Times of Deenabandhu
ಜಿಲ್ಲೆ ಶಿವಮೊಗ್ಗ

ಇಂದಿನಿಂದ ಜನಪದ ಕಲೆಗಳ ಕಲಿಕಾ ಶಿಬಿರ

ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತು ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಮತ್ತು ಕೇಂದ್ರ ಕಾರಾಗೃಹ ಇವರ ಸಹಕಾರದಲ್ಲಿ ಡಿಸೆಂಬರ್ ೩ ರಿಂದ ಐದು ದಿನಗಳ ಕಾಲ ಬಂದಿ ನಿವಾಸಿಗಳಿಗೆ ಜನಪದ ಕಲೆಗಳ ಕಲಿಕಾ ಶಿಬಿರದ ಜೊತೆಗೆ ಜನಪದ ಸಂಭ್ರಮ ಕಾರ್ಯಕ್ರಮ ರೂಪಿಸಲಾಗಿದೆ. ಬಂದಿ ನಿವಾಸಿಗಳಲ್ಲಿರುವ ಕಲಾವಿದ ಮನಸ್ಸುಗಳನ್ನು ಗುರುತಿಸಿ ಅವರಿಗೆ ಅವರ ಆಸಕ್ತಿಯ ಜನಪದ ಕಲೆಗಳನ್ನು ಕಲಿಸುವುದು, ಮುಂದೆ ಆ ಕಲಾ ಪ್ರದರ್ಶನಕ್ಕೆ ಸಾರ್ವಜನಿಕ ವೇದಿಕೆ ಕಲ್ಪಿಸುವುದು ಆಯೋಜಕರ ಆಶಯವಾಗಿದೆ. ಅಪರೂಪವಾದ ಆಲೋಚನೆಗೆ ವ್ಯಾಪಕ ಬೆಂಬಲ ದೊರೆತಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಡಿ. ೩ ರಂದು ಮಂಗಳವಾರ ಬೆಳಿಗ್ಗೆ ೧೦-೩೦ ಕ್ಕೆ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಲಿದ್ದಾರೆ. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಪಿ. ರಂಗನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಾಯಕ ಅಧೀಕ್ಷಕರಾದ ಶಿವಾನಂದ ಆರ್. ರಾವ್ ಅವರು ನಮ್ಮೊಂದಿಗಿರುವರು.

ತರಬೇತಿ ನೀಡಲು ಜನಪದ ಕಲಾವಿದರಾದ ರಾಮನಗರ ಜಾನಪದ ಲೋಕದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಣ್‌ರಾವ್ ಬೋಡ್ಕೆ ಮತ್ತು ತಂಡ, ರೇವಣಪ್ಪ ಎಂ. ಆರ್., ಚಂದ್ರಶೇಖರ ಚಕ್ರಸಾಲಿ, ರಾಜಾನಾಯ್ಕ್ ಅವರು ಭಾಗವಹಿಸಲಿದ್ದಾರೆ. ಅರ್ಥಪೂರ್ಣ ತರಬೇತಿಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪರಿಷತ್ತು ಪ್ರಧಾನಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಿ: ಸುಜಾತ ಕೃಷ್ಣಪ್ಪ

ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ – ಮಾದರಿ ಜಿಲ್ಲೆಯಾಗಿ ಶಿವಮೊಗ್ಗ ಅಭಿವೃದ್ಧಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Times fo Deenabandhu

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ’ಟೆಕ್ನೋಫಿಯಾ’

Times fo Deenabandhu