Times of Deenabandhu
  • Home
  • ಜಿಲ್ಲೆ
  • ಯುವ ಮತದಾರರು ಜಾಗೃತರಾದಾಗ ಮಾತ್ರ ಪ್ರಜಾಪ್ರಭುತ್ವದ ಭವಿಷ್ಯ ಸಾಧ್ಯ
ಚಿತ್ರದುರ್ಗ ಜಿಲ್ಲೆ

ಯುವ ಮತದಾರರು ಜಾಗೃತರಾದಾಗ ಮಾತ್ರ ಪ್ರಜಾಪ್ರಭುತ್ವದ ಭವಿಷ್ಯ ಸಾಧ್ಯ

ಚಿತ್ರದುರ್ಗ:  ಯುವ ಮತದಾರರು ಜಾಗೃತರಾದಾಗ ಮಾತ್ರ ಪ್ರಜಾಪ್ರಭುತ್ವದ ಭವಿಷ್ಯ ಸಾಧ್ಯ ಎಂದು ಎಸ್.ಜೆ.ಎಂ. ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಸಿ.ಬಸವರಾಜಪ್ಪ ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮತದಾರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವದ ಭವಿಷ್ಯ ಮತದಾರರ ಕೈಯಲ್ಲಿದೆ. ಹಾಗಾಗಿ ನಿರ್ಭೀತಿಯಿಂದ ನ್ಯಾಯಸಮ್ಮತವಾಗಿ ಪ್ರಾಮಾಣಿಕವಾಗಿ ಮತ ಚಲಾಯಿಸಿ. ಯುವ ಮತದಾರರಿಂದ ಚಲಾಯಿಸಲ್ಪಟ್ಟ ಒಂದೊಂದು ಮತವೂ ಗಣನೀಯ. ಮತದಾರರು ತಮ್ಮ ಮತದಾನದ ಮಹತ್ವ ಅರಿಯಬೇಕು. ಭಾರತದಲ್ಲಿ ಮತದಾರರು ರಾಜಕಾರಣಿಗಳ ಆಮಿಷಗಳಿಗೆ ಬಹಳ ಬೇಗನೆ ಒಳಗಾಗುತ್ತಾರೆ. ಮತದಾರರು ಈ ಆಮಿಷದಿಂದ ಹೊರಬರಬೇಕು. ಪ್ರತಿಯೊಬ್ಬ ಅರ್ಹ ಮತದಾರರು ಮತದಾನದಿಂದ ಹೊರಗುಳಿಯದೆ ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಮತದಾನ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜಾನಾಯ್ಕ ಪ್ರತಿಜ್ಞಾ ವಿಧಿ ಬೋಧಿಸಿದರು.

Related posts

ಬೆಂಗಳೂರಿಗೆ ಹೋಗಬೇಕು ಎನ್ನುತ್ತಿದ್ದವರು ಈಗ ಬೆಂಗಳೂರನ್ನು ಬಿಟ್ಟು ಹೋಗುವ ಮಾತು ಆಡುತ್ತಿದ್ದಾರೆ….

ಹೊಸ ಇತಿಹಾಸ ನಿರ್ಮಾಣಕ್ಕೆ ನಾಂದಿಯಾಗಲಿರುವ ನಾಳಿನ ಅಸಂಖ್ಯ ಪ್ರಮಥರ ಗಣಮೇಳ

Times fo Deenabandhu

ಫೆ.14. ಸಿದ್ದರಹಳ್ಳಿಯಲ್ಲಿ 172ನೇ ಸಾಹಿತ್ಯ ಹುಣ್ಣಿಮೆ: ಕೆ. ಎಸ್. ನ. ನೂರರ ಸ್ಮರಣೆ ಕವನಗಳ ಹಾಡು, ವಿಶ್ಲೇಷಣೆ:ಫೆ.15,16, ಡಿವಿಎಸ್. ಕಾಲೇಜಿನಲ್ಲಿ ಜನಪದ ಕಲೆಗಳ ಕಲಿಕಾ ಶಿಬಿರ

Times fo Deenabandhu