Times of Deenabandhu
ಮುಖ್ಯಾಂಶಗಳು

ನಂದಿಬೆಟ್ಟಕ್ಕೆ ಭಾನುವಾರ, ಶನಿವಾರ ಮಾತ್ರ ವಾಹನ ಪ್ರವೇಶ

ಚಿಕ್ಕಬಳ್ಳಾಪುರ: ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟದ ತುತ್ತ ತುದಿಗೆ ವಾರದ 5 ದಿನಗಳು ವಾಹನಗಳ ಪ್ರವೇಶ ನಿಷೇಧಿಸಲಾಗಿದೆ.

ಬೆಟ್ಟದ ಪ್ರವೇಶ ದ್ವಾರದ ಬಳಿ ಇರುವ ಟಿಕೆಟ್​ ಕೌಂಟರ್​ ಬಳಿಯಿಂದ ಬೆಟ್ಟದ ತುದಿಗೆ ಸೋಮವಾರದಿಂದ ಶುಕ್ರವಾರದವರೆಗೆ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಶನಿವಾರ ಹಾಗೂ ಭಾನುವಾರ ಮಾತ್ರ ಬೆಟ್ಟದ ತುದಿವರೆಗೂ ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ನಂದಿಬೆಟ್ಟದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ತಿಳಿಸಿದರು.

ಟಿಕೆಟ್​ ಕೌಂಟರ್​ ಬಳಿ ವಾಹನಗಳ ಪಾರ್ಕಿಂಗ್​​ಗೆ ಅವಕಾಶ ಕಲ್ಪಿಸಲಾಗಿದೆ. ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿ ಬೆಟ್ಟದ ತುದಿ ಏರಬೇಕು. ಶನಿವಾರ ಹಾಗೂ ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುವುದರಿಂದ ವಾಹನ ನಿಲ್ಲಿಸಲು ಸ್ಥಳ ಇಲ್ಲದ ಕಾರಣ ತುದಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅಧಿಕ ವಾಹನಗಳ ಸಂಚಾರದಿಂದ ಬೆಟ್ಟದ ಪರಿಸರ ಮಲಿನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬೆಟ್ಟದ ಬುಡದಲ್ಲೇ ವಾಹನಗಳನ್ನು ನಿರ್ಬಂಧಿಸಲು ಚಿಂತನೆ ನಡೆಸಲಾಗುತ್ತಿದೆ. ಅಲ್ಲಿಂದ ವಿಶೇಷ ವಾಹನಗಳಲ್ಲಿ ಪ್ರವಾಸಿಗರನ್ನು ಬೆಟ್ಟದ ತುದಿಗೆ ಕರೆದೊಯ್ಯುವ ಚಿಂತನೆ ಕೂಡ ಇದೆ ಎಂದು ಅವರು ಮಾಹಿತಿ ನೀಡಿದರು.

Related posts

ಫಸ್ಟ್ ರ್‍ಯಾಂಕ್ ಟೆರರಿಸ್ಟ್‌ ಆದಿತ್ಯ: ಮಂಗಳೂರು ಬಾಂಬ್‌ ಆರೋಪಿ ಹೆಸರಲ್ಲಿ ಸಿನಿಮಾ

Times fo Deenabandhu

ಕೋವಿಡ್-19‌: ಹೊಸ ನಿಯಮಾವಳಿ ಪ್ರಕಟ

ದೇಶದಲ್ಲಿ ಶೇ. 69.80 ಸೋಂಕಿತರು ಗುಣಮುಖ

Times fo Deenabandhu