Times of Deenabandhu
  • Home
  • ಜಿಲ್ಲೆ
  • ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು
ಜಿಲ್ಲೆ ಶಿವಮೊಗ್ಗ

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ಶಂಕರಘಟ್ಟ ಜ.2: ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಎಸ್.ಎಸ್.ಪಾಟೀಲ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿದ್ಯಾರ್ಥಿ ಕೆ.ಸಿ.ಪವನ್ ಎನ್ನುವವರು ಕುಲಸಚಿವರಾದ ಪ್ರೊ.ಎಸ್.ಎಸ್.ಪಾಟೀಲ್ ಅವರಲ್ಲಿ ಮಾಹಿತಿಯೊಂದನ್ನು ಕೇಳಲು ಹೋದಾಗ ಅಲ್ಲಿ ಅವರು ಜಾತಿ ಹೆಸರು ಹೇಳಿ ನಿಂದಿಸಿದರು ಎಂದು ಪವನ್ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂದು ನೀಡಿದ್ದಾನೆ. ದೂರನ್ನು ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿ ಇದೆ ಎಂದು ವರದಿಯಾಗಿದೆ.

ಈ ಬಗ್ಗೆ ಹೆಚ್ಚಿನ ವಿವರ ಪಡೆಯಲು  ವಿಶ್ವವಿದ್ಯಾನಿಲಯದ ಕುಲಪತಿಗಳು ಹಾಗೂ ಕುಲಸಚಿವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಇಬ್ಬರು ಕೂಡ ದೂರವಾಣಿ ಕರೆಗೆ ಲಭ್ಯವಾಗಿಲ್ಲ.

 

 

 

Related posts

ನಮ್ಮ ಸಂಸ್ಕೃತಿ ಸಂಸ್ಕಾರ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಲಿ

Times fo Deenabandhu

ಭಾರತದ ಆಹಾರ ಸಾರ್ವಭೌಮತ್ವ ರಕ್ಷಣೆಗೆ ಆಗ್ರಹ

Times fo Deenabandhu

ಅಂಬಿಗರಚೌಡಯ್ಯನವರ ವಚನಗಳ ರಾಜ್ಯಮಟ್ಟದ ಕಮ್ಮಟ: ವಚನ ವಿವೇಕ’

Times fo Deenabandhu