Times of Deenabandhu
  • Home
  • ಜಿಲ್ಲೆ
  • ಇತಿಹಾಸಕ್ಕೆ ಸಂಶೋಧನಾತ್ಮಕ ಚೌಕಟ್ಟು ಅಗತ್ಯ
ಜಿಲ್ಲೆ ಮುಖ್ಯಾಂಶಗಳು

ಇತಿಹಾಸಕ್ಕೆ ಸಂಶೋಧನಾತ್ಮಕ ಚೌಕಟ್ಟು ಅಗತ್ಯ

ಶಿವಮೊಗ್ಗ: ಇತಿಹಾಸ ನಮ್ಮ ಮನೆಯಂಗಳದಲ್ಲೇ ಪ್ರಾರಂಭವಾಗುತ್ತದೆ. ಇದಕ್ಕೆ ಒಂದು ಸಂಶೋಧನಾತ್ಮಕ ಚೌಕಟ್ಟಿನ ಅಧ್ಯಯನ ಅಗತ್ಯವಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬರಹಹಾರ ಕತ್ತಿಗೆ ಚೆನ್ನಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಬಾಪೂಜಿನಗರದ ಸರಕಾರಿ ಪದವಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾಲೇಜಿಗೊಂದು ಇತಿಹಾಸ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತಿಹಾಸಕ್ಕೆ ಅಧ್ಯಯನ ಅಗತ್ಯ. ಅದರ ಅರಿವು ಅತಿ ಮುಖ್ಯ. ಇತಿಹಾಸವನ್ನು ಅರಿಯದವರನು ಇತಿಹಾಸ ಬರೆಯಲಾರ ಎಂಬ ಮಾತಿದೆ. ಅದೇ ರೀತಿ ಇತಿಹಾಸವನ್ನು ಸ್ಥಳೀಯವಾಗಿ ನಾವು ಗಮನಿಸಿ ಒತ್ತು ನೀಡಬೇಕು. ಹಳ್ಳಿಯ ಸಂಸ್ಕೃತಿ, ಒಗಟು, ಗಾದೆಮಾತುಗಳ ಕುರಿತಾಗಿ ನಾವು ಇತಿಹಾಸ ಸೃಷ್ಟಿಸಬೇಕಿದೆ. ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆ ಹೆಚ್ಚಿನ ಒಲವಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಪ್ಪನಾಯಕನ ಶಿಸ್ತು ಕುರಿತು ದಾವಣಗೆರೆಯ ಇತಿಹಾಸ ಪ್ರಾಧ್ಯಾಪಕ ಬಿ. ಸಿ. ರಾಕೇಶ್ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ. ಬಿ. ಆರ್. ಧನಂಜಯ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಆರ್. ರವಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಚನ್ನಪ್ಪ, ಪ್ರೊ. ಮಹೇಶ್ ಉಪಸ್ಥಿತರಿದ್ದರು.
ಕೆಳದಿಪ್ರಭು ಶಿಸ್ತಿನ ಶಿವಪ್ಪ ನಾಯಕ ಪ್ರತಿಷ್ಠಾನ ಮತ್ತು ಬಾಪೂಜಿನಗರ ಕಾಲೇಜಿನ ಆಶ್ರಯದಲ್ಲಿ ಜರುಗಿದ ಈ ಕಾರ್‍ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪ್ರೊ. ಎನ್. ವಿ. ವಸಂತ್ ಮಾತನಾಡಿದರು. ಪ್ರೊ. ರೇಷ್ಮಾ ಸ್ವಾಗತಿಸಿ, ನಿರೂಪಿಸಿದರು.

 

Related posts

 65ರ ವೃದ್ಧೆಗೆ 13 ತಿಂಗಳಲ್ಲಿ 8 ಮಕ್ಕಳು…!

Times fo Deenabandhu

ಫೆ.೨ ರಂದು ದಕ್ಷಿಣ ಭಾರತ ಮಿಸ್ಟರ್ ಅಂಡ್ ಮಿಸಸ್ ಸೂಪರ್ ಮಾಡಲ್ಸ್ ಆಫ್ ಸೌತ್ ಇಂಡಿಯಾ ಎಂಬ ಗ್ರ್ಯಾಂಡ್ ಫಿನಾಲೆ

Times fo Deenabandhu

ಕೃಷಿ ಚಟುವಟಿಕೆಗಾಗಿ ರೈತರಿಗೆ ಪಾಸ್ ವಿತರಣೆ

Times fo Deenabandhu