Times of Deenabandhu
  • Home
  • ಮುಖ್ಯಾಂಶಗಳು
  • ಎಟಿಎಂಗೆ ಹೋಗಿ ಹಣ ತೆಗೆದ ಅಂಗನವಾಡಿ ಶಿಕ್ಷಕಿಗೆ ಶಾಕ್​; ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಪ್ರಧಾನ ಸುದ್ದಿ ಮುಖ್ಯಾಂಶಗಳು

ಎಟಿಎಂಗೆ ಹೋಗಿ ಹಣ ತೆಗೆದ ಅಂಗನವಾಡಿ ಶಿಕ್ಷಕಿಗೆ ಶಾಕ್​; ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಪಾಳಾ: ಎಟಿಎಂಗೆ ಹೋಗಿದ್ದ ಅಂಗನವಾಡಿ ಶಿಕ್ಷಕಿಗೆ ದೊಡ್ಡ ಅಚ್ಚರಿಯೊಂದು ಕಾದಿತ್ತು. ತಮ್ಮ ಎಟಿಎಂ ಕಾರ್ಡ್​ನ್ನು ಮಶಿನ್​ಗೆ ಹಾಕಿ, ಪಿನ್​ ನಂಬರ್​ ಬರೆದು, ಬೇಕಾದರ ಹಣದ ಮೊತ್ತವನ್ನೂ ದಾಖಲಿಸಿ ಕಾಯುತ್ತ ನಿಂತರು. ಹಣವೇನೋ ಬಂತು. ಆದರೆ ಅದನ್ನು ನೋಡಿದ ಶಿಕ್ಷಕಿ ಕಕ್ಕಾಬಿಕ್ಕಿಯಾದರು.

ಕೇರಳದ ವೆರಾನಲ್​ನ ಕರೂರು ಪಂಚಾಯಿತಿಯಲ್ಲಿರುವ ಅಂಗನವಾಡಿ ಶಿಕ್ಷಕಿ ಲಿಸ್ಸಿ ಕಟ್ಟಕತ್​ ಎಂಬುವರು ಪಾಳಾದಲ್ಲಿರುವ ಎಸ್​ಬಿಐ ಎಟಿಎಂ ಕೇಂದ್ರವೊಂದಕ್ಕೆ ಹೋಗಿ ಹಣ ತೆಗೆದರು. ಅವರು ಎಟಿಎಂ ಯಂತ್ರದಲ್ಲಿ ಕೇವಲ 500 ರೂಪಾಯಿಯಷ್ಟನ್ನು ಮಾತ್ರ ದಾಖಲಿಸಿದರು. ಆದರೆ ಬಂದ ಹಣದ ಮೊತ್ತ 10,000 ರೂಪಾಯಿ.

ಶಿಕ್ಷಕಿ ಕೂಡಲೇ ಆ ಪಂಚಾಯಿತಿ ಸದಸ್ಯನಿಗೆ ವಿಷಯ ತಿಳಿಸಿದರು. ಬಳಿಕ ಎಸ್​ಬಿಐ ಅಧಿಕಾರಿಗಳಿಗೂ ವಿಷಯ ತಲುಪಿಸಲಾಯಿತು. ಅವರು ಸ್ಥಳಕ್ಕೆ ಬಂದರೂ ಶಿಕ್ಷಕಿಯಿಂದ ಉಳಿದ ಹಣ ಪಡೆಯಲು ನಿರಾಕರಿಸಿದರು. ಬ್ಯಾಂಕ್​ಗೆ ತೆಗೆದುಕೊಂಡು ಹೋಗಿ ಎಂದು ಹೇಳಿದರು.

ಆದರೆ ಇದು ಎಸ್​ಬಿಐ ಎಟಿಎಂ ಕೇಂದ್ರದಿಂದ ನಡೆದ ಎಡವಟ್ಟು. ಹಾಗಾಗಿ ನೀವೇ ತೆಗೆದುಕೊಳ್ಳಿ ಎಂದು ಆಗ್ರಹಿಸಿ ಸ್ಥಳೀಯರು, ಪಂಚಾಯಿತಿ ಸದಸ್ಯರು ಎಲ್ಲ ಸೇರಿ ಪ್ರತಿಭಟನೆ ಮಾಡಿದ ಬಳಿಕ ಅಧಿಕಾರಿಗಳು ಹಣವನ್ನು ವಾಪಸ್​ ಪಡೆದು, ರಶೀದಿ ಕೊಟ್ಟರು.

Related posts

‘ಎನ್‌ಕೌಂಟರ್ ಅಲ್ಲ, ನಿರ್ದಯ ಕಗ್ಗೊಲೆಗಳು’: ಹೈ ಕೋರ್ಟ್ ಮಾಜಿ ನ್ಯಾಯಾಧೀಶ ಕಮಾಲ್‌ ಪಾಶಾ

Times fo Deenabandhu

ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರಾಗಿ ಸುನೀಲ್‌ ಪುರಾಣಿಕ್‌ ನೇಮಕ

Times fo Deenabandhu

ಚಾಮರಾಜನಗರ ಜಿಲ್ಲೆಯಲ್ಲಿ ಕೋಳಿ, ಮೊಟ್ಟೆ ಮಾರಾಟಕ್ಕೆ ನಿರ್ಬಂಧ

Times fo Deenabandhu