Times of Deenabandhu
  • Home
  • ಮುಖ್ಯಾಂಶಗಳು
  • ನಗ ನಗದುಗಳೊಂದಿಗೆ ಮಾವನ ಮನೆಯಿಂದ ರಾತ್ರೋರಾತ್ರಿ ಪರಾರಿಯಾದ ಮದುಮಗಳು
ಪ್ರಧಾನ ಸುದ್ದಿ ಮುಖ್ಯಾಂಶಗಳು

ನಗ ನಗದುಗಳೊಂದಿಗೆ ಮಾವನ ಮನೆಯಿಂದ ರಾತ್ರೋರಾತ್ರಿ ಪರಾರಿಯಾದ ಮದುಮಗಳು

ಬದೌನ್​ (ಉತ್ತರಪ್ರದೇಶ): ಹೊಸದಾಗಿ ಮದುವೆಯಾಗಿದ್ದ ಮದುಮಗಳು ಗಂಡನ ಮನೆಯವರಿಗೆ ಆಹಾರದಲ್ಲಿ ಮತ್ತು ಬರುವ ಔಷಧ ಬೆರಸಿ ಮನೆಯಲ್ಲಿದ್ದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾಳೆ.

ಬದೌನ್​ ಜಿಲ್ಲೆಯ ಚೋಟಾ ಪರ ಎಂಬಲ್ಲಿ ಘಟನೆ ನಡೆದಿದ್ದು, ಮಾರನೇ ದಿನ ಬೆಳಗ್ಗೆ ಎಚ್ಚರಗೊಂಡ ಮನೆ ಮಂದಿಗೆ ಮದುಮಗಳು ಹಣ ಮತ್ತು ಒಡವೆಗಳೊಂದಿಗೆ ಕಾಣೆಯಾಗಿರುವುದು ಪತ್ತೆಯಾಗಿದೆ.

ಡಿಸೆಂಬರ್​ 9ರಂದು ಅಜಮ್​ಗಢ ಎಂಬಲ್ಲಿನ ರಿಯಾ ಎಂಬುವವಳನ್ನು ಪ್ರವೀಣ್​ ಮದುವೆಯಾಗಿದ್ದರು. ಪ್ರವೀಣ್​ ಕುಟುಂಬದವರು ಈ ಬಗ್ಗೆ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ತಿಳಿಸಿರುವಂತೆ 70 ಸಾವಿರ ನಗದು ಮತ್ತು ಮೂರು ಲಕ್ಷ ರೂಪಾಯಿ ಬೆಲೆ ಬಾಳುವ ಆಭರಣಗಳ ಜತೆ ಆಕೆ ಪರಾರಿಯಾಗಿದ್ದಾಳೆ. ಪೊಲೀಸರು ಈಗ ಮದುವೆಗೆ ಸಂಬಂಧದ ಬಗ್ಗೆ ತಿಳಿಸಿದ ಮಧ್ಯವರ್ತಿ ಟಿಂಕು ಎಂಬುವನನ್ನು ಹುಡುಕುತ್ತಿದ್ದಾರೆ.

ಮದುವೆಗೆ ನಾವು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಅಲ್ಲದೆ ಮಧ್ಯವರ್ತಿ ಟಿಂಕು ಹಣ ಪಡೆದಿದ್ದಾನೆ. ಮಧುಮಗಳ ಮನೆಯವರು ಬಡವರು ಹಾಗಾಗಿ ಒಡವೆ ತಯಾರಿಸಲು ಹಣ ಕೊಡಿ ಎಂದು ತೆಗೆದುಕೊಂಡು ಹೋಗಿದ್ದಾನೆ ಎಂದು ವರನ ತಂದೆ ರಾಮ್​ ತಿಳಿಸಿದ್ದಾರೆ.

ನೂತನ ವರ ಪ್ರವೀಣ್​, ನನ್ನ ಹೆಂಡತಿ ಹೀಗೆ ಮಾಡುತ್ತಾಳೆ ಎಂದು ಕೊಂಡಿರಲಿಲ್ಲ. ಇದರಿಂದ ನಮ್ಮ ಕುಟುಂಬಕ್ಕೆ ಬೇಸರವಾಗಿದೆ. ಹಳ್ಳಿಯಲ್ಲಿ ಮುಖ ತೋರಿಸಲು ಆಗುತ್ತಿಲ್ಲ. ಆಕೆಯನ್ನು ಬಂಧಿಸಿ ಎಂದು ಅಲವತ್ತುಕೊಂಡಿದ್ದಾನೆ.

Related posts

 ಕೋವಿಡ್‌ ಚಿಕಿತ್ಸೆಗೆ ಬಯೊಕಾನ್‌ನಿಂದ Itolizumab ಚುಚ್ಚುಮದ್ದು: ಬೆಲೆ ₹8,000

ಡಿಕೆಶಿಗೆ ಸಿಗ್ತಿಲ್ಲ, ಖರ್ಗೆಗೆ ಬೇಕಿಲ್ಲ, ಸಿದ್ದು ಬಿಡ್ತಿಲ್ಲ..!

Times fo Deenabandhu

ರಾಜ್ಯದಲ್ಲಿ ಮತ್ತೆ ಕೊರೊನಾ ದ್ವಿಶತಕ..!

Times fo Deenabandhu