Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಟೈರ್‌ನೊಳಗೆ ಸಿಕ್ಕಿಕೊಂಡ ಶ್ವಾನದ ತಲೆ

ನಿಜಕ್ಕೂ ಈ ದೃಶ್ಯ ನೋಡುವಾಗ ದುಃಖವಾಗುತ್ತದೆ… ಕಣ್ಣಂಚಿನಲ್ಲಿ ನಮಗೇ ಗೊತ್ತಿಲ್ಲದಂತೆ ನೀರು ಜಿನುಗುತ್ತದೆ. ಮನಸ್ಸಿನ ಮೂಲೆಯಲ್ಲಿ `ಪಾಪ ಏನೂ ಆಗದಿರಲಪ್ಪಾ ದೇವರೇ’ ಎಂಬ ಪ್ರಾರ್ಥನೆಯ ಧ್ವನಿ ಕೇಳಲಾರಂಭಿಸುತ್ತದೆ. ಅಷ್ಟು ಭೀಕರವಾಗಿದೆ ಈ ದೃಶ್ಯ…
ಇದು ಕ್ಯಾಲಿಫೋರ್ನಿಯಾದಲ್ಲಿ ಸೆರೆಯಾದ ದೃಶ್ಯ. ಆಟವಾಡುತ್ತಿದ್ದ ಶ್ವಾನದ ಮರಿಯೊಂದು ಸ್ಪೇರ್ ಟೈರ್‌ನೊಳಗೆ ತಲೆ ಹಾಕಿತ್ತು. ಆದರೆ, ಈ ಮರಿಯ ತಲೆ ಟೈರ್ ರಂಧ್ರದಲ್ಲೇ ಸಿಲುಕಿಕೊಂಡಿತ್ತು. ಏನು ಮಾಡಿದರೂ ತಲೆಯನ್ನು ಹೊರಗೆ ತೆಗೆಯಲು ಆಗುತ್ತಿರಲಿಲ್ಲ. ನೋವಲ್ಲಿ ಪುಟಾಣಿ ಶ್ವಾನ ಒದ್ದಾಡುತ್ತಿತ್ತು. ಕಲ್ಲು ಹೃದಯವನ್ನೂ ಕರಗಿಸುವಂತಹ ದೃಶ್ಯವಿದು.

ಆದರೆ, ಮರಿಯ ಅದೃಷ್ಟ ಚೆನ್ನಾಗಿತ್ತು. ಸ್ಥಳೀಯರಿಂದ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಲು ಪ್ರಯಾಸಪಟ್ಟು ಮರಿಯ ಜೀವ ಉಳಿಸಿದ್ದಾರೆ. ಈ ಶ್ವಾನದ ಮರಿಯ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ನೋಡಿದಾಗಲೇ ಬೇಸರವಾಗುತ್ತದೆ. ಯಾಕೆಂದರೆ, ಇದು ಅತ್ಯಂತ ಸೂಕ್ಷ್ಮ ಕಾರ್ಯಾಚರಣೆ… ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಶ್ವಾನದ ಮರಿಯ ಜೀವಕ್ಕೇ ತೊಂದರೆಯಾಗುತ್ತಿತ್ತು. ರಿವ್ಕೊ ಅನಿಮಲ್ ಸರ್ವೀಸಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ರಕ್ಷಣೆಯ ವಿಡಿಯೋವನ್ನು ಹಂಚಿಕೊಂಡಿದೆ.
ಈ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಕೊನೆಗೆ ಟೈರನ್ನು ಕಟ್ ಮಾಡಿ ಮರಿಯನ್ನು ರಕ್ಷಿಸಿದ್ದಾರೆ.
ಪ್ರಾಣಿಪ್ರಿಯರು ಮತ್ತು ಅಗ್ನಿಶಾಮಕ ದಳದ ಹೃದಯವೈಶಾಲ್ಯತೆಯಿಂದ ಮರಿ ಅಪಾಯದಿಂದ ಪಾರಾಗಿದೆ. ಹೀಗಾಗಿ, ಶ್ವಾನದ ಮಾಲೀಕರು ಖುಷಿಯಲ್ಲಿದ್ದಾರೆ.
ಸದ್ಯ ಈ ರಕ್ಷಣೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲರೂ ಈ ಶ್ವಾನದ ಮರಿಯ ರಕ್ಷಣೆಗೆ ಕೈಗೊಂಡ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಇದೊಂದು ಆದರ್ಶನೀಯ ಕಾರ್ಯ… ಇವರೆಲ್ಲರ ಹೃದಯವೈಶಾಲ್ಯತೆಗೆ ತಲೆಬಾಗಲೇಬೇಕು.

Related posts

 ಸುಶಾಂತ್‌ ಸಾವಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ: ಆದಿತ್ಯ ಠಾಕ್ರೆ

Times fo Deenabandhu

ಬೆಳ್ಳುಳ್ಳಿ ಸೇವನೆಯಿಂದ ಕೊರೊನಾ ವೈರಸ್‌ ಬಾರದಂತೆ ತಡೆಯಬಹುದೇ?

Times fo Deenabandhu

ಗಂಟೆಗಳಲ್ಲಿ ಕೋಟ್ಯಧಿಪತಿಯಾಗಿ ಬದಲಾದ ಕೇರಳದ ಟ್ಯಾಕ್ಸಿ ಡ್ರೈವರ್

Times fo Deenabandhu