Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ ಶಿಕ್ಷಣ

ವಾರಕ್ಕೆ ಒಂದು ದಿನ ಬ್ಯಾಗ್‌ ಲೆಸ್‌ ಡೇ!

ಸಿದ್ದಾಪುರ (ಉತ್ತರ ಕನ್ನಡ): ಮಕ್ಕಳಿಗೆ ಗುಣಾತ್ಮಕ ಶಿಕ್ಷ ಣ ನೀಡುವುದು ನಮ್ಮ ಆದ್ಯತೆಯಾಗಿದೆ, ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ವಾರಕ್ಕೆ ಒಂದು ದಿನ ಬ್ಯಾಗ್‌ಲೆಸ್‌ ದಿನ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷ ಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಿದ್ದಾಪುರ ತಾಲೂಕಿನ ಹೂಡ್ಲಮನೆ ಶಾಲೆಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ವಿಪರೀತ ಭಾರವಾಗಿರುವ ಮಕ್ಕಳ ಶಾಲೆಯ ಬ್ಯಾಗ್‌ ತೂಕ ಕಡಿಮೆ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಎಂದರು. ಈಗಾಗಲೇ ಈ ಬಗ್ಗೆ ಎಚ್‌.ಡಿ.ಕೋಟೆ ತಾಲೂಕಿನ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ನ ಗ್ರಾಮ ಯೋಜನೆಯ ಕರಡು ಪ್ರತಿ ತರಿಸಿಕೊಂಡಿದ್ದೇವೆ. ಕೆಲ ಬದಲಾವಣೆಯೊಂದಿಗೆ ಇದನ್ನು ಜಾರಿಗೆ ತರಲಾಗುವುದು. ಬ್ಯಾಗ್‌ಲೆಸ್‌ ದಿನ ಪಠ್ಯೇತರ ಚಟುವಟಿಕೆ ಮಾತ್ರ ಇರುತ್ತದೆ. ಇದರಿಂದ ಮಕ್ಕಳಿಗೆ ಮೌಲ್ಯ ತುಂಬಲು ಅನುಕೂಲವಾಗುತ್ತದೆ’ ಎಂದು ಸುರೇಶ್ ಕುಮಾರ್ ತಿಳಿಸಿದರು.

ವಾಟರ್‌ ಬೆಲ್‌: ‘ಮಕ್ಕಳು ಇತ್ತೀಚೆಗೆ ನೀರು ಕುಡಿಯುತ್ತಿಲ್ಲ. ಇದರಿಂದ ಅವರ ಶಕ್ತಿ ಕುಂಠಿತವಾಗುತ್ತಿದೆ. ಹೀಗಾಗಿ ಪ್ರತಿ ಎರಡು ಪಿರಿಯಡ್‌ ನಂತರ ಒಮ್ಮೆ ಬೆಲ್‌ ಹೊಡೆಯಲಾಗುವುದು. ಆ ಸಮಯ ಮಕ್ಕಳು ನೀರು ಕುಡಿಯಬೇಕು. ಪ್ರತಿ ಶಾಲೆಯಲ್ಲೂ ಶುದ್ಧ ನೀರು ಸಿಗುವ ವ್ಯವಸ್ಥೆ ಮಾಡಲಾಗುವುದು’ ಎಂದು ಸುರೇಶ್ ಕುಮಾರ್ ತಿಳಿಸಿದರು.

‘7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ. ಈ ಬಾರಿ ಅದು ಪ್ರಾಯೋಗಿಕವಾಗಿರುತ್ತದೆ. ಇನ್ನು ಒಂದೆರಡು ತಿಂಗಳಲ್ಲಿ ಸಮಗ್ರ ಚಿತ್ರಣ ಸಿಗಲಿದೆ. ಈ ಬಾರಿ 10,500 ಶಿಕ್ಷಕರ ನೇಮಕಕ್ಕೆ ತೀರ್ಮಾನಿಸಲಾಗಿತ್ತು. ಆದರೆ ಕೇವಲ 2500 ಜನ ಅರ್ಹತೆಯುಳ್ಳವರು ಸಿಕ್ಕಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಹುದ್ದೆ ತುಂಬಲಾಗುವುದು’ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

Related posts

ಈ ದೇಗುಲದಲ್ಲಿರುವ ಕಂಬಗಳನ್ನು ಇದುವರೆಗೆ ಯಾರಿಗೂ ಸರಿಯಾಗಿ ಲೆಕ್ಕ ಹಾಕಲು ಸಾಧ್ಯವಾಗಿಲ್ಲ…!

Times fo Deenabandhu

ಪಡಿತರ ಕಿಟ್ ಹಂಚಲು ಕಮಿಷನ್ ಕೇಳಿದ ತಿಪಟೂರು ಶಾಸಕ, ಆಡಿಯೋ ವೈರಲ್‌

Times fo Deenabandhu

ಎನ್ ಕೌಂಟರ್ ವೀರ ವಿ.ಸಿ.ಸಜ್ಜನ್ ಯಾರು? ಪಶುವೈದ್ಯೆ ಗ್ಯಾಂಗ್ ರೇಪ್ ಮತ್ತು ಕೊಲೆ ಆರೋಪಿಗಳ ಎನ್ ಕೌಂಟರ್ : ದೇಶೆದೆಲ್ಲೆಡೆ ಮುಗಿಲು ಮುಟ್ಟಿದ ಸಂಭ್ರಮ

Times fo Deenabandhu