Times of Deenabandhu
  • Home
  • ಮುಖ್ಯಾಂಶಗಳು
  • ಹಣ ಕದಿಯಲು ಎಟಿಎಂ ಒಳಗೆ ಹೋಗಿದ್ದ… ಹೊರಗೆ ಬರುವುದು ಹೇಗೆಂದು ಮರೆತು ಹೋಗಿ ಲಾಕ್ ಆಗ್ಬಿಟ್ಟ…!
ಮುಖ್ಯಾಂಶಗಳು

ಹಣ ಕದಿಯಲು ಎಟಿಎಂ ಒಳಗೆ ಹೋಗಿದ್ದ… ಹೊರಗೆ ಬರುವುದು ಹೇಗೆಂದು ಮರೆತು ಹೋಗಿ ಲಾಕ್ ಆಗ್ಬಿಟ್ಟ…!

ಮಾಡಿದ ಪಾಪ ಕಾಡುತ್ತದೆ ಎನ್ನುವುದು ಬಹುಶಃ ಇದಕ್ಕೇ ಇರಬೇಕು. ಈ ದರೋಡೆಕೋರ ಎಟಿಎಂ ದೋಚಬೇಕೆಂದು ಭರ್ಜರಿಯಾಗಿ ಕನಸು ಕಟ್ಟಿಕೊಂಡು ಎಟಿಎಂ ಕೇಂದ್ರದೊಳಗೆ ಎಂಟ್ರಿ ಕೊಟ್ಟಿದ್ದ. ಆದರೆ, ಅಲ್ಲಿ ಈತ ಊಹಿಸದೇ ಇರುವಂತಹ ಸನ್ನಿವೇಶ ಇವನಿಗೆ ಎದುರಾಗಿತ್ತು.
ಇದು ನಡೆದದ್ದು ಚೀನಾದಲ್ಲಿ. ದಿಢೀರ್ ಶ್ರೀಮಂತನಾಗಬೇಕೆಂಬ ಆಸೆಯಿಂದ ಈ ಭೂಪ ಎಟಿಎಂ ದರೋಡೆಗೆ ಸ್ಕೆಚ್ ಹಾಕಿ ಹಾಡಹಗಲೇ ಎಟಿಎಂ ಕೇಂದ್ರದೊಳಗೆ ಎಂಟ್ರಿಯಾಗುವಲ್ಲಿ ಸಕ್ಸಸ್ ಆಗಿದ್ದ. ಆದರೆ, ತನ್ನ ಪಾಪ ಕಾರ್ಯವೇ ತನಗೆ ತಿರುಗುಬಾಣವಾಗುತ್ತದೆ ಎಂಬ ಸಣ್ಣ ಸುಳಿವೂ ಈತನಿಗೆ ಇರಲಿಲ್ಲ.
ಹಣ ದೋಚುವ ಸಲುವಾಗಿ ಈತ ಎಟಿಎಂ ಕೇಂದ್ರದೊಳಗೆ ಕಾಲಿಟ್ಟ ತಕ್ಷಣ ಬಾಗಿಲು ಬಂದ್ ಆಗಿದೆ. ಆದರೆ, ಒಳಗೆ ಸುಲಭವಾಗಿ ಹೋಗಿದ್ದ ಈ ಕಳ್ಳನಿಗೆ ಹೊರಗೆ ಬರುವುದು ಹೇಗೆ ಎಂಬುದು ಮರೆತು ಹೋಗಿತ್ತು. ಹೀಗಾಗಿ, ಬಾಗಿಲನ್ನು ತೆಗೆಯುವುದು ಹೇಗೆ ಎಂದು ಗೊತ್ತಾಗದೆ ಟೆನ್ಷನ್ನಿನಲ್ಲಿ ಈತ ಬಾಗಿಲನ್ನೇ ಒಡೆಯಲು ಯತ್ನಿಸಿದ್ದಾನೆ. ಅದು ಸಫಲವಾಗದೇ ಇದ್ದಾಗ ಎಟಿಎಂ ಯಂತ್ರವನ್ನೂ ಒಡೆದು ಹಾಕಲು ನೋಡಿದ್ದಾನೆ. ಈ ಅಷ್ಟೂ ಘಟನೆ ಎಟಿಎಂ ಕೇಂದ್ರದೊಳಗಿದ್ದ ಸಿಸಿ ಕ್ಯಾಮೆರಾದಲ್ಲಿ ನೀಟಾಗಿ ರೆಕಾರ್ಡ್ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಆಗಿಯೇ ವೈರಲ್ ಆಗುತ್ತಿದೆ.
ದರೋಡೆ ಮಾಡಲು ಬಂದ ಜಾಗದಲ್ಲೇ ತಾನು ಸಿಕ್ಕಿಬಿದ್ದನಲ್ವಾ ಎಂಬ ಟೆನ್ಷನ್ನಿನಲ್ಲಿ ಈ ಕಳ್ಳ ಬಾಗಿಲು ಒಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದ. ಇದರ ನಡುವೆ ಜೋರಾಗಿ ಸೈರನ್ ಕೂಡಾ ಮೊಳಗಲು ಆರಂಭಿಸಿತ್ತು. ಈ ಸೌಂಡಿಗೆ ಕಳ್ಳನ ಎದೆಬಡಿತ ಹೆಚ್ಚಾಗಿ ಇನ್ನಷ್ಟು ವೇಗದಲ್ಲಿ ಬಾಗಿಲು ಒಡೆಯಲು ಯತ್ನಿಸಿದ್ದ. ತುಂಬಾ ಹೊತ್ತಿನ ಪ್ರಯತ್ನದ ಬಳಿಕ ಈತ ಬಾಗಿಲು ಒಡೆಯುವಲ್ಲಿ ಸಫಲನಾಗಿದ್ದ. ಹಣ ಸಿಗದಿದ್ದರೂ ಪರವಾಗಿಲ್ಲ ಎಂದು ಇಲ್ಲಿಂದ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದ. ಆದರೆ, ಅದೃಷ್ಟ ಈತನ ಪರ ಇರಲಿಲ್ಲ. ಹೀಗಾಗಿ, ಓಡಿದ ಮರುಕ್ಷಣದಲ್ಲೇ ಈತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ…!

 

Related posts

 ಬಕ್ರೀದ್‌ ಹಬ್ಬ: ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ

ಜು.13ರಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಶುರು: 71 ಸಾವಿರ ಶಿಕ್ಷಕರ ನೇಮಕ

 ಭಾರತದ ಪ್ರತೀಕಾರ ಕ್ರಮದ ಭಯ: ಗಡಿಯಲ್ಲಿ ಪಾಕ್ ಯುದ್ಧ ವಿಮಾನಗಳ ಹಾರಾಟ!