Times of Deenabandhu
  • Home
  • ಮುಖ್ಯಾಂಶಗಳು
  • ಇಡೀ ವಿಶ್ವ ಒಂದಾಗಿ ಇರಾನ್‌ ವಿರುದ್ಧ ಹೋರಾಡಬೇಕಾಗಿದೆ: ಡೊನಾಲ್ಡ್‌ ಟ್ರಂಪ್‌ ಗುಡುಗು
ಪ್ರಧಾನ ಸುದ್ದಿ ಮುಖ್ಯಾಂಶಗಳು ವಿದೇಶ

ಇಡೀ ವಿಶ್ವ ಒಂದಾಗಿ ಇರಾನ್‌ ವಿರುದ್ಧ ಹೋರಾಡಬೇಕಾಗಿದೆ: ಡೊನಾಲ್ಡ್‌ ಟ್ರಂಪ್‌ ಗುಡುಗು

ವಾಷಿಂಗ್ಟನ್‌: ಇರಾನ್‌ ವಿರುದ್ಧ ಇಡೀ ವಿಶ್ವವೇ ಒಂದಾಗಿ ಹೋರಾಡಬೇಕಾಗಿದೆ. ಇದಕ್ಕೆ ಈಗ ಕಾಲ ಕೂಡಿಬಂದಿದೆ.
ಹೀಗೆಂದು ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ವಿರುದ್ಧ ಸಮರ ಸಾರಿದ್ದಾರೆ. ಇದಲ್ಲದೇ ಇರಾನ್‌ ವಿರುದ್ಧ ಇನ್ನಷ್ಟು ಆರ್ಥಿಕ ದಿಗ್ಬಂಧನ ಹೇರುವ ಸಾಧ್ಯತೆಗಳು ಕೂಡ ದಟ್ಟವಾಗಿವೆ.

ಇರಾನ್‌ ಸೇನಾ ದಂಡನಾಯಕ ಖಾಸಿಮ್‌ ಸುಲೇಮಾನಿ ಅಮೆರಿಕ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ನಂತರ ಉಂಟಾಗಿರುವ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುದ್ದಿಗೋಷ್ಠಿ ನಡೆಸಿದರು.

ಇರಾನ್‌ ನಡೆಸಿದ ದಾಳಿಯಲ್ಲಿ ಅಮೆರಿಕದ ಯಾವ ಯೋಧ ಕೂಡ ಮೃತಪಟ್ಟಿಲ್ಲ. ಇರಾಕ್‌ ಯೋಧರು ಕೂಡ ಮೃತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಖಾಸಿಮ್‌ ಸುಲೇಮಾನಿ ಉಗ್ರರಿಗೆ ತರಬೇತಿ ನೀಡುತ್ತಿದ್ದ ಬಗ್ಗೆ ಅಮೆರಿಕ ಗುಪ್ತಚರ ಇಲಾಖೆಗಳು ಮಾಹಿತ ನೀಡಿದ್ದವು. ಈ ಬಗ್ಗೆ ಹಲವಾರು ಬಾರಿ ಎಚ್ಚರಿಕೆ ಕೂಡ ನೀಡಿದ್ದೆವು. ಆದರೂ ಅದನ್ನು ಮುಂದುವರಿಸಲಾಗಿತ್ತು ಎಂದು ಟ್ರಂಪ್‌ ತಿಳಿಸಿದರು.

ಖಾಸಿಮ್‌ ಸುಲೇಮಾನಿ ಉಗ್ರನಾಗಿದ್ದ. ವಿಧ್ವಂಸಕ ಕೃತ್ಯಗಳನ್ನು ಮಾಡಿಸುತ್ತಿದ್ದ, ಕೆಲವು ವಾರಗಳ ಹಿಂದೆ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ಒಬ್ಬ ಅಮೆರಿಕ ಮೃತಪಟ್ಟಿದ್ದ. ಆ ನಂತರ ಆತನ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸದೆ. ನನ್ನ ಆದೇಶದ ಮೇರೆಗೆ ದಾಳಿ ನಡೆಸಿ ಜಗತ್ತಿನ ಉಗ್ರನನ್ನು ಹತ್ಯೆ ಮಾಡಲಾಯಿತು ಎಂದು ಟ್ರಂಪ್‌ ತಿಳಿಸಿದರು.

ನಾನು ಅಧ್ಯಕ್ಷನಾಗಿ ಇರುವವರೆಗೂ ಇರಾನ್‌ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ. ಇಡೀ ವಿಶ್ವ ಶಾಂತಿ, ಸಂಯಮದಿಂದ ಇರಬೇಕು ಎಂದರು.

ಅಮೆರಕ ಸದಾ ಶಾಂತಿ ಬಯಸುತ್ತದೆ. ಯಾವುದೇ ದೇಶ ಉಗ್ರರಿಗೆ ಬೆಂಬಲ ನೀಡಲು ಮುಂದಾದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದರು.

Related posts

 ಕ್ಷಯ, ಪೊಲಿಯೋದಂತೆ ಭಾರತ ಕೊರೊನಾ ವಿರುದ್ಧವೂ ಜಯ ಸಾಧಿಸಲಿದೆ – ಪ್ರಧಾನಿ ವಿಶ್ವಾಸ

 ನಟ ಸುಶಾಂತ್‌ ಮನೆಗೆಲಸದ ಸಹಾಯಕ ದೀಪೇಶ್‌ ಸಾವಂತ್‌‌ ಬಂಧನ 

Times fo Deenabandhu

 ಕಾಂಗ್ರೆಸ್ ಆಂತರಿಕ ಆಕ್ರೋಶ: ಮನಮೋಹನ್ ಸಿಂಗ್‌ ಬೆಂಬಲಕ್ಕೆ ನಿಂತ ಹಿರಿಯ ನಾಯಕರು!

Times fo Deenabandhu