Times of Deenabandhu
ಮುಖ್ಯಾಂಶಗಳು ಸಿನಿಮಾ

ಈ ಬಾಲಕಿ ಯಾರೆಂದು ಗುರುತಿಸುವಿರಾ?

ಮುಂಬೈ: ಬಾಲಿವುಡ್​ ಬ್ಯೂಟಿ ದೀಪಿಕಾ ಪಡುಕೋಣೆ ಭಾನುವಾರ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಪತಿ ರಣವೀರ್​ ಸಿಂಗ್​ ತಮ್ಮ ಪತ್ನಿಗೆ ವಿಭಿನ್ನವಾಗಿ ಶುಭಕೋರಿದ್ದಾರೆ. ದೀಪಿಕಾ ಅವರ ಪೋಟೋ ಗ್ಯಾಲರಿಯನ್ನು ಅಗೆದು ಬಹಳ ವರ್ಷಗಳ ಹಿಂದಿನ ಅಂದರೆ ದೀಪಿಕಾ ಬಾಲ್ಯದ ಫೋಟೋವನ್ನು ಹೇಗೋ ಹುಡುಕಿ ಅದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ ಶುಭಕೋರಿದ್ದಾರೆ.

ಪತ್ನಿಯ ಹುಟ್ಟುಹಬ್ಬಕ್ಕೆ ‘ಹ್ಯಾಪಿ ಬರ್ತ್​ಡೇ ಮೈ ಲಿಲ್​ ಮಾರ್ಸ್​ಮಲ್ಲೊವ್​’ ಎಂದು ಬಾಲ್ಯದ ಫೋಟೋ ಸಮೇತ ರಣವೀರ್​ ಶುಭಾಶಯ ತಿಳಿಸಿದ್ದಾರೆ.

ವಿಸ್ಮಯವೆಂದರೆ ಪೋಟೋ ಪೋಸ್ಟ್​ ಮಾಡಿ ಕೇವಲ ಒಂದು ಗಂಟೆ ಮಾತ್ರ ಕಳೆದಿದ್ದು, ಈವರೆಗೂ 12 ಲಕ್ಷ ಮಂದಿ ಫೋಟೋವನ್ನು ನೋಡಿದ್ದಾರೆ. ಬಾಲಿವುಡ್​ ನಟಿ ಮೌನಿ ರಾಯ್​ ಓ ಮೈ ಗಾಡ್​ ಎಂದು ಹುಬ್ಬೇರಿಸಿದ್ದಾರೆ. ತಹಿರಾ ಕಶ್ಯಪ್​ ಸೋ ಕ್ಯೂಟ್​ ಎಂದು ಹೃದಯದ ಎಮೋಜಿಯೊಂದಿಗೆ ಶುಭಕೋರಿದ್ದಾರೆ. ಅಲ್ಲದೆ, ಚಿತ್ರರಂಗದ ಸಾಕಷ್ಟು ಮಂದಿ ಡಿಪ್ಪಿಗೆ ಬರ್ತ್​ಡೇ ವಿಶ್​ ಮಾಡಿದ್ದಾರೆ.

ದೀಪಿಕಾ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಉತ್ತರ ಪ್ರದೇಶದ ಲಖನೌದಲ್ಲಿ ಆಚರಿಸಿಕೊಂಡಿದ್ದಾರೆ. ತಮ್ಮ ಮುಂದಿನ ಚಪಾಕ್​ ಚಿತ್ರದಲ್ಲಿ ಆಸಿಡ್​ ದಾಳಿ ಸಂತ್ರಸ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಂತ್ರಸ್ತೆ ಮಾಲ್ತಿ ಅವರನ್ನು ಭೇಟಿ ಮಾಡಿ ಕೇಕ್​​ ಕತ್ತಿರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇನ್ನು ಪತಿ ರಣವೀರ್​ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಡಿಪ್ಪಿ, ನನ್ನ ಬರ್ತ್​ಡೇ ಬಂದಾಗಲೆಲ್ಲಾ ರಣವೀರ್​ ನನಗಾಗಿ ವಿಶೇಷವೊಂದನ್ನು ಮಾಡುತ್ತಾರೆ. ವಿಶೇಷ ಉಡುಗೊರೆಯೊಂದನ್ನು ಕೊಡುತ್ತಾರೆ. ಹುಟ್ಟುಹಬ್ಬ ಕ್ಷಣವನ್ನು ಸ್ಮರಣೀಯವಾಗಿಸುವ ಪ್ರಯತ್ನ ಮಾಡುತ್ತಾರೆ. ಇದಕೆಲ್ಲದಕ್ಕಿಂತ ಹೆಚ್ಚಾಗಿ ನನ್ನ ಬರ್ತ್​ಡೇ ಆಗಿರಲಿ ಅಥವಾ ರಣವಿರ್​ ಬರ್ತ್​ಡೇ ಆಗಿರಲಿ ಇಬ್ಬರು ಒಟ್ಟಿಗೆ ಸಾಕಷ್ಟು ಉತ್ತಮ ಸಮಯ ಕಳೆಯುತ್ತೇವೆ ಎಂದಿದ್ದಾರೆ.

Related posts

 ಸಂಸದರಿಗೆ ಕೊರೊನಾ, ಸಂಸತ್‌ ಅಧಿವೇಶನ ಅರ್ಧಕ್ಕೆ ಮೊಟಕುಗೊಳಿಸಲು ಚಿಂತನೆ

Times fo Deenabandhu

 14 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ನಾನಿದನ್ನು ಒಪ್ಪಿಕೊಳ್ಳಲ್ಲ, ವಡಿವೇಲ್​ ಸರ್​ ನನಗಿಂತಲೂ ತುಂಬಾ ಕ್ಯೂಟ್ ಎಂದ ರಶ್ಮಿಕಾ ಮಂದಣ್ಣ​

Times fo Deenabandhu