Times of Deenabandhu
  • Home
  • ಜಿಲ್ಲೆ
  • ಜೆ.ಇ.ಇ ಮೈನ್ಸ್ ಜನವರಿ ೨೦೨೦ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ವಿಶೇಷ ಸಾಧನೆ
ಜಿಲ್ಲೆ ದಕ್ಷಿಣ ಕನ್ನಡ

ಜೆ.ಇ.ಇ ಮೈನ್ಸ್ ಜನವರಿ ೨೦೨೦ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ವಿಶೇಷ ಸಾಧನೆ

ಮೂಡುಬಿದಿರೆ: ಪ್ರಥಮ ಜೆ.ಇ.ಇ ಅರ್ಹತಾ ಪರೀಕ್ಷೆಯಲ್ಲಿ ಜೆ.ಇ.ಇ. ಅಡ್ವಾಸ್‌ಗೆ ೮೦೬ ವಿದ್ಯಾರ್ಥಿಗಳು ಅರ್ಹತೆ ಪಡೆದು ರಾಜ್ಯದಲ್ಲಿ ಆಳ್ವಾಸ್ ಪದವಿ ಪರ್ವ ಕಾಲೇಜು ದಾಖಲೆ ಮಾಡಿದೆ. ಎನ್.ಪಿ.ಟಿ. ಪ್ರವೇಶಾತಿಗಾಗಿ ನಡೆದ ಜೆ.ಇ.ಇ ಮೈನ್ಸ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ೨೩ ವಿದ್ಯಾರ್ಥಿಗಳು ೯೫ ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದು, ೧೨೩ ವಿದ್ಯಾರ್ಥಿಗಳು ೯೦ ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ ಪಡೆದಿದ್ದಾರೆ.


ವಿದ್ಯಾರ್ಥಿಗಳಾದ ಅನುಷ್ (೯೮.೯೨), ಸುಹಾಸ್ ಸಿ. (೯೮.೨೩), ರಾಹುಲ್ ಶ್ರೀಶೈಲ್ ದಳವಾಯಿ (೯೭.೮೯), ಆಕಾಶ್ ಮೃತುಂಜಯ ಹಾರೋಗೇರಿ (೯೭.೭೬) ಎಸ್. ಅಭಿಷೇಕ್ (೯೭.೭), ಸುಧನ್ವ ಭಿಷ್ತೇಶ್ ನಾಡಿಗೇರಿ (೯೭.೪೭), ಕುಶಿ ಶೀತಲ್ ಚೌಗಲೆ (೯೭.೩೯), ಬಸವೇಶ್ ಡಿ (೯೭.೩೭), ಸಮರ್ಥ ಸಿದ್ಧಪ್ಪ ಶೆಲ್ಲಿಕೇರಿ (೯೭.೧೪), ಅನಘ ತೆನಗಿ (೯೬.೯೪), ವರುಣ್‌ತೇಜ್ ವೈ. ಡಿ. (೯೬.೨೫), ಲೋಹಿತ್ ಎಂ. ಎಸ್. (೯೬.೧೩), ಯಶಸ್ಸಿನೀ ಆರ್ (೯೬.೮), ಅಮೋಘ ಪ್ರಭು (೯೬.೮), ಮಧುಸೂದನ್ ಎಸ್ ಕೆ. (೯೫.೯೯), ಕಿರಣ್ ಮುರಗೋಡ್ನವರ (೯೫.೯೩), ಧ್ರುವ ಎನ್ ರಾಜ್ (೯೫.೯೩), ಪಿ ಎಸ್ ರವೀಂದ್ರ (೯೫.೭೩), ಹರ್ಷ ಅಮ್ಮಲಜೇರಿ. (೯೫.೭೩), ಚಂದನ್ ಕುಮಾರ್ ಎಸ್ (೯೫.೪೪), ಅವಿನಾಶ್ (೯೫.೩), ಅಭಿಷೇಕ್ ಸಂಗಪ್ಪ ಮಬನೂರು (೯೫.೧೭), ಜೀವನ್ ಕುಮಾರ್ ಎಸ್. ಎಂ (೯೫.೧೨).
ಈ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಪ್ರಾಂಶುಪಾಲರಾದ ಪ್ರೋ. ರಮೇಶ್ ಶೆಟ್ಟಿ ಅಭಿನಂದಿಸಿದ್ದಾರೆ.

Related posts

ಅದೊಂದು ‘ತಪ್ಪು’ ಮಾಡದೆ ಎಚ್ಚರವಹಿಸಿದ್ದರೆ ನೂರ್ಕಾಲ ಬಾಳುತ್ತಿದ್ದರೇ ಪೇಜಾವರ ಶ್ರೀ..?

Times fo Deenabandhu

ರಾ.ಹೆ.766ಸಿ ಭಾರಿ ವಾಹನ ನಿಷೇಧ: ಬದಲಿ  ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಡಳಿತ ಕ್ರಮ

ಬೃಹತ್ ಶಿಲಾಯುಗ ಕಾಲದ ನಿಲಸುಗಲ್ಲು ಪತ್ತೆ

Times fo Deenabandhu