Times of Deenabandhu
ಮುಖ್ಯಾಂಶಗಳು ವಿದೇಶ

ಅಮೆರಿಕ ವಿರುದ್ಧ ಭಾರತ ಕೆಂಡಾಮಂಡಲ

ನವದೆಹಲಿ: ವಿವಾದಾಸ್ಪದ ಪೌರತ್ವ ತಿದ್ದುಪಡಿ ಮಸೂದೆಯನ್ನು ಟೀಕಿಸಿದ್ದ ಯುಎಸ್​​ ಕಮಿಷನ್ ಫಾರ್ ಇಂಟರ್​ನ್ಯಾಷನಲ್ ರಿಲಿಜಿಯಸ್​ ಫ್ರೀಡಂ(USCIRF) ಹೇಳಿಕೆಗೆ ಭಾರತ ತಿರುಗೇಟು ಕೊಟ್ಟಿದ್ದು, ಅಮೆರಿಕದ ವಾದ ಅಸಮಂಜಸ ಮತ್ತು ಅವಾಸ್ತವದಿಂದ ಕೂಡಿದೆ ಆಕ್ಷೇಪ ವ್ಯಕ್ತಪಡಿಸಿದೆ.

ಕಿರುಕುಳಕ್ಕೆ ಒಳಗಾಗಿ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರ ಕಷ್ಟಗಳನ್ನು ನೀಗಿಸಲು ಮತ್ತು ಅವರಿಗೆ ಮಾನವ ಹಕ್ಕುಗಳನ್ನು ಕಲ್ಪಿಸುವುದು ಮಸೂದೆಯ ಉದ್ದೇಶ. ಅಂತಹ ಮಸೂದೆಯನ್ನು ಸ್ವಾಗತಿಸಬೇಕೇ ವಿನಃ ಟೀಕಿಸುವುದು ಸಮಂಜಸವಲ್ಲ.

ಎನ್​ಆರ್​ಸಿ ಮತ್ತು ಪೌರತ್ವ ಮಸೂದೆಯಿಂದ ಯಾರ ಪೌರತ್ವಕ್ಕೂ ಕುತ್ತು ಬರುವುದಿಲ್ಲ. ಪೌರತ್ವ ಕಲ್ಪಿಸುವ ವಿಧಾನಗಳನ್ನು ಪರಿಷ್ಕರಿಸುವ ಹಕ್ಕು ಅಮೆರಿಕ ಸೇರಿ ಎಲ್ಲ ರಾಷ್ಟ್ರಗಳೂ ಹೊಂದಿವೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಮಂಗಳವಾರ ತಿರುಗೇಟು ಕೊಟ್ಟಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಪಾಸಾದರೆ ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಭಾರತದ ಪೌರತ್ವ ದೊರೆಯಲಿದೆ. ಇಂತಹ ಮಸೂದೆಯನ್ನು ತಪ್ಪು ದಾರಿಯಲ್ಲಿ ಸಾಗುವ ಪ್ರಮಾದಕಾರಿ ನಡೆಗೆ ಎಡೆಮಾಡಿಕೊಡುತ್ತದೆ ಎಂದು USCIRF ಟೀಕಿಸಿತ್ತು

Related posts

 ಘರ್ಷಣೆ ನಿಲ್ಲಿಸಿ ಗಡಿಯಿಂದ ಹಿಂದೆ ಸರಿದ ಭಾರತ-ಚೀನಾ ಸೇನೆ

‘ಮುತ್ತಿನ ರಾಶಿಗೆ ಮುತ್ತ ಕೊಟ್ಟಿತಲೇ ಪರಾಕ್​’: ಹಾವನೂರು ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿದ ಗೊರವಪ್ಪ ಹೊನ್ನಪ್ಪ ಬಿಲ್ಲರ

Times fo Deenabandhu

ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಮುಂದೂಡಿಕೆ

Times fo Deenabandhu