Times of Deenabandhu
  • Home
  • ಮುಖ್ಯಾಂಶಗಳು
  • ಬೆಂಗಳೂರಿನಲ್ಲಿ ಭಾರತದ ಮೊದಲ ಗಗನಯಾನ ತರಬೇತಿ ಕೇಂದ್ರ ಸ್ಥಾಪನೆ: ಇಸ್ರೋ ಅಧ್ಯಕ್ಷ ಶಿವನ್‌
ಪ್ರಧಾನ ಸುದ್ದಿ ಮುಖ್ಯಾಂಶಗಳು

ಬೆಂಗಳೂರಿನಲ್ಲಿ ಭಾರತದ ಮೊದಲ ಗಗನಯಾನ ತರಬೇತಿ ಕೇಂದ್ರ ಸ್ಥಾಪನೆ: ಇಸ್ರೋ ಅಧ್ಯಕ್ಷ ಶಿವನ್‌

ಬೆಂಗಳೂರು: ಬೆಂಗಳೂರಿನಲ್ಲಿ ಭಾರತದ ಮೊದಲ ಗಗನಯಾನ ತರಬೇತಿ ಕೇಂದ್ರವನ್ನು 2022ರೊಳಗೆ ಸ್ಥಾಪಿಸಲಾಗುವುದೆಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋದ ಅಧ್ಯಕ್ಷ ಡಾ. ಕೆ ಶಿವನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾನವಸಹಿತ ಬಾಹ್ಯಾಕಾಶ ನೌಕೆ – ಪರಿಶೋಧನೆ ಎಂಬ ವಿಷಯದ ಕುರಿತ ಮೂರು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಕೆ ಶಿವನ್‌ ಮಾತನಾಡಿದರು.

ದೇಶದ ಮೊದಲ ಮಾನವಸಹಿತ ಗಗನಯಾನಕ್ಕೆ ಬೇಕಾದ ಎಲ್ಲ ಅಗತ್ಯ ತಂತ್ರಜ್ಞಾನವನ್ನು ಇಸ್ರೋ ಈಗಾಗಲೇ ಅಭಿವೃದ್ಧಿಪಡಿಸಿದೆ. ಪ್ರಸ್ತುತ ಇಸ್ರೋ ಬಾಹ್ಯಾಕಾಶ ಸಂಬಂಧಿತ ವ್ಯವಸ್ಥೆಗಳು ಹಾಗೂ ಅಲ್ಲಿನ ಜೀವ ವಿಜ್ಞಾನಗಳ ಕುರಿತು ಅಧ್ಯಯನ ನಡೆಸುತ್ತಿದೆ. ಹ್ಯುಮೆನಾಯ್ಡ್‌ಗಳ ಬಳಕೆಯಿಂದ ಅಲ್ಲಿನ ಜೀವ ವ್ಯವಸ್ಥೆ ಕುರಿತು ಅಧ್ಯಯನ ನಡೆಸಲಾಗುವುದು. ಈ ಉದ್ದೇಶಕ್ಕಾಗಿ ಇದೇ ವರ್ಷದ ಡಿಸೆಂಬರ್ ಹಾಗೂ ಬರುವ ವರ್ಷದ ಜೂನ್ ನಲ್ಲಿ ಎರಡು ಮಾನವರಹಿತ ಬಾಹ್ಯಾಕಾಶ ಕಾರ್ಯಾಚರಣೆ ನಡೆಸಲು ಇಸ್ರೋ ನಿರ್ಧರಿಸಿದೆ ಎಂದು ಶಿವನ್‌ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪೊ. ಕೆ. ವಿಜಯ್ ರಾಘವನ್, ಭಾರತೀಯ ಬಾಹ್ಯಾಕಾಶಯಾನ ಸಾಮಾಜಿಕ ಪ್ರಸ್ತುತತೆಯನ್ನು ಹೊಂದಿದ್ದು, ದೇಶೀಯ ನಿರ್ಮಿತ ನೌಕೆಯಲ್ಲಿ ಭಾರತದ ಗಗನಯಾನಿಗಳು ನಡೆಸುವ ಬಾಹ್ಯಾಕಾಶಯಾನ ಯುವಜನತೆಗೆ ಸ್ಪೂರ್ತಿಯಾಗಲಿದೆ ಎಂದರು.

ಎಂಟು ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಎಂಟು ಗಗನಯಾನಿಗಳೂ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಗಗನಯಾನಿಗಳ ತರಬೇತಿಗೆ ಸಂಬಂಧಿಸಿದ ಐದು ವಿಷಯಗಳ ಕುರಿತ 10 ತಾಂತ್ರಿಕ ಅಧಿವೇಶನಗಳು ಮೂರು ದಿನಗಳ ಕಾಲ ನಡೆಯಲಿದೆ.

Related posts

 ರಷ್ಯಾದ ಕೋವಿಡ್‌ ಲಸಿಕೆ ‘ಸ್ಪುಟ್ನಿಕ್‌’: ತಜ್ಞರಲ್ಲಿ ಆತಂಕ ಏಕೆ?

Times fo Deenabandhu

ನಾನು ಯಡಿಯೂರಪ್ಪ ಉತ್ತರಾಧಿಕಾರಿಯಲ್ಲ: ಪುತ್ರ ವಿಜಯೇಂದ್ರ

Times fo Deenabandhu

  ಶಿವಮೊಗ್ಗ ಜಿ.ಪಂ. ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕ

Times fo Deenabandhu