Times of Deenabandhu
  • Home
  • ಪ್ರಧಾನ ಸುದ್ದಿ
  • ವಿಮಾನವನ್ನು ಮದುವೆಯಾಗುತ್ತಾರಂತೆ ಈ ಯುವತಿ…! : ಮಾರ್ಚಿನಲ್ಲಿ ನಡೆಯಲಿದೆ ಕಲ್ಯಾಣ…!
ಪ್ರಧಾನ ಸುದ್ದಿ ಮುಖ್ಯಾಂಶಗಳು

ವಿಮಾನವನ್ನು ಮದುವೆಯಾಗುತ್ತಾರಂತೆ ಈ ಯುವತಿ…! : ಮಾರ್ಚಿನಲ್ಲಿ ನಡೆಯಲಿದೆ ಕಲ್ಯಾಣ…!

30 ವರ್ಷದ ಯುವತಿಯೊಬ್ಬರು ತನ್ನ ವಿಚಿತ್ರ ಆಸೆಯನ್ನು ಬಹಿರಂಗಪಡಿಸಿದ್ದಾರೆ… ಈಕೆಯ ಈ ಆಸೆ ಕಂಡು ಎಲ್ಲರೂ ಒಂದು ಕ್ಷಣ ಅಚ್ಚರಿಗೊಳಗಾಗಿದ್ದಾರೆ. ಇದು ಸಾಧ್ಯನಾ ಎನ್ನುತ್ತಿದ್ದಾರೆ…
ಮದುವೆ ಎನ್ನುವುದು ಎಲ್ಲರಿಗೂ ಒಂದು ಕನಸು… ಎಲ್ಲರ ಬದುಕಿನ ಪ್ರಮುಖ ಘಟ್ಟವೂ ಹೌದು… ಇದು ಪ್ರೀತಿಯ ಪ್ರತೀಕ ಎಂಬುದು ಕೂಡಾ ಸತ್ಯ. ಪ್ರೀತಿಗೆ ಯಾವುದೇ ಗಡಿ ಇಲ್ಲ. ಆದರೆ, ಕೆಲವೊಮ್ಮೆ ಈ ಪ್ರೀತಿ ಕತೆ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಸದ್ಯ ಯುವತಿಯೊಬ್ಬರು ಇದೇ ಅಚ್ಚರಿಗೆ ಕಾರಣವಾಗಿದ್ದಾರೆ. ಈಕೆಯ ಪ್ರೀತಿಯ ಕತೆ ಕೇಳಿ ಎಲ್ಲರೂ ದಂಗಾಗಿದ್ದಾರೆ…! ಇಷ್ಟಕ್ಕೂ ಈಕೆ ಪ್ರೀತಿ ಮಾಡುವುದು ಮನುಷ್ಯರನ್ನಲ್ಲ… ವಿಮಾನವನ್ನು…! ಬರೀ ಪ್ರೀತಿಯಷ್ಟೇ ಅಲ್ಲ, ವಿಮಾನದೊಂದಿಗೆ ಮದುವೆಯಾಗುವುದಕ್ಕೂ ಈ ಯುವತಿ ನಿರ್ಧರಿಸಿದ್ದಾರೆ….!
ಕೇಳುವಾಗ ಅಚ್ಚರಿಯಾದರೂ ಇದು ನಿಜ. ಸುಮಾರು ಆರು ವರ್ಷದಿಂದ `ಡೇಟಿಂಗ್‌’ನಲ್ಲಿ ತೊಡಗಿದ್ದ ವಿಮಾನದ ಜೊತೆ ತಾನು ಮದುವೆಯಾಗುತ್ತೇನೆ ಎಂದು ಈ ಯುವತಿ ಘೋಷಿಸಿಕೊಂಡಿದ್ದಾರೆ…! ಜರ್ಮನಿಯ ಬರ್ಲಿನ್ ಮೂಲದ ಮಿಚೆಲ್ ಕೋಬ್ಕೆ ಈ ವರ್ಷದ ಕೊನೆಯಲ್ಲಿ ನೆದರ್ಲ್ಯಾಂಡ್ಸ್ನಲ್ಲಿ ತನ್ನ ಕನಸಿನ ಬೋಯಿಂಗ್ 737-800 ವಿಮಾನವನ್ನು ಮದುವೆಯಾಗುವುದಾಗಿ ಹೇಳಿದ್ದಾರೆ.
`2014ರಲ್ಲಿ ಬರ್ಲಿನ್ ಟೆಗೆಲ್ ವಿಮಾನ ನಿಲ್ದಾಣದಲ್ಲಿ ಜೆಟ್ ಅನ್ನು ಮೊದಲ ಬಾರಿಗೆ ನೋಡಿದಾಗ ತಾನು ಪ್ರೀತಿಗೆ ಬಿದ್ದೆ’ ಎಂದು ಮಿಚೆಲ್ ಹೇಳಿಕೊಂಡಿದ್ದು, ಈ ವಿಮಾನವನ್ನು ಡಾರ್ಲಿಂಗ್ ಎಂದು ಕರೆಯುತ್ತಿರುವುದಲ್ಲದೆ, ಇದಕ್ಕೆ `ಸ್ಕಾಟ್ಜ್’ ಎಂಬ ಪ್ರೀತಿಯ ಅಡ್ಡಹೆಸರೂ ಇಟ್ಟಿದ್ದಾರೆ. ಲವ್ ಆಟ್ ಫಸ್ಟ್‌ ಸೈಟ್ ಎಂಬಂತೆ ಮೊದಲ ನೋಟದಲ್ಲಿ ಮಿಚೆಲ್‌ಗೆ ಈ ವಿಮಾನದ ಮೇಲೆ ಪ್ರೇಮಾಂಕುರವಾಗಿತ್ತಂತೆ. ಆದರೆ, ಆರು ವರ್ಷಗಳ ಕಾಲ ಏರ್‌ ಪೋರ್ಟಿನ ಗಾಜಿನ ಕಿಟಕಿಯಲ್ಲಿ ಮಾತ್ರ ಈ ವಿಮಾನವನ್ನು ದೂರದಲ್ಲೇ ನೋಡಿ ಮಿಚೆಲ್ ಆನಂದಿಸುತ್ತಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಅಂತಿಮವಾಗಿ 40-ಟನ್ ಜೆಟ್‌ಗೆ ಮುತ್ತಿಕ್ಕುವ ಮತ್ತು ಅದರ ರೆಕ್ಕೆಯ ಮೇಲೆ ನಿಲ್ಲುವ ಅವಕಾಶ ಇವರಿಗೆ ಸಿಕ್ಕಿತ್ತು.
ಸದ್ಯ ಈ ವಿಮಾನದೊಂದಿಗೆ ಮದುವೆಗೆ ನಿಶ್ಚಿಯಿಸಿರುವ ಮಿಚೆಲ್ ಮಾರ್ಚ್‌ 18ಕ್ಕೆ ದಿನಾಂಕ ಕೂಡಾ ನಿಗದಿ ಮಾಡಿದ್ದಾರೆ. ಆಮ್ಸ್ಟರ್‌ಡ್ಯಾಮ್‌ನಲ್ಲಿ ಮದುವೆ ನಡೆಯಲಿದೆಯಂತೆ. ಇದು ಈ ವಿಮಾನದೊಂದಿಗೆ ಇವರ ಮೂರನೇ ಭೇಟಿ…! 30 ವರ್ಷದ ಮಿಚೆಲ್‌ ಈ ವಿಚಿತ್ರ ಮದುವೆ ಆಸೆಗೆ ಸ್ನೇಹಿತರು ಮತ್ತು ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದಾರಂತೆ. ಮಿಚೆಲ್ ಈ ಜೆಟ್‌ ಪ್ರೀತಿಯನ್ನು `ಆಬ್ಜೆಕ್ಟೊಫಿಲಿಯಾ’ ಎಂದು ಕರೆಯಲಾಗುತ್ತದೆ. ಅಂದರೆ, ನಿರ್ಜೀವ ವಸ್ತುವಿನೊಂದಿಗೆ ಪ್ರಣಯದ ಆಕರ್ಷಣೆ ಕೇಂದ್ರೀಕೃತವಾಗುವಂತಹ ಸನ್ನಿವೇಶವಿದು. ಆದರೆ, ಮಿಚೆಲ್ ಮಾತ್ರ ಇದನ್ನು `ಸಾಮಾನ್ಯ ಸಂಬಂಧ’ ಎಂದೇ ಬಣ್ಣಿಸುತ್ತಾರೆ. ಆದರೆ, ನಿಜಕ್ಕೂ ಈ ಮದುವೆ ಕತೆ ವಿಚಿತ್ರವೆನಿಸುತ್ತದೆ. ಈ ವಿಶಿಷ್ಟ ಮದುವೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಮಾರ್ಚ್‌ ವರೆಗೆ ಕಾಯಬೇಕಾಗಿದೆ.

Related posts

16 ಲಕ್ಷ ಕೊರೊನಾ ಸೋಂಕಿತರ ಪೈಕಿ 10 ಲಕ್ಷ ಜನ ಗುಣಮುಖ –ಸಚಿವ ಹರ್ಷವರ್ಧನ್‌

ನಾಳೆಯಿಂದ ನಾನು ಕೆಲಸಕ್ಕೆ ಬರುವುದಿಲ್ಲ ಎಂದು ನೇರಪ್ರಸಾರದಲ್ಲೇ ಹೇಳಿದ ಟಿವಿ ಪತ್ರಕರ್ತೆ…!

Times fo Deenabandhu

ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮಾ.3ರ ಮುಂಜಾನೆ ಇಲ್ಲ ಗಲ್ಲು; ಮರಣದಂಡನೆ ಮುಂದೂಡಿದ ದೆಹಲಿ ಕೋರ್ಟ್​