Times of Deenabandhu
  • Home
  • ಜಿಲ್ಲೆ
  • ಶಿವಮೊಗ್ಗ
  • ಜಾತಿ ನಿಂದನೆ ಪ್ರಕರಣ: ಕುವೆಂಪು ವಿವಿ ಕುಲಸಚಿವರನ್ನು ಬಂದಿಸಲು ವಿದ್ಯಾರ್ಥಿ ಸಂಘಟನೆಯ ಆಗ್ರಹ
ಜಿಲ್ಲೆ ಶಿವಮೊಗ್ಗ

ಜಾತಿ ನಿಂದನೆ ಪ್ರಕರಣ: ಕುವೆಂಪು ವಿವಿ ಕುಲಸಚಿವರನ್ನು ಬಂದಿಸಲು ವಿದ್ಯಾರ್ಥಿ ಸಂಘಟನೆಯ ಆಗ್ರಹ

ಶಿವಮೊಗ್ಗ ಜ.4: ಸಂಘಟನೆಯ ಸದಸ್ಯನಿಗೆ ಜಾತಿ ನಿಂದನೆ ಮಾಡಿದ ಕುವೆಂಪು ವಿವಿ ಕುಲಸಚಿವ ಪ್ರೊ.ಎಸ್.ಎಸ್.ಪಾಟೀಲ್ ಅವರನ್ನು ಬಂಧಿಸಬೇಕು ಹಾಗೂ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ವಿನಯ್ ಕೆ.ಸಿ.ರಾಜಾವತ್ ಒತ್ತಾಯಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಿಯ ಹಾಸ್ಟ್ಟೆಲ್‍ನಲ್ಲಿ ಕಳಪೆ ಆಹಾರ ಸರಬರಾಜು ಆಗುತ್ತಿರುವ ಬಗ್ಗೆ ಸಂಘಟನೆಯು  ಡಿ.31ರ ಬೆಳಿಗ್ಗೆ ಕುಲಪತಿಗಳಿಗೆ ದೂರು ನೀಡಲು ಹೋದಾಗ ಕುಲಪತಿಗಳ ಪರವಾಗಿ ಕುಲಸಚಿವರು ದೂರು ಸ್ವೀಕರಿಸಿ ಸದಸ್ಯ ಕೆ.ಸಿ.ಪವನ್ ಅವರಿಗೆ ಜಾತಿಯನ್ನು ಕೇಳಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ವಿವಿಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ರೀತಿಯಲ್ಲಿ ನೋಡಬೇಕಾಗಿದೆ. ಆದರೆ ಮನವಿ ಸಲ್ಲಿಸಲು ಹೋದಾಗ ಕುಲಸಚಿವರು ಪವನ್ ಅವರನ್ನು ಜಾತಿನಿಂದನೆ ಮಾಡಿ ಬಂಜಾರ ಸಮಾಜಕ್ಕೆ ನಿಂದಿಸಿರುವುದು ನೋವು ತಂದಿದೆ ಎಂದರು.

ಡಿ.31ರಂದು ಮಧ್ಯಾಹ್ನ ಭದ್ರಾವತಿ ಗ್ರಾಮಾಂತರ ಠಾಣೆಗೆ ಸಂಘಟನೆಯ ಸದಸ್ಯರು ದೂರು ನೀಡಲು ತೆರಳಿದ್ದು, ಆ ಸಮಯದಲ್ಲಿ ತಾವು ಠಾಣೆಗೆ ಭೇಟಿ ನೀಡಿ ಈಗಲೇ ದೂರು ಬೇಡ ವಿವಿಗೆ ತೆರಳಿ ವಿಚಾರಣೆ ನಡೆಸೋಣ ಎಂದು ವಿವಿಗೆ ಹೋದಾಗ ಕುಲಪತಿಗಳು ಹಾಗೂ ಕುಲಸಚಿವರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದಾಗ ಕುಲಸಚಿವರು ಕ್ಷಮೆ ಯಾಚಿಸಿದರು. ಸಂಘಟನೆಯು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದು, ಇದನ್ನು ತಿರಸ್ಕರಿಸಿದ್ದÀಕ್ಕೆ ಜ.1ರಂದು ಗ್ರಾಮಾಂತರ ಠಾಣೆಯಲ್ಲಿ ಕುಲಸಚಿವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದರು.

ಕೆ.ಸಿ.ಪವನ್ ಅವರಿಗೆ ಜಾತಿ ನಿಂದನೆ ಮಾಡಿ ಬಂಜಾರ ಸಮಾಜವನ್ನು ಅವಮಾನ ಮಾಡಿದ್ದಾರೆ. ಇದು ಕುಲಸಚಿವರಿಗೆ ಶೋಭೆ ತರುವುದಲ್ಲ. ಕುಲಸಚಿವರ ವಿರುದ್ಧ ಬಂಜಾರ ಸಮಾಜದ ಗುರುಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಬಂಜಾರ ಸಮಾಜದ ಯುವ ಮುಖಂಡ ಡಿ.ಆರ್.ಗಿರೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಶ್, ಉಮಾಮಹೇಶ್ವರ್ ನಾಯ್ಕ, ಮಂಜಾನಾಯ್ಕ ಉಪಸ್ಥಿತರಿದ್ದರು.

 

 

 

 

 

Related posts

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಎನ್‌ಬಿಎ ಮಾನ್ಯತೆ

Times fo Deenabandhu

ವೈದ್ಯಕೀಯ ಸಿಬ್ಬಂಧಿಗೆ ಗುಣಮಟ್ಟದ ಆಹಾರ ಒದಗಿಸಲು ಸರ್ಕಾರಕ್ಕೆ ಒತ್ತಾಯ : ಸಿ.ಎಸ್.ಷಡಾಕ್ಷರಿ

ಮಲ್ಲಾಡಿಹಳ್ಳಿಯಲ್ಲಿ ಜನವರಿ -೧ರಿಂದ ಸಂಭ್ರಮದ ನಾಟಕೋತ್ಸವ

Times fo Deenabandhu