Times of Deenabandhu
  • Home
  • ಜಿಲ್ಲೆ
  • ’ಕೃಷಿ’ ಸಹಜವಾದ ಬದುಕನ್ನು ಕೊಡುತ್ತದೆ.
ಚಿಕ್ಕಮಗಳೂರು ಜಿಲ್ಲೆ

’ಕೃಷಿ’ ಸಹಜವಾದ ಬದುಕನ್ನು ಕೊಡುತ್ತದೆ.

ಚಿಕ್ಕಮಗಳೂರು: ’ಕೃಷಿ’ ಸಹಜವಾದ ಬದುಕನ್ನು ಕೊಡುತ್ತದೆ. ಇಲ್ಲಿ ತೃಪ್ತಿ, ಸಮಾಧಾನ, ನೆಮ್ಮದಿ ಇದೆ ಎಂದು ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ ಅಭಿಪ್ರಾಯಿಸಿದರು.
ಜಿಲ್ಲಾ ಸಹೋದರತ್ವ ಸಮಿತಿ ಮೂಗ್ತಿಹಳ್ಳಿ ’ಕೃಷಿನಿವಾಸ’ದಲ್ಲಿ ನಿನ್ನೆ ಆಯೋಜಿಸಿದ್ದ ೩೮ನೆಯ ಮಾಸಿಕಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಸ್ಥಿರವಾದ ಕೃಷಿಯಲ್ಲಿ ಸಹಜತೆ ಇದೆ. ಕಣ್ತುಂಬ ನಿದ್ದೆ, ಹೊಟ್ಟೆತುಂಬ ಊಟ, ಕೈತುಂಬ ಕೆಲಸ ಇಲ್ಲಿ ಸಿಗುತ್ತದೆ. ಸಮಾಜದಲ್ಲಿ ಎಲ್ಲವೂ ಅಸಹವಾಗಿರುವ ಸಂದರ್ಭದಲ್ಲಿಕಷ್ಟಪಟ್ಟು ದುಡಿದು ಮತ್ತೊಬ್ಬರಿಗೆ ತೊಂದರೆ ಕೊಡದೆ ಬದುಕು ಕಟ್ಟಿಕೊಳ್ಳುವುದೇ ಸಹಜ-ಸುಂದರ ಜೀವನವೆಂಬುದು ತಾವು ಕಂಡುಕೊಂಡ ಸತ್ಯ ಎಂದರು.
ಸಮಾಜದಲ್ಲಿ ಅಸಮತೋಲನ, ಶೋಷಣೆ, ಜಾತಿವರ್ಗಗಳ ನಿರ್ಮಾಣವಾಗಿ ಗೊಂದಲದ ಗೂಡಾದ ಸಮಾಜ ನಮ್ಮನ್ನು ಅಸಹಜತೆಯತ್ತ ನೂಕಿದೆ. ಪರಸ್ಪರ ಕೊಟ್ಟು ಪಡೆಯುವ ಬದುಕೆ ಸಹಜಜೀವನ. ಸಾತ್ವಿಕ ಆಹಾರ-ಆಲೋಚನೆ ಇದಕ್ಕೆ ಅಗತ್ಯ ಎಂದ ಚಂದ್ರಶೇಖರ್, ಭೂಮಿಯನ್ನು ರಾಸಾಯನಿಕ, ಕ್ರೀಮಿನಾಶಕ, ಕೀಟನಾಶಕಗಳನ್ನು ಯಥೇಚ್ಛವಾಗಿ ಸುರಿದು ಅಸಹಜಸ್ಥಿತಿಗೆ ತಂದಿರುವುದು ಅನೇಕ ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಇಲ್ಲಿ ಬೆಳೆಯುವ ಬೆಳೆಯ ಮೂಲಕ ವಿಷವನ್ನು ಸೇವಿಸುತ್ತಿದ್ದೇವೆಂದು ವಿಷಾದಿಸಿದರು.
ಜೀವನದಲ್ಲಿ ಹಣ, ಹೆಸರು ಬಂದರೂ ಅಲ್ಲಿ ನೆಮ್ಮದಿ ಇರಲಿಲ್ಲ. ಸಹಜಕೃಷಿಗೆ ಬಂದಮೇಲೆ ತೃಪ್ತಿ ಇದೆ. ಆರಂಭದಲ್ಲಿ ಹತ್ತುವರ್ಷ ಈ ಮಣ್ಣನ್ನು ಸಹಜತೆಗೆ ತರಲು ಶ್ರಮಿಸಬೇಕಾಯಿತು. ಸಗಣಿಗೊಬ್ಬರ-ಜೀವಾಮೃತ ಕೊಡುತ್ತಾ ಹೋದಂತೆಲ್ಲ ಇಲ್ಲಿ ಪೂರ್ಣಪ್ರಮಾಣದಲ್ಲಿ ಜೀವಾಣುಸೃಷ್ಟಿಯಾಗಿದೆ. ಎನ್‌ಪಿಕೆ ಜೊತೆಗೆ ಸೂಕ್ಷ್ಮಣು ಜೀವಿಗಳು ಪರಿಪೂರ್ಣವಾಗಿ ಆವರಿಸಿದ್ದು, ಮುಂದೆ ಇದೇ ತಮ್ಮನ್ನು ಕರೆದೊಯ್ಯಲಿದೆ. ಕೃಷಿ ಇಂದು ಯುವಕರನ್ನು ಆಕರ್ಷಿಸುತ್ತಿಲ್ಲ. ದೇಶದ ಶೇ.೮೪ರಷ್ಟು ರೈತರು ಹಳ್ಳಿಗಳಲ್ಲಿ ಕೃಷಿಯನ್ನು ಅವಲಂಬಿಸಿದ್ದ ಕಾಲವಿತ್ತು. ಆದರೆ ಈಗ ಶೇ.೪೭ಕ್ಕೆ ಇಳಿದಿದೆ. ಸಹಜವಾದ ಬದುಕಿಗೆ ಪೂರಕವಾದ ಚಿಂತನೆಗಳನ್ನು ಸಮುದಾಯದಲ್ಲಿ ಬೆಳೆಸುತ್ತಿರುವ ಜಿಲ್ಲಾ ಸಹೋದರತ್ವ ಸಮಿತಿ ಕಾರ್‍ಯ ಮಾದರಿ ಎಂದು ಚಂದ್ರಶೇಖರ್ ನುಡಿದರು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರಕೃತಿಗೆ ಧಕ್ಕೆ ಮಾಡದೆ ಅದರಿಂದ ಬರುವ ಪ್ರತಿಫಲವನ್ನು ಹಿತಮಿತವಾಗಿ ಪಡೆಯುವ ಪ್ರಕ್ರಿಯೆಯೆ ಸಹಜವಾದ ಬದುಕು. ದುರಾಸೆ, ಜನಸಂಖ್ಯಾಸ್ಫೋಟದ ಪರಿಣಾಮ ಎಲ್ಲವೂ ಕಲಬೆರಿಕೆಯಾಗಿದೆ. ಪರಸ್ಪರ ಪ್ರೀತಿಸಿ ಗೌರವಿಸುವ ಸಹಜಕ್ರಿಯೆಗಾಗಿಯೆ ಆರಂಭಗೊಂಡಿರುವ ಸಹೋದರತ್ವಸಮಿತಿ ೨೮ ಜಾತಿಗಳ ಸಮೀಕರಣ ಹೊಂದಿದೆ ಎಂದರು.
ಸರ್ವರಿಗೂ ಸಮಬಾಳು-ಸಮಪಾಲು ಎಲ್ಲರೂ ಸಮಾನರು ಎಂದು ಸಂವಿಧಾನ ಹೇಳಿದೆ. ಅಸಹಜ ಬದುಕಿನ ವ್ಯಕ್ತಿಗಳನ್ನೆ ಚುನಾಯಿಸಿ ಅಧಿಕಾರ ನೀಡುತ್ತಿರುವ ಹಿನ್ನಲೆಯಲ್ಲಿ ಸಂವಿಧಾನದ ಆಶಯಗಳು ಇಡೇರಿಲ್ಲ. ಅಪವಿತ್ರ ಆಡಳಿತ ನಮ್ಮಲ್ಲಿದೆ. ಬುದ್ಧ, ಬಸವ, ಯೇಸು, ಅಂಬೇಡ್ಕರ್, ಕಾನ್ಷಿರಾಮ್ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹಜವಾದ ಬದುಕಿನತ್ತ ಸಮುದಾಯ ಸಾಗಬೇಕಾಗಿದೆ ಎಂದು ರಾಧಾಕೃಷ್ಣ ನುಡಿದರು.
ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾವೇದಿಕೆ ಜಿಲ್ಲಾಧ್ಯಕ್ಷ ಜೋಸೆಫ್ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮಾತನಾಡಿ ಉತ್ತಮ ಆಶಯಗಳೊಂದಿಗೆ ರಾಧಾಕೃಷ್ಣ ಅವರ ನೇತೃತ್ವದಲ್ಲಿ ಕಾರ್‍ಯನಿರ್ವಹಿಸುತ್ತಿರುವ ಸಹೋದರತ್ವ ಸಮಿತಿಯೊಂದಿಗೆ ಕೈಜೋಡಿಸುವ ಆಶಯ ವ್ಯಕ್ತಪಡಿಸಿದರು. ಬಿಎಸ್‌ಪಿ ಜಿಲ್ಲಾಕಛೇರಿ ಕಾರ್‍ಯದರ್ಶಿ ಗಂಗಾಧರ, ಜೆಡಿಎಸ್ ಮುಖಂಡ ಹುಣಸೇಮಕ್ಕಿಲಕ್ಷ್ಮಣ, ನಾರಾಯಣಗುರು ಸೇವಾಸಮಿತಿ ಅಧ್ಯಕ್ಷ ತಂಬನ್ ಮಾತನಾಡಿದರು. ಜಿಲ್ಲಾ ಸಹೋದರತ್ವ ಸಮಿತಿ ಅಧ್ಯಕ್ಷೆ ಕೆ.ಬಿ.ಸುಧಾ ಸ್ವಾಗತಿಸಿ, ಮಂಜುಳಾ ವಂದಿಸಿದರು. ವಾಯಬ್‌ಜಾನ್, ಹೊನ್ನಪ್ಪ, ವಸಂತಕುಮಾರ್, ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಲಾವಣ್ಯ ಮತ್ತು ಚಂದ್ರಶೇಖರ್‌ನಾರಣಾಪುರ ದಂಪತಿಗಳನ್ನು ಸನ್ಮಾನಿಸಲಾಯಿತು.

Related posts

ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಭದ್ರೆ….ನದಿ ನೀರಿನಲ್ಲಿ ಗಣನೀಯ ಪ್ರಮಾಣದ ಏರಿಕೆ….

ಮಗಳ ಮದುವೆ ಸಾಮೂಹಿಕ ವಿವಾಹದಲ್ಲಿ ಮಾಡಿದ ಆಯನೂರು ಮಂಜುನಾಥ್

Times fo Deenabandhu

ಶಿವಮೊಗ್ಗ ಮೆಡಿಕಲ್ ಕಾಲೇಜು ಸೌಲಭ್ಯಗಳನ್ನು ಉತ್ತಮಪಡಿಸಲು ಕ್ರಮ: ಸಂಸದ ಬಿ.ವೈ.ರಾಘವೇಂದ್ರ

Times fo Deenabandhu