲ್ಮಾನ್‌ ಖಾನ್‌ ಕೂಲ್‌ ಆಗಿಯೇ ಇರುತ್ತಾರೆ. ಹಾಗಂತ ಎಲ್ಲ ಸಂದರ್ಭದಲ್ಲಿಯೂ ಅವರಿಂದ ಅದೇ ವರ್ತನೆಯನ್ನು ನಿರೀಕ್ಷಿಸುವಂತಿಲ್ಲ. ಕೆಲವು ಸನ್ನಿವೇಶಗಳಲ್ಲಿ ಅವರು ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳುತ್ತಾರೆ. ಈಗ ಅಂಥದ್ದೇ ಘಟನೆ ನಡೆದಿದೆ. ಸಿನಿಮಾ ಶೂಟಿಂಗ್‌ ಸಲುವಾಗಿ ಪ್ರಯಾಣ ಮಾಡುತ್ತಿದ್ದಾಗ ಗೋವಾ ಏರ್‌ಪೋರ್ಟ್‌ನಲ್ಲಿ ಅಭಿಮಾನಿಯ ಮೊಬೈಲ್‌ ಕಸಿದುಕೊಂಡು ಸಲ್ಲು ಪರಾರಿ ಆಗಿದ್ದಾರೆ. ‘ಪ್ಲೀಸ್‌ ನನ್ನ ಮೊಬೈಲ್‌ ಕೊಡಿ..’ ಎಂದು ಆ ಅಭಿಮಾನಿ ಗೋಳಿಟ್ಟರೂ ಅವರು ಕರುಣೆ ತೋರಿಸಿಲ್ಲ. ಅವರ ಈ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಲ್ಮಾನ್‌ ಖಾನ್‌ ಎಲ್ಲಿಯೇ ಹೋದರು ಅಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಹಪಹಪಿಸುತ್ತಾರೆ. ಅದರಿಂದ ಸಲ್ಮಾನ್‌ಗೆ ಕೆಲವೊಮ್ಮೆ ಕಿರಿಕಿರಿ ಆಗುವುದೂ ಉಂಟು. ಈಗ ನಡೆದ ಅಚಾತುರ್ಯಕ್ಕೂ ಅದೇ ಕಾರಣ. ಗೋವಾ ವಿಮಾನ ನಿಲ್ದಾಣದಲ್ಲಿ ಸಲ್ಮಾನ್‌ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಮುಗಿಬಿದ್ದಿದ್ದಾರೆ. ಅವರು ವಿಮಾನ ನಿಲ್ದಾಣದ ಸಿಬ್ಬಂದಿ ಎನ್ನಲಾಗಿದೆ. ಅದೇಕೋ ಗೊತ್ತಿಲ್ಲ. ಅವರು ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದು ಸಲ್ಲುಗೆ ಹಿಡಿಸಿಲ್ಲ. ಕೂಡಲೇ ಆ ವ್ಯಕ್ತಿಯ ಮೊಬೈಲ್‌ ಕಸಿದುಕೊಂಡು ಸಿಟ್ಟಿನಿಂದ ಹೊರನಡೆದಿದ್ದಾರೆ.
ಸಿಟ್ಟಿನ ಕೈಗೆ ಬುದ್ಧಿಕೊಟ್ಟು, ಸಲ್ಮಾನ್‌ ಹೀಗೆ ಮೊಬೈಲ್‌ ಕಸಿದುಕೊಂಡಿರುವ ಕ್ಷಣಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್‌ ಆಗುತ್ತಿದೆ. ನೋಡಿದ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಫೋಟೋ ತೆಗೆದುಕೊಳ್ಳುವ ಮುಂಚೆ ನನ್ನ ಅನುಮತಿ ಕೇಳದೇ ಇದ್ದರೆ ನನಗೆ ತುಂಬ ಕೋಪ ಬರುತ್ತದೆ’ ಎಂದು ಈ ಹಿಂದೆ ಸಲ್ಮಾನ್‌ ಖಾನ್‌ ಹೇಳಿಕೆ ನೀಡಿದ್ದರು. ಈಗಲೂ ಹಾಗೆಯೇ ಆಗಿರಬಹುದು ಎಂದು ಊಹಿಸಲಾಗುತ್ತಿದೆ. ಕಡೆಗೂ ಆ ಫ್ಯಾನ್‌ಗೆ ಮೊಬೈಲ್‌ ಮರಳಿಸಲಾಯಿತೋ ಇಲ್ಲವೋ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಗೊತ್ತಾಗಬೇಕಿದೆ.
ಸಲ್ಮಾನ್‌ ಅವರ ಈ ವರ್ತನೆಯನ್ನು ನ್ಯಾಷನಲ್‌ ಸ್ಟೂಡೆಂಟ್ಸ್‌ ಯೂನಿಯನ್‌ ಆಫ್‌ ಇಂಡಿಯಾ (ಎನ್‌ಎಸ್‌ಯೂಐ) ಖಂಡಿಸಿದೆ. ಇಂಥ ವರ್ತನೆ ತೋರಿಸಿರುವ ಸಲ್ಲು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ. ಒಂದು ವೇಳೆ ಅವರು ಕ್ಷಮೆ ಕೇಳಲು ಆಗದಿದ್ದರೆ ಸಲ್ಮಾನ್‌ ಖಾನ್‌ರನ್ನು ಗೋವಾಗೆ ಕಾಲಿಡದಂತೆ ನಿಷೇಧ ಹೇರಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ಗೆ ಎನ್‌ಎಸ್‌ಯೂಐ ಸದಸ್ಯರು ಒತ್ತಾಯಿಸಿದ್ದಾರೆ. ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದು, ಸಲ್ಮಾನ್‌ ಖಾನ್‌ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.

Related posts

 ಧೋನಿ ನಾಯಕಪಟ್ಟಕ್ಕೆ ಏರಿದ ಗುಟ್ಟು ಬಿಚ್ಚಿಟ್ಟ ಸಚಿನ್

Times fo Deenabandhu

 ಗಡಿಯಲ್ಲಿ ಚೀನಾ ಅಟ್ಟಹಾಸ: ಕರ್ನಲ್‌ ಸೇರಿ 20 ಯೋಧರು ಬಲಿ

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ: ಜಾರ್ಜ್, ಮೊಹಂತಿ, ಪ್ರಸಾದ್‌ಗೆ ಸಮನ್ಸ್

Times fo Deenabandhu