Times of Deenabandhu
  • Home
  • ಮುಖ್ಯಾಂಶಗಳು
  • ವಚನಾನಂದ ಶ್ರೀ ಬೆದರಿಕೆ ವಿವಾದ, ಯಡಿಯೂರಪ್ಪ ಬಳಿ ಕ್ಷಮೆ ಕೋರಿದ ನಿರಾಣಿ
ಮುಖ್ಯಾಂಶಗಳು ರಾಜಕೀಯ

ವಚನಾನಂದ ಶ್ರೀ ಬೆದರಿಕೆ ವಿವಾದ, ಯಡಿಯೂರಪ್ಪ ಬಳಿ ಕ್ಷಮೆ ಕೋರಿದ ನಿರಾಣಿ

ಬೆಂಗಳೂರು: ಹರಿಹರದಲ್ಲಿ ನಡೆದ ಹರಜಾತ್ರೆ ವೇಳೆ ವಚನಾನಂದ ಶ್ರೀಗಳ ಹೇಳಿಕೆಯಿಂದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಆಕ್ರೋಶಕ್ಕೆ ಗುರಿಯಾಗಿದ್ದ ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರು ಶನಿವಾರ ಸಿಎಂ ಭೇಟಿಯಾಗಿ ಕ್ಷಮೆ ಕೋರಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿದ ಮುರುಗೇಶ್‌ ನಿರಾಣಿ ಅವರು ಅಂದಿನ ಘಟನೆ ಸಂಬಂಧ ಬಿಎಸ್‌ ಯಡಿಯೂರಪ್ಪ ಅವರ ಕ್ಷಮೆ ಕೋರಿದರೆಂದು ತಿಳಿದುಬಂದಿದೆ.
“ತಮ್ಮನ್ನು ಸಚಿವರನ್ನಾಗಿ ಮಾಡಲೇಬೇಕೆಂದು ಒತ್ತಾಯಿಸುವಂತೆ ತಾವು ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಯವರಲ್ಲಿ ಕೇಳಿಕೊಂಡಿರಲಿಲ್ಲ. ಶ್ರೀಗಳೇ ಸ್ವಯಂಪ್ರೇರಣೆಯಿಂದ ಹೇಳಿಕೆ ನೀಡಿದ್ದಾರೆಯೇ ಹೊರತು ಇದರ ಹಿಂದೆ ತಮ್ಮ ಒತ್ತಡ ಇರಲಿಲ್ಲ,” ಎಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ ಸಮಜಾಯಿಷಿ ನೀಡಿದರೆಂದು ತಿಳಿದುಬಂದಿದೆ.
ದಾವಣಗೆರೆ ಹರಜಾತ್ರೆಯ ಕಾರ್ಯಕ್ರಮದ ವೇದಿಕೆಯಲ್ಲಿ ‘ಮುರುಗೇಶ್ ನಿರಾಣಿಯವರಿಗೆ ಸಚಿವ ಸ್ಥಾನ ನೀಡಬೇಕು ಇಲ್ಲದಿದ್ದಲ್ಲಿ ಪಂಚಮಸಾಲಿ ಸಮುದಾಯ ನಿಮ್ಮ ಕೈಬಿಡುತ್ತದೆ’ ಎಂದು ವಚನಾನಂದ ಸ್ವಾಮೀಜಿ ಬಿಎಸ್‌ವೈಗೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ವೇದಿಕೆಯಲ್ಲೇ ಯಡಿಯೂರಪ್ಪ ಗರಂ ಆಗಿದ್ದರು. ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Related posts

ಕೊರೊನಾ ನೈಸರ್ಗಿಕವಲ್ಲ, ಲ್ಯಾಬ್‌ನಲ್ಲಿ ಜನನ: ಗಡ್ಕರಿ

ಕೊರೊನಾ ಕರ್ಫ್ಯೂ ಎಫೆಕ್ಟ್‌: ಗುಳೇ ಹೋಗ್ತಿದ್ದ ಕಾರ್ಮಿಕರ ಹಣೆ ಮೇಲೆ ಪೊಲೀಸರು ಬರೆದಿದ್ದೇನು..?

Times fo Deenabandhu

ರಾಜ್ಯದಲ್ಲಿ ಕೊರೊನಾ ರುದ್ರನರ್ತನ, ಒಂದೇ ದಿನ ಬರೋಬ್ಬರಿ 54 ಹೊಸ ಕೇಸ್‌