Times of Deenabandhu
  • Home
  • ಜಿಲ್ಲೆ
  • ಶಾಲೆಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳ ಬುದ್ದಿಶಕ್ತಿಯನ್ನು ಹೆಚ್ಚಿಸುತ್ತದೆ
ಜಿಲ್ಲೆ ಶಿವಮೊಗ್ಗ

ಶಾಲೆಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳ ಬುದ್ದಿಶಕ್ತಿಯನ್ನು ಹೆಚ್ಚಿಸುತ್ತದೆ

ಶಿವಮೊಗ್ಗ: ಶಾಲೆಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳ ಬುದ್ದಿಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.

ಅವರು ಇಂದು ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ವಸ್ತು ಪ್ರದರ್ಶನ ಮೇಳಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮಕ್ಕಳ ಮನಸ್ಸು ಬಹುಬೇಗ ಆಸಕ್ತಿ ಮತ್ತು ಕುತೂಹಲಕ್ಕೆ ಒಳಗಾಗುತ್ತದೆ. ತಮ್ಮ ಪಠ್ಯದ ವಿಷಯಗಳು ಎಷ್ಠೇ ಬಾರಿ ಓದಿದರೂ ಸುಲಭವಾಗಿ ಅರ್ಥವಾಗುವುದಿಲ್ಲ. ಆದರೆ ಇಂತಹ ಪ್ರದರ್ಶನಗಳು ಬಹುಬೇಗ ವಿಷಯಗಳನ್ನು ಸುಲಭವಾಗಿ ಕಲಿಯಲು ಸಹಕಾರಿಯಾಗುತ್ತದೆ. ಒಂದು ವಸ್ತು ಪ್ರದರ್ಶನದ ಹಿಂದೆ ಪೋಷಕರ, ಮಕ್ಕಳ, ಗುರುಗಳ ಆಸಕ್ತಿ ಸೇರಿಕೊಂಡು ಶಿಕ್ಷಣದ ಒಂದುಭಾಗವಾಗಿಯೇ ಅದು ಮಾರ್ಪಾಡಾಗುತ್ತದೆ ಎಂದರು.

ವಸ್ತು ಪ್ರದರ್ಶನದಲ್ಲಿ ಮಕ್ಕಳು ಮಾಡಿದ ವಿವಿಧ ಬಗೆಯ ಆಕಾರಗಳು, ಪೋಷಕರ ಹಾಗೂ ಸಾರ್ವಜನಿಕರ ಗಮನಸೆಳೆದವು. ಹಸಿರೀಕರಣ, ಭೂಮಿ, ಗಣಿತದ ಸೂತ್ರಗಳು, ಹೊಸ ತಂತ್ರಜ್ಞಾನ., ಗಡಿಯಾರ, ಆಸ್ಪತ್ರೆ, ನಮ್ಮ ರಸ್ತೆಗಳು, ಗುಡಿ ಗೋಪುರಗಳು, ಮೊಬೈಲ್ ತಂತ್ರಜ್ಙಾನ, ತರಕಾರಿಗಳು, ಅದನ್ನು ಬೆಳೆಯುವ ರೀತಿ, ಸಾವಯವ ಗೊಬ್ಬರ, ರೈತನ ದುಡಿಮೆ, ಮಣ್ಣು, ಉದ್ಯಾನವನ ಹೀಗೆ ನೂರಾರು ವಿಷಯಗಳನ್ನು ಒಳಗೊಂಡಂತೆ ಪುಟ್ಟ ಮಕ್ಕಳು ಶ್ರದ್ದೆಯಿಂದ ಮಾಡಿ ತಂದು ಪ್ರದರ್ಶನಕ್ಕೆ ಇಟ್ಟಿದ್ದು ವಿಶೇಷವಾಗಿತ್ತು. ಪೋಷಕರು ಸಹ ತಮ್ಮ ಮಕ್ಕಳ ಉತ್ಸಾಹದಲ್ಲಿ ಪಾಲ್ಗೊಂಡರು. ಶಾಲೆಯ ಮುಖ್ಯೋಪಾಧ್ಯಾಯರು, ಉಪಾಧ್ಯಾಯರುಗಳು ಹಾಜರಿದ್ದು ವೀಕ್ಷಕರಿಗೆ ಮಕ್ಕಳಿಂದಲೇ ವಿವರಣೆ ನೀಡುತ್ತಿದ್ದರು.

Related posts

ಪಾಲಿಕೆ ಜಾಗ ಅತಿಕ್ರಮಣ ವಿರೋಧಿಸಿ ದಿಢೀರ್ ಪ್ರತಿಭಟನೆ

Times fo Deenabandhu

ಯೋಗ ಬದುಕು ಪರಿಷ್ಕರಿಸಿಕೊಳ್ಳಲು ಮೂಲಾಧಾರ:ಡಾ.ಕುಮಾರ್

Times fo Deenabandhu

ಬಲಾಢ್ಯ ರಾಷ್ಟ್ರಗಳಿಗೂ ಸವಾಲೊಡ್ಡುವ ತಾಕತ್ತು ಭಾರತೀಯ ಸೇನೆಗಿದೆ: ಉಮೇಶ್

Times fo Deenabandhu