Times of Deenabandhu
  • Home
  • ಮುಖ್ಯಾಂಶಗಳು
  • ಪ್ರಧಾನಿ ನರೇಂದ್ರ ಮೋದಿಗೆ ದೇವಸ್ಥಾನ ನಿರ್ಮಿಸಿ ಅಭಿಮಾನ ಮೆರೆದ ತಮಿಳುನಾಡು ರೈತ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಪ್ರಧಾನಿ ನರೇಂದ್ರ ಮೋದಿಗೆ ದೇವಸ್ಥಾನ ನಿರ್ಮಿಸಿ ಅಭಿಮಾನ ಮೆರೆದ ತಮಿಳುನಾಡು ರೈತ

ತಿರುಚನಾಪಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಚಟುವಟಿಕೆಗಳಿಂದ ಪ್ರಭಾವಿತನಾಗಿರುವ ತಮಿಳುನಾಡಿನ ಸಾಮಾನ್ಯ ರೈತರೊಬ್ಬರು ಸ್ವಂತ ಜಮೀನಿನಲ್ಲಿ ಪ್ರಧಾನಿ ಮೋದಿ ಅವರಿಗೆ ದೇವಸ್ಥಾನ ನಿರ್ಮಿಸಿದ್ದಾರೆ.

ತಿರುಚುನಾಪಳ್ಳಿಗೆ 63 ಕಿಲೋಮೀಟರ್ ದೂರದಲ್ಲಿರುವ ಎರಕುಡಿ ಗ್ರಾಮದ ಪಿ.ಶಂಕರ್ ದೇವಸ್ಥಾನ ನಿರ್ಮಿಸಿ ಅಭಿಮಾನ ಮೆರೆದ ರೈತ. 16 ಚದರ ಅಡಿ ಜಾಗದಲ್ಲಿ ದೇವಸ್ಥಾನ ನಿರ್ಮಿಸಲಾಗಿದ್ದು, 1.2 ಲಕ್ಷ ರೂಪಾಯಿ ನಿರ್ಮಾಣಕ್ಕೆ ವೆಚ್ಚವಾಗಿದೆಯಂತೆ. ಅಲ್ಲದೆ ಪ್ರತಿನಿತ್ಯ ಹೂಗಳಿಂದ ಸಿಂಗರಿಸಿ ಹಾರತಿಯನ್ನೂ ಬೆಳಗುತ್ತಾರಂತೆ.

ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿ ಎಂದು ಹೇಳುವ ಶಂಕರ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ 2,000 ರೂ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ಅನಿಲ ಸಂಪರ್ಕ ಮತ್ತು ಶೌಚಗೃಹವನ್ನು ನಿರ್ಮಿಸಿಕೊಂಡಿದ್ದೇನೆ ಎಂದಿದ್ದಾರೆ.
ಮೋದಿ ಅವರನ್ನು ದೀರ್ಘಕಾಲದಿಂದ ನೋಡುತ್ತಿದ್ದು, ಅವರ ವ್ಯಕ್ತಿತ್ವವನ್ನು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಮೋದಿ ದೇವಸ್ಥಾನದಲ್ಲಿ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ. ಜಯಲಲಿತಾ, ಪ್ರಸ್ತುತ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಪೋಟೋಗಳಿಗೂ ದೇವಸ್ಥಾನದಲ್ಲಿ ಜಾಗ ಕಲ್ಪಿಸಿದ್ದಾರೆ.

ಸುದ್ದಿ ಓದುತ್ತಿದ್ದರೆ ಶಂಕರ್ ಬಿಜೆಪಿ ಕಾರ್ಯಕರ್ತನಿರಬಹುದು ಎಂಬ ಸಣ್ಣ ಅನುಮಾನ ಮೂಡುವುದು ಸಹಜ. ಈ ಕುರಿತು ವಿಚಾರಣೆ ನಡೆಸಿದಾಗ ಆತ ಸಾಮಾನ್ಯ ರೈತ ಎಂಬುದಾಗಿ ತಿಳಿದುಬಂದಿದೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಹಲವು ಷರ್ವಗಳ ಕಾಲ ಕೊಲ್ಲಿ ರಾಷ್ಟ್ರಗಳಲ್ಲಿ ದುಡುದಿರುವ ಶಂಕರ್ ಕೆಲವು ವರ್ಷಗಳ ಹಿಂದೆ ಸ್ವದೇಶಕ್ಕೆ ವಾಪಸ್​ ಆಗಿ ಊರಿನಲ್ಲಿ ಜಮೀನು ಖರೀದಿಸಿ ವ್ಯವಸಾಯ ನಡೆಸುತ್ತಿದ್ದಾರೆ.

Related posts

ಒಂದೇ ವರ್ಷದಲ್ಲಿ 1 ಕೋಟಿ ರೂ. ‘ದುಡಿದ’ ಉತ್ತರ ಪ್ರದೇಶದ ಸರಕಾರಿ ಶಾಲಾ ಶಿಕ್ಷಕಿ!

 ಮದುವೆ ಮನೆ ಕೊರೋನಾ ಹಾಟ್‌ಸ್ಪಾಟ್‌ , ವಧು-ವರ ಸೇರಿ 43 ಜನ ಪಾಸಿಟಿವ್

ಲಾಕ್‌ಡೌನ್‌ ಅಂತ್ಯ: ರಾತ್ರಿ ಕರ್ಫ್ಯೂ ಮುಂದುವರಿಕೆ