Times of Deenabandhu
  • Home
  • ಜಿಲ್ಲೆ
  • ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದಿಲ್ಲ.
ಜಿಲ್ಲೆ ಮುಖ್ಯಾಂಶಗಳು ರಾಜಕೀಯ ಶಿವಮೊಗ್ಗ

ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದಿಲ್ಲ.

ತೀರ್ಥಹಳ್ಳಿ: ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದಿಲ್ಲ. ನಾನು ಶಾಸಕ ಸ್ಥಾನದಿಂದಲೆ ಕ್ಷೇತ್ರದ ಅಭಿವೃದ್ಧಿ ಮಾಡುವ ನನ್ನ ಪ್ರಯತ್ನ ನಿರಂತರ ನಡೆಯುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಉಂಬ್ಳೇಬೈಲಿನಲ್ಲಿ ಸುಮಾರು ಎರಡೂವರೆ ಕೋಟಿ ರೂಪಾಯಿಗಳ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಕೇವಲ ಭಾಷಣ ಮಾತಿನಿಂದ ಆಗುವಂತದ್ದಲ್ಲ ಅದೊಂದು ಸಂಕಲ್ಪ ,ಸಂಕಲ್ಪ ಮಾಡಿ ಹೋರಾಟದಿಂದಲೆ ಅಭಿವೃದ್ಧಿ ಸಾದಿಸುವ ಛಲ ನನಗಿದೆ, ಯಾವುದೇ ಕೌಟುಂಬಿಕ ಹಿನ್ನಲೆ ಇಲ್ಲದ ನನ್ನಂತವರಿಗೆ ಜನ ನಾಲ್ಕು ಬಾರಿ ಶಾಸಕ ಸ್ಥಾನದ ಜವಾಬ್ದಾರಿ ಕೊಟ್ಟಿದ್ದಾರೆ. ಅದರ ಸಧ್ಬಳಕೆ ಮಾಡುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ ಎನ್ನುವ ಭರವಸೆ ನೀಡಿದರು.

ತೀರ್ಥಹಳ್ಳಿ ಕ್ಷೇತ್ರ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ನೂರಾರು ಕಿ ಮೀ ದೂರವಿದ್ದು, ಒಂದು ಭಾಗದ ಅಭಿವೃದ್ಧಿ ಯೋಚಿಸಿದರೆ ಮತ್ತೊಂದು ಭಾಗ ಕುಂಠಿತವಾಗುತ್ತದೆ. ಪೂರ್ಣ ಕ್ಷೇತ್ರದ ಕಲ್ಪನೆ ಇಟ್ಟುಕೊಂಡು ಅಭಿವೃದ್ಧಿ ಸಾಧಿಸುವುದು ಒಂದು ದೊಡ್ಡ ಚಾಲೆಂಜ್ ಆಗಿದ್ದು, ಸ್ಥಿರ, ಸದೃಢ ಸರ್ಕಾರ ಬಂದಿದೆ ಮುಖ್ಯಮಂತ್ರಿ ನಮ್ಮ ಜಿಲ್ಲೆಯವರೇ ಎನ್ನುವುದು ಸಮಾಧಾನಕರ ಸಂಗತಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹೇಮಾವತಿ, ಶಿವನಂಜಪ್ಪ, ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು.

Related posts

ಬಾಲ್ಯದಲ್ಲಿ ರೂಢಿಸಿಕೊಂಡ ಕ್ರೀಡಾಸಕ್ತಿಯಿಂದ ಉತ್ತಮ ಸ್ಥಾನ

Times fo Deenabandhu

ಕುವೆಂಪು ವಿವಿಯಲ್ಲಿ ಕ್ರೀಡೋತ್ಸವ: ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ದಕ್ಷಿಣ ವಲಯ ಅಂತರ್ ವಿವಿ ಖೊ-ಖೊ ಪಂದ್ಯಾವಳಿಗೆ ಕುಲಪತಿಗಳಿಂದ ಚಾಲನೆ….

Times fo Deenabandhu

ವಿವಾದಕ್ಕೆ ತಿರುಗಿದ ತಿರುಪತಿ ಆಸ್ತಿ ಹರಾಜು ನಿರ್ಧಾರ, ಆಂಧ್ರ ಪ್ರದೇಶ ಸರಕಾರದಿಂದ ತಡೆ