Times of Deenabandhu
ಮುಖ್ಯಾಂಶಗಳು

ಕಾರು ಅಪಘಾತದಲ್ಲಿ ಖ್ಯಾತ ನಟಿ ಶಬಾನಾ ಆಜ್ಮಿಗೆ ತೀವ್ರ ಗಾಯ!

ಹಿಂದಿ ಚಿತ್ರರಂಗದ ಖ್ಯಾತ ನಟಿ ಶಬಾನಾ ಆಜ್ಮಿ ಚಲಿಸುತ್ತಿದ್ದ ಕಾರು ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಅಪಘಾತಕ್ಕೆ ಈಡಾಗಿದೆ. ಪುಣೆ-ಮುಂಬೈ ಹೆದ್ದಾರಿಯಲ್ಲಿಅವರು ಪ್ರಯಾಣ ಮಾಡುತ್ತಿದ್ದರು. ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶಬಾನಾ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಬಾನಾ ಜೊತೆಗೆ ಪತಿ ಜಾವೇದ್‌ ಅಖ್ತರ್‌ ಕೂಡ ಇದ್ದರು. ಅವರು ಗಾಯಗೊಂಡಿರುವ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಶಬಾನಾ ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಶಬಾನಾ ಆಜ್ಮಿ ಅವರು ಅಪಘಾತದಲ್ಲಿ ಗಾಯಗೊಂಡಿರುವುದು ನೋವಿನ ಸಂಗತಿ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂಬುದಾಗಿ ಮೋದಿ ಟ್ವೀಟ್‌ ಮಾಡಿದ್ದಾರೆ.

Related posts

ನೂರಾರು ವಿದ್ಯಾರ್ಥಿಗಳ ಜೊತೆಯಲ್ಲಿ ಭೋಜನ ಮಾಡುತ್ತ ಗ್ರಹಣ ವೀಕ್ಷಿಸಿದ ಡಾ.ಶಿವಮೂರ್ತಿ ಮುರುಘಾ ಶರಣರು

Times fo Deenabandhu

ಕಾಡಾನೆ ದಾಳಿಗೆ ಅರಣ್ಯ ರಕ್ಷಕ ದುರ್ಮರಣ; ಇನ್ನಿಬ್ಬರು ಅರಣ್ಯ ರಕ್ಷಕರು ಬಚಾವ್​

Times fo Deenabandhu

 ತಮಿಳುನಾಡು: ಒಂದು ಲಕ್ಷ ಗಡಿ ದಾಟಿದ ಸೋಂಕು ಪ್ರಕರಣ