Times of Deenabandhu
  • Home
  • ಜಿಲ್ಲೆ
  • ಕ್ರೀಡೆಯಿಂದ ಸಕಾರಾತ್ಮಕತೆ ಮೂಡಲು ಸಾಧ್ಯ
ಚಿಕ್ಕಮಗಳೂರು ಜಿಲ್ಲೆ

ಕ್ರೀಡೆಯಿಂದ ಸಕಾರಾತ್ಮಕತೆ ಮೂಡಲು ಸಾಧ್ಯ

ಚಿಕ್ಕಮಗಳೂರು : ಕ್ರೀಡೆಯಿಂದ ಸಕಾರಾತ್ಮಕತೆ ಮೂಡಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾ ಮುಖ್ಯಾಧಿಕಾರಿ ಕುಮಾರಿ ಶೃತಿ ಅಭಿಪ್ರಾಯಿಸಿದರು.
ಕರ್ನಾಟಕ ಸ್ಟೇಟ್ ಅಸೋಸಿಯೇಷನ್ ಜಿಲ್ಲಾ, ಕ್ಷೇತ್ರ ಮತ್ತು ನಗರ ಸಮಿತಿ ಇಂದು ನಗರದ ಪಾಲಿಟೆಕ್ನಿಕ್ ಕ್ರೀಡಾಂಗಣದಲ್ಲಿ ಆಯೋಜಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿತ್ವ ರೂಪಿಸುವಲ್ಲಿ ಕ್ರೀಡೆಗಳು ಸಹಕಾರಿ. ಕ್ರೀಡಾಕೂಟದಿಂದ ಒತ್ತಡದ ಬದುಕಿನಲ್ಲಿರುವ ಟೈಲರ್‌ಕುಟುಂಬಗಳಿಗೆ ಸಂತೋಷ ಸಿಗುತ್ತದೆ. ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿಡಲು ಕ್ರೀಡೆಗಳೂ ಸಹಕಾರಿ ಎಂದರು.
ಸಮಾಜಪರಿವರ್ತನೆಯಲ್ಲಿ ನಮ್ಮದು ಕೊಡುಗೆ ಇರಬೇಕು. ನಾವು ಮೊದಲು ಬದಲಾಗಬೇಕು. ನಂತರ ಕುಟುಂಬ, ಆನಂತರ ಸಮಾಜವನ್ನು ಬದಲಿಸಲು ಪ್ರಯತ್ನಿಸಬಹುದು. ಹೊಸ ಹೊಸ ವಿಚಾರಗಳನ್ನು ತಿಳಿದು, ಕಲಿತು, ಒಳಿತನ್ನು ರೂಢಿಸಿಕೊಳ್ಳಬೇಕು. ಸಣ್ಣಪುಟ್ಟ ಸಹಾಯವನ್ನಾದರೂ ಮತ್ತೊಬ್ಬರಿಗೆ ಮಾಡಿದರೆ ರಾತ್ರಿ ಮಲಗುವಾಗ ಒಳ್ಳೆಯ ನಿದ್ರೆ ಬರುತ್ತದೆ. ಮರುದಿನ ಒಳ್ಳೆಯದಿನ ಆರಂಭವಾಗುತ್ತದೆ ಎಂದರು.
ಎಲ್ಲರ ಜೀವನದಲ್ಲೂ ಕಷ್ಟಸುಖಗಳು ಇದ್ದೇ ಇರುತ್ತವೆ. ಅದನ್ನೆಲ್ಲಾ ಸಕಾರಾತ್ಮಕವಾಗಿ ತೆಗೆದುಕೊಂಡರೆ ಮಾತ್ರ ನಾವು ಖುಷಿಯಾಗಿರಬಹುದು. ನಮ್ಮ ಸುತ್ತಲಿನವರಿಗೂ ಖುಷಿಯನ್ನು ಹಂಚಬಹುದು. ಇಂತಹ ಜೀವನಕ್ಕೆ ಒಂದು ಅರ್ಥ ಇರುತ್ತದೆ ಎಂದ ಎಸ್ಪಿ ಶೃತಿ, ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಮುಖ್ಯ ಎಂದರು.
ನೀರನ್ನು ಮಿತವಾಗಿ ಬಳಸಬೇಕು. ಗಿಡ ಮರಗಳನ್ನು ಪೋಷಿಸಬೇಕು. ಮುಂದಿನಪೀಳಿಗೆಯ ಸೃಷ್ಟಿಕರ್ತರು ನಾವೇ ಆಗಿರುವುದರಿಂದ ಈ ಭೂಮಂಡಲವನ್ನು ಸುಂದರವಾಗಿ ಇಟ್ಟುಕೊಂಡು ಅವರಿಗೆ ಹಸ್ತಾಂತರಿಸುವ ಜವಾಬ್ದಾರಿ ಅರಿಯಬೇಕು. ಈ ಪೃಥ್ವಿಗೆ ನಮ್ಮೆಲ್ಲ ಆಸೆಗಳನ್ನು ಪೂರೈಸುವ ಸಾಮರ್ಥ್ಯವಿದೆ, ಆದರೆ ದುರಾಸೆಗಳನ್ನೆಲ್ಲ ಎಂಬ ಮಹಾತ್ಮಾಗಾಂಧೀಜಿ ಅವರ ಮಾತುಗಳನ್ನು ಉಲ್ಲೇಖಿಸಿದ ಅವರು, ಸ್ವಾರ್ಥಿಗಳಾಗದೆ ಉಪಕಾರಿಗಳಾಗಿ ಬದುಕುವ ಸಂಕಲ್ಪ ನಮ್ಮದಾಗಬೇಕೆಂದರು.
ಕೆಎಸ್‌ಟಿಎ ಜಿಲ್ಲಾಧ್ಯಕ್ಷ ಸಯ್ಯದ್‌ರೆಹಮಾನ್ ಅಧ್ಯಕ್ಷತೆವಹಿಸಿದ್ದು, ಮಾಜಿಅಧ್ಯಕ್ಷ ಎಸ್.ಪಿ.ಅಶೋಕಶೆಟ್ಟಿ ಸ್ವಾಗತಿಸಿ, ವಂದಿಸಿದರು. ಶೃತಿ ಅವರನ್ನು ಉಪಾಧ್ಯಕ್ಷ ಜೈನಾಬಿ, ಪವಿತ್ರ, ರಾಧ ಸನ್ಮಾನಿಸಿದರು. ಕ್ಷೇತ್ರಸಮಿತಿ ಅಧ್ಯಕ್ಷ ಎಚ್.ಆರ್.ಸುಧೀರ್, ಪ್ರಧಾನಕಾರ್‍ಯದರ್ಶಿ ಅನಿಲಕುಮಾರ್ ನೇತೃತ್ವದಲ್ಲಿ ವಿವಿಧ ಕ್ರೀಡಾಸ್ಪರ್ಧೆಗಳು ನಡೆದವು. ಮಹಿಳೆಯರು ಮತ್ತು ಮಕ್ಕಳಿಗಾಗಿ ಮ್ಯೂಸಿಕಲ್‌ಛೇರ್, ೧೦೦ಮೀ.ಓಟ, ಮಡಿಕೆಹೊಡೆಯುವುದು, ಲೆಮನ್ ಮತ್ತು ಸ್ಪೂನ್ ಸ್ಪರ್ಧೆಗಳು ನಡೆದರೆ, ಪುರುಷರಿಗಾಗಿ ೧೦೦ಮಿ.ಓಟ, ಗುಂಡುಎಸೆತ, ಹಗ್ಗಜಗ್ಗಾಟ ಮತ್ತು ಕಬ್ಬಡಿಪಂದ್ಯಗಳು ನಡೆದವು.

Related posts

ಮದ್ಯ ಮುಕ್ತ ರಾಜ್ಯಕ್ಕೆ ಸುವರ್ಣಾವಕಾಶ – ಶ್ರೀ ಡಾ. ಪಂಡಿತಾರಾಧ್ಯ ಶ್ರೀಗಳು

Times fo Deenabandhu

ಕೃಷಿ ವಿಶ್ವವಿದ್ಯಾಲದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಶೀಘ್ರ ಪೂರ್ಣಗೊಳಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚನೆ

ಶಿಕ್ಷಣಕ್ಕೆ ಒತ್ತು ನೀಡಿದರೆ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ: ಸಚಿವ ಸುರೇಶ್ ಕುಮಾರ್

Times fo Deenabandhu