Times of Deenabandhu
ಮುಖ್ಯಾಂಶಗಳು ಸಿನಿಮಾ

ಬಾಲಿವುಡ್‌ನಲ್ಲಿ ‘ಕಿಕ್’ ಕೊಡಲಿರುವ ಕನ್ನಡದ ಹಾಟ್ ತಾರೆ

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಿನಿಮಾದಲ್ಲಿ ಕನ್ನಡದ ಹುಡುಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಈ ಸಿನಿಮಾಗೆ ‘ಕಿಕ್‌ 2’ ಎಂದು ಹೆಸರಿಡಲಾಗಿದೆ. ಮೂಲತಃ ಕರ್ನಾಟಕದವರಾದ ಪೂಜಾ, ಈಗಾಗಲೇ ದಕ್ಷಿಣ ಭಾರತ ಮತ್ತು ಬಾಲಿವುಡ್‌ನಲ್ಲಿ ಸೆನ್ಸೇಷನ್‌ ಸೃಷ್ಟಿಸಿದ್ದಾರೆ. ಸಾಕಷ್ಟು ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ.

ಈಗ ಸಲ್ಮಾನ್‌ ಖಾನ್‌ ಸಿನಿಮಾ ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ನಿರ್ಮಾಪಕ ಸಾಜಿದ್‌ ‘ಕಿಕ್‌ 2’ ಚಿತ್ರಕ್ಕೆ ನಿರ್ಮಾಪಕ ಮತ್ತು ನಿರ್ದೇಶಕ. ಈ ಹಿಂದೆ ಇವರೇ ನಿರ್ಮಿಸಿದ್ದ ‘ಹೌಸ್‌ಫುಲ್‌ 4’ ಸಿನಿಮಾದಲ್ಲೂ ಪೂಜಾ ನಟಿಸಿದ್ದರು. ಅದು ಬಾಕ್ಸ್‌ ಆಫೀಸ್‌ನಲ್ಲೂಹಿಟ್‌ ಕೂಡ ಆಗಿತ್ತು. ಇದೇ ಸಂದರ್ಭದಲ್ಲೇ ಇವರ ಕಾಲ್‌ಶೀಟ್‌ ಅನ್ನು ಸಾಜಿದ್‌ ಪಡೆದಿದ್ದರು. ಅದನ್ನು ಹೊಸ ಸಿನಿಮಾದಲ್ಲಿ ಬಳಸಿಕೊಳ್ಳಲಿದ್ದಾರಂತೆ ನಿರ್ದೇಶಕರು.

ಬಾಲಿವುಡ್‌ನಲ್ಲಿ ಕಿಕ್ ಕೊಡಲು ಮುಂದಾದ ಪೂಜಾ
ಸದ್ಯ ತಮಿಳು ಮತ್ತು ತೆಲುಗಿನಲ್ಲಿ ಹೆಗ್ಡೆ ಬಿಝಿ ಆಗಿದ್ದಾರೆ. ಅಲ್ಲುಅರ್ಜುನ್‌ ಜತೆಗಿನ ‘ಅಲಾ ವೆಂಕಟಪುರಂಲೋ’ ಮುಂದಿನ ವರ್ಷದ ಆರಂಭದಲ್ಲೇ ತೆರೆಗೆ ಬರಲಿದೆ. ಪ್ರಭಾಸ್‌ ಜತೆ ‘ಜಾನ್‌’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಖಿಲ… ಅಕ್ಕಿನೇನಿ ಸಿನಿಮಾಕ್ಕೂ ಇವರೇ ಹೀರೋಯಿನ್‌. ಸಲ್ಮಾನ್‌ ‘ದಬಾಂಗ್‌ 3’ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಜತೆಗೆ ‘ರಾಧೆ’ ಸಿನಿಮಾದ ಶೂಟಿಂಗ್‌ನಲ್ಲೂ ಬಿಝಿ ಆಗಿದ್ದಾರೆ. ಈ ನಡುವೆ ಕಿಕ್‌ 2 ಸಿನಿಮಾಗೆ ಚಾಲನೆ ಸಿಗುತ್ತಿದೆ.

ಕನ್ನಡದ ಬೆಡಗಿ ಪೂಜಾ ಹೆಗ್ಡೆ ಅವರದು ಮುಖ್ಯ ಪಾತ್ರವಾದರೆ ಕಿಕ್ 2ನಲ್ಲಿ ಇನ್ನೂ ಒಬ್ಬ ಬೆಡಗಿಯರು ಇರುತ್ತಾರೆ. ಕಿಕ್ ಭಾಗ 1ರಲ್ಲಿ ಅಭಿನಯಿಸಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಸಹ ಸಿನಿಮಾದಲ್ಲಿ ಇರುತ್ತಾರೆ ಎಂದಿವೆ ಮೂಲಗಳು.
ಅಲ್ಲೂ ಅರ್ಜುನ್ ನಾಯಕನಾಗಿರುವ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪಕ್ಕಾ ಮನರಂಜನಾತ್ಮಕ ಸಿನಿಮಾ ಅಲಾ ವೈಕುಂಠಪುರಂಲೋ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಪೂಜಾ ಹೆಗ್ಡೆ. ಇನ್ನು ಕಿಕ್ 2 ಸಿನಿಮಾ 2021ರ ಈದ್ ಹಬ್ಬಕ್ಕೆ ತೆರೆಕಾಣಲಿದೆ.

ಅಲ್ಲು ಅರ್ಜುನ್ ಸಿನಿಮಾ ಹೊರತುಪಡಿಸಿದರೆ ಪೂಜಾ ಹೆಗ್ಡೆ ಕೈಯಲ್ಲಿ ಪ್ರಸ್ತುತ ಯಾವುದೇ ಸಿನಿಮಾಗಳೂ ಇಲ್ಲ. ನಿಧಾನಕ್ಕೆ ಪೂಜಾ ಹೆಗ್ಡೆ ಜಾಗವನ್ನು ನಟಿ ರಶ್ಮಿಕಾ ಮಂದಣ್ಣ ಆಕ್ರಮಿಸುತ್ತಿದ್ದಾರೆ ಎಂಬ ಮಾತುಗಳು ಟಾಲಿವುಡ್‌ನಲ್ಲಿ ಕೇಳಿಬರುತ್ತಿವೆ.

Related posts

ವಿರಾಟ್​ ಕೊಹ್ಲಿಗೆ ಎಲ್ಲ ಉಪಾಯಗಳನ್ನು ಧೋನಿ ತಿಳಿಸಿರುತ್ತಾರೆ; ಎಂದಿದ್ದೇಕೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ?

Times fo Deenabandhu

 ಕೋವಿಡ್‌ ವಾರಿಯರ್ಸ್‌ಗೆ ರಿಸ್ಕ್‌ ಭತ್ಯೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗ್ರೇಸ್‌ ಮಾರ್ಕ್ಸ್‌!

 ಯಾವ ದೇಶದಲ್ಲಿ ಎಷ್ಟಿದೆ ಸೋಂಕು, ಹೇಗಿದೆ ಪರಿಸ್ಥಿತಿ?