Times of Deenabandhu
  • Home
  • ಮುಖ್ಯಾಂಶಗಳು
  • ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ ಶೀಘ್ರ ವಿಶೇಷ ನ್ಯಾಯಾಲಯ: ಮಾಧುಸ್ವಾಮಿ
ಮುಖ್ಯಾಂಶಗಳು

ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ ಶೀಘ್ರ ವಿಶೇಷ ನ್ಯಾಯಾಲಯ: ಮಾಧುಸ್ವಾಮಿ

ಪುತ್ತೂರು : ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಪೋಕ್ಸೊ ಕಾಯಿದೆ ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

“ದೇಶದಲ್ಲಿ ಪ್ರತಿದಿನ ನೂರಾರು ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬ ವರದಿಯಿದೆ. ಹೀಗಿರುವಾಗ ಐಪಿಸಿ, ಸಿಆರ್‌ಪಿಸಿಯಡಿ ಪ್ರಕರಣಗಳ ತ್ವರಿತ ವಿಲೇವಾರಿ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ಉದ್ದೇಶದಿಂದ ಪೊಕ್ಸೋ ಕಾಯಿದೆಯಂತಹ ಕಠಿಣ ಕಾನೂನು ಜಾರಿಗೆ ಬಂದಿದೆ. ತ್ವರಿತವಾಗಿ ನ್ಯಾಯ ವಿಚಾರಣೆ ನಡೆದು ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆ ಎಂಬ ಖಾತರಿ ಇದ್ದಾಗ ಜನ ಅದರ ಮೇಲೆ ವಿಶ್ವಾಸವಿಡುತ್ತಾರೆ. ಯಾವಾಗ ಈ ವಿಶ್ವಾಸ ಇರುವುದಿಲ್ಲವೋ ಆಗ ಆರೋಪಿಗಳು ಎನ್‌ಕೌಂಟರ್‌ನಲ್ಲಿ ಸತ್ತಾಗ ಅದನ್ನು ಸಂಭ್ರಮಿಸುತ್ತಾರೆ. ಈ ಮೂಲಕ ನ್ಯಾಯ ಸಿಕ್ಕಿತು ಎಂದುಕೊಳ್ಳುತ್ತಾರೆ. ಇಂತಹ ಸ್ಥಿತಿಗೆ ನಾವು ಇಂದು ತಲುಪಿದ್ದೇವೆ,” ಎಂದರು.

ಅನೇಕ ಪ್ರಕರಣಗಳಲ್ಲಿ ಒಂದು ಸಾವಿರ ರೂ. ದಂಡ ಕಟ್ಟಿದರೆ ಸಾಕು ಎಂಬ ಉಲ್ಲೇಖವಿದೆ. ಹೀಗಾಗಿ ಅನೇಕ ಪ್ರಕರಣಗಳು ದಂಡ ಪಾವತಿಗೆ ಸೀಮಿತವಾಗಿವೆ. ಭಾರತೀಯ ದಂಡ ಸಂಹಿತೆಯಲ್ಲಿರುವ ಇಂತಹ ಕೆಲವು ಸೆಕ್ಷನ್‌ಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಮಾಧುಸ್ವಾಮಿ ಹೇಳಿದರು.

Related posts

55 ಎಸೆತಗಳಲ್ಲಿ 158ರನ್: ಮತ್ತೆ ಗರ್ಜಿಸಿದ ಹಾರ್ದಿಕ್‌ ಪಾಂಡ್ಯ

ಶಿವಮೊಗ್ಗದಲ್ಲಿ ಭರ್ಜರಿ ಆಫರ್‌: ಸಿಮ್‌ ಕಾರ್ಡ್‌ ಕೊಂಡರೆ ಕೇಜಿ ಈರುಳ್ಳಿ ಫ್ರೀ!

Times fo Deenabandhu

ನೂತನ ಸಚಿವರದ್ದು ಮತ್ತೆ ಕಾಯುವ ಸರದಿ: ಸೋಮವಾರ ಖಾತೆ ಹಂಚಿಕೆ ಸಾಧ್ಯತೆ?

Times fo Deenabandhu