Times of Deenabandhu
  • Home
  • ಮುಖ್ಯಾಂಶಗಳು
  • ಜೊಮಾಟೊ ತೆಕ್ಕೆಗೆ ಉಬರ್‌ ಈಟ್ಸ್‌ ಸಂಭವ, ಸ್ವಿಗ್ಗಿ ಹಿಂದಿಕ್ಕಲು ಹೊಸ ಪ್ಲ್ಯಾನ್‌
ಮುಖ್ಯಾಂಶಗಳು

ಜೊಮಾಟೊ ತೆಕ್ಕೆಗೆ ಉಬರ್‌ ಈಟ್ಸ್‌ ಸಂಭವ, ಸ್ವಿಗ್ಗಿ ಹಿಂದಿಕ್ಕಲು ಹೊಸ ಪ್ಲ್ಯಾನ್‌

ಮುಂಬಯಿ: ಉಬರ್‌ ತನ್ನ ಆನ್‌ಲೈನ್‌ ಫುಡ್‌ ಡೆಲಿವರಿ ಸಂಸ್ಥೆಯಾದ ‘ಉಬರ್‌ ಈಟ್ಸ್‌’ ಅನ್ನು ಪ್ರತಿಸ್ಪರ್ಧಿ ‘ಜೊಮಾಟೊ’ಗೆ ಮಾರಾಟ ಮಾಡುವ ಸಾಧ್ಯತೆ ಇದೆ. ಮಾರಾಟದ ಭಾಗವಾಗಿ ಉಬರ್‌ ಈಟ್ಸ್‌ನಲ್ಲಿ ಉಬರ್‌ 100-200 ದಶಲಕ್ಷ ಡಾಲರ್‌ (700-1,400 ಕೋಟಿ ರೂ.) ಹೊಸ ಬಂಡವಾಳ ಹೂಡಿಕೆಯನ್ನು ಮಾಡಲಿದೆ ಎಂದು ವರದಿಯಾಗಿದೆ.
ಒಂದು ವೇಳೆ ಜೊಮಾಟೊ ಜತೆಗೆ ಉಬರ್‌ ಈಟ್ಸ್‌ ವಿಲೀನವಾದರೆ ಆರ್ಡರ್‌ಗಳ ಸಂಖ್ಯೆ ಮತ್ತು ಗಾತ್ರದ ದೃಷ್ಟಿಯಿಂದ ಇನ್ನೊಂದು ಆನ್‌ಲೈನ್‌ ಆಹಾರ ಹಂಚಿಕೆ ಸಂಸ್ಥೆ ‘ಸ್ವಿಗ್ಗಿ’ಯನ್ನೂ ಹಿಂದಿಕ್ಕಿ ಅತಿ ದೊಡ್ಡ ಆನ್‌ಲೈನ್‌ ಫುಡ್‌ ಡೆಲಿವರಿ ಸಂಸ್ಥೆ ಎನ್ನಿಸಲಿದೆ. ಆದರೆ ಒಪ್ಪಂದ ಇನ್ನೂ ಅಂತಿಮವಾಗಿಲ್ಲ.

ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜೊಮಾಟೋ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್‌ ಗೋಯಲ್ ಹೊಸ ಆವೃತ್ತಿಯ ಬಂಡವಾಳ ಹೂಡಿಕೆಯಲ್ಲಿ ಕಂಪನಿ 600 ದಶ ಲಕ್ಷ ಡಾಲರ್‌ (ಸುಮಾರು 4,000 ಕೋಟಿ ರೂ.) ಹೂಡಿಕೆ ಪಡೆದುಕೊಳ್ಳಲಿದೆ ಎಂದು ಹೇಳಿದ್ದರು.
ಸದ್ಯ ಜೊಮಾಟೋ 1.5 ಲಕ್ಷ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಂದ ಪ್ರತಿ ದಿನ 13 ಲಕ್ಷ ಆರ್ಡರ್‌ಗಳು ಗ್ರಾಹಕರಿಗೆ ತಲುಪಿಸುತ್ತಿದೆ. ಆದರೆ ಸ್ವಿಗ್ಗಿಯನ್ನು ಹಿಂದಿಕ್ಕಲು ಜೊಮಾಟೋಗೆ ಸಾಧ್ಯವಾಗಿಲ್ಲ. ಇದೇ ವೇಳೆ 2017ರಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶ ಪಡೆದಿದ್ದರೂ ಉಬರ್‌ ಈಟ್ಸ್‌ ಕಂಪನಿ ಗಮನಾರ್ಹವಾಗಿ ಬೆಳವಣಿಗೆ ಕಂಡಿಲ್ಲ. ಈ ಹಂತದಲ್ಲಿ ಎರಡೂ ಕಂಪನಿಗಳು ಒಟ್ಟಾಗಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆಯಲು ಹೊರಟಿವೆ.

Related posts

‘ಭಾರತದ ವಿರುದ್ಧ ನೇಪಾಳ ಪ್ರಧಾನಿಯ ಅಪ್ರಬುದ್ಧ ರಾಜತಾಂತ್ರಿಕ ನಡೆ’: ಸ್ವಪಕ್ಷದ ಪ್ರಭಾವಿ ನಾಯಕನಿಂದಲೇ ಟೀಕೆ

Times fo Deenabandhu

ಶುರುವಾಗಿದೆ ಆಕ್ಸಿಜನ್‌ ಕೊರತೆ

Times fo Deenabandhu

ಕೇರಳ ಅಂದು ನಂ. 1, ಇಂದು ನಂ. 10; ‘ದೇವರ ನಾಡು’ ಕೊರೊನಾ ಹಿಮ್ಮೆಟ್ಟಿಸಿದ ಕಥೆ

Times fo Deenabandhu